Deodhar Trophy: ಮಯಾಂಕ್‌ ಅಗರ್‌ವಾಲ್‌ ಮತ್ತೊಂದು ಫಿಫ್ಟಿ. ಫೈನಲ್‌ಗೆ ದಕ್ಷಿಣ ವಲಯ ಲಗ್ಗೆ..!

By Kannadaprabha News  |  First Published Jul 31, 2023, 10:55 AM IST

ದೇವಧರ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ಫೈನಲ್‌ಗೆ ಲಗ್ಗೆ
ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದ ಮಯಾಂಕ್‌ ಅಗರ್‌ವಾಲ್ ಪಡೆ
ಆಕರ್ಷಕ ಅರ್ಧಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್‌, ಸಾಯಿ ಸುದರ್ಶನ್


ಪುದುಚೇರಿ(ಜು.31): ದೇವಧರ್‌ ಟ್ರೋಫಿ ಲಿಸ್ಟ್‌ ‘ಎ’ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಪೂರ್ವ ವಲಯವನ್ನು 5 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ವಲಯ ಫೈನಲ್‌ ಪ್ರವೇಶಿಸಿದೆ. ಆಲ್ರೌಂಡ್‌ ಪ್ರದರ್ಶನ ತೋರಿದ ಮಯಾಂಕ್ ಅಗರ್‌ವಾಲ್‌ ಪಡೆ ಸತತ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಪೂರ್ವ ವಲಯ 46 ಓವರಲ್ಲಿ 229 ರನ್‌ಗೆ ಆಲೌಟ್‌ ಆಯಿತು. ವಿರಾಟ್‌ ಸಿಂಗ್‌ 49, ಸುಬ್ರಾನ್ಶು ಸೇನಾಪತಿ 44 ಹಾಗೂ ಕೊನೆಯಲ್ಲಿ ಆಕಾಶ್ ದೀಪ್‌ 26 ಎಸೆತದಲ್ಲಿ 44, ಮುಖ್ತರ್‌ ಹುಸೇನ್‌ 22 ಎಸೆತದಲ್ಲಿ 33 ರನ್‌ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ದಕ್ಷಿಣದ ಪರ ಕೌಶಿಕ್‌ ಹಾಗೂ ಸಾಯಿ ಕಿಶೋರ್‌ ತಲಾ 3, ವಿದ್ವತ್‌ 2 ವಿಕೆಟ್‌ ಕಿತ್ತರು.

Latest Videos

undefined

ದಕ್ಷಿಣ ವಲಯಕ್ಕೆ ಮಯಾಂಕ್‌ ಹಾಗೂ ಸಾಯಿ ಸುದರ್ಶನ್‌ರ ಅರ್ಧಶತಕಗಳು ನೆರವಾದವು. ಮಯಾಂಕ್‌ 88 ಎಸೆತದಲ್ಲಿ 84, ಸುದರ್ಶನ್‌ 53 ರನ್‌ ಗಳಿಸಿದರು. 44.2 ಓವರಲ್ಲಿ ತಂಡ ದಡ ಸೇರಿತು. ದಕ್ಷಿಣ ವಲಯಕ್ಕೆ ರೌಂಡ್‌ ರಾಬಿನ್‌ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಆ.1ರಂದು ಕೇಂದ್ರ ವಲಯವನ್ನು ಎದುರಿಸಲಿದೆ. ಫೈನಲ್‌ಗೇರಲು ಪಶ್ಚಿಮ ಹಾಗೂ ಪೂರ್ವ ವಲಯಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಆ.1ರಂದು ನಡೆಯಲಿರುವ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಆ.3ರಂದು ದಕ್ಷಿಣ ವಲಯ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ.

ವಿಶ್ವಕಪ್‌ ಆಡಿಷನ್‌ನಲ್ಲಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್‌ ಫೇಲ್‌..!

ಸ್ಕೋರ್‌: ಪೂರ್ವ ವಲಯ 46 ಓವರಲ್ಲಿ 229/10(ವಿರಾಟ್‌ 49, ಸುಬ್ರಾನ್ಶು 44, ಸಾಯಿಕಿಶೋರ್‌ 3-45, ಕೌಶಿಕ್‌ 3-37)

ದಕ್ಷಿಣ ವಲಯ 44.2 ಓವರಲ್ಲಿ 230/5(ಮಯಾಂಕ್‌ 84, ಸಾಯಿ ಸುದರ್ಶನ್‌ 53, ಅವಿನವ್‌ 2-58)

ಜೆರ್ಸಿ ಸೈಜ್‌ ವ್ಯತ್ಯಾಸ: ಸ್ಯಾಮ್ಸನ್‌ ಜೆರ್ಸಿ ತೊಟ್ಟು ಆಡಿದ ಸೂರ್ಯ!

ಬಾರ್ಬಡೋಸ್‌: ವಿಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್‌ ತಮ್ಮ ಸಹ ಆಟಗಾರ ಸಂಜು ಸ್ಯಾಮ್ಸನ್‌ರ ಜೆರ್ಸಿ ತೊಟ್ಟು ಏಕೆ ಆಡುತ್ತಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆದಿತ್ತು. ಪಂದ್ಯದ ಬಳಿಕ ಇದಕ್ಕೆ ಉತ್ತರ ಸಿಕ್ಕಿದೆ. 

ತಂಡದ ಹೊರಗಿದ್ದರೂ ಕಮಿಟ್‌ಮೆಂಟ್‌ಗೆ ಸಲಾಂ, ಬ್ರೇಕ್ ವೇಳೆ ಆಟಗಾರರಿಗೆ ನೀರು ತಂದುಕೊಟ್ಟ ಕೊಹ್ಲಿ!

ಸೂರ್ಯಕುಮಾರ್‌ಗೆ ‘ಎಲ್‌(ಲಾರ್ಜ್‌)’ ಸೈಜಿನ ಜೆರ್ಸಿ ಬದಲು ‘ಎಂ(ಮೀಡಿಯಂ)’ ಸೈಜ್‌ ಜೆರ್ಸಿ ನೀಡಲಾಗಿತ್ತಂತೆ. ಸರಿಯಾದ ಸೈಜ್‌ನ ಜೆರ್ಸಿ ತರಿಸುವುದಾಗಿ ತಂಡದ ವ್ಯವಸ್ಥಾಪಕರು ತಿಳಿಸಿದರೂ, ಸಮಯಕ್ಕೆ ಸರಿಯಾಗಿ ಜೆರ್ಸಿ ಬಾರದ ಕಾರಣ ಸ್ಯಾಮ್ಸನ್‌ರ ಜೆರ್ಸಿ ತೊಟ್ಟು ಸೂರ್ಯ ಕಣಕ್ಕಿಳಿಯಬೇಕಾಯಿತು ಎಂದು ತಿಳಿದುಬಂದಿದೆ.

click me!