ದೆಹಲಿಯ ವಿಪರೀತ ವಾಯುಮಾಲಿನ್ಯದಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತನ್ನ ಅಭ್ಯಾಸ ರದ್ದು ಮಾಡಿದೆ. ಆಟಗಾರರ ಸುರಕ್ಷತೆ ದೃಷ್ಟಿಯಿಂದ ಅಭ್ಯಾಸ ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇ ದೆಹಲಿ ಪಂದ್ಯಗಳನ್ನು ಸ್ಥಳಾಂತರ ಮಾಡಲು ಒತ್ತಾಯ ಕೇಳಿಬಂದಿದೆ. ಈ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ(ನ.04) ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಹಲವರಲ್ಲಿ ಉಸಿರಾಟದ ಸಮಸ್ಯೆ, ಆಮ್ಲಜನಕ ಕೊರತೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ನವೆಂಬರ್ 6 ರಂದು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಉಭಯ ತಂಡಗಳು ದೆಹಲಿಯಲ್ಲಿ ಬೀಡುಬಿಟ್ಟಿದೆ. ಆದರೆ ವಿಪರೀತ ವಾಯು ಮಾಲಿನ್ಯದ ಕಾರಣ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತನ್ನ ಅಭ್ಯಾಸ ಪಂದ್ಯವನ್ನು ರದ್ದು ಮಾಡಿದೆ. ಕೆಲ ಆಟಗಾರರು ದಿಲ್ಲಿ ವಾಯುವಿನಿಂದ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿಯಾಗಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಅಭ್ಯಾಸವನ್ನು ರದ್ದು ಮಾಡಿದೆ. ಇದರ ಬೆನ್ನಲ್ಲೇ ದೆಹಲಿಯ ಎಲ್ಲಾ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯ ಕೇಳಿಬಂದಿದೆ. ಈ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದೆ.
ದೆಹಲಿ ವಾಯು ಗುಣಮಟ್ಟ ಪಾತಾಳಕ್ಕೆ ಕುಸಿದಿದೆ. ಬಹುತೇಕ ದೆಹಲಿಯಲ್ಲಿ ಧೂಳು ಹಾಗೂ ಹೊಗೆ ಆವರಿಸಿಕೊಂಡಿದೆ. ಇದರಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತನ್ನ ಅಭ್ಯಾಸ ರದ್ದು ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ದೆಹಲಿ ಮಾಲಿನ್ಯದ ವಾತಾವರಣದಿಂದ ಉಭಯ ತಂಡಗಳು ಅಭ್ಯಾಸ ಮೊಟಕುಗೊಳಿಸಿದೆ. ಆದರೆ ಪಂದ್ಯ ಸ್ಥಳಾಂತರ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ನಿಗದಿಯಂತೆ ದೆಹಲಿಯಲ್ಲಿ ಪಂದ್ಯ ನಡೆಯಲಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ಪಾಕ್ ಹಿಂದೂಗಳ ಬಗ್ಗೆಯೂ ಮಾತನಾಡಿ, ಇರ್ಫಾನ್ ಪಠಾಣ್ ಗಾಜಾ ಟ್ವೀಟ್‌ಗೆ ಕನೇರಿಯಾ ರಿಪ್ಲೈ!
ಬಾಂಗ್ಲಾದೇಶ ಈಗಾಗಲೇ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಶ್ರೀಲಂಕಾದ ಸೆಮಿಫೈನಲ್ ಆಸೆ ಬಹುತೇಕ ಕಮರಿಹೋಗಿದೆ. ಇನ್ನೊಂದು ಸೋಲು, ಲಂಕಾ ತಂಡವನ್ನೂ ವಿಶ್ವಕಪ್ ಟೂರ್ನಿಯಿಂದ ಹೊರದಬ್ಬಲಿದೆ. ಉಭಯ ತಂಡಗಳು ಉತ್ತಮ ಲಯದಲ್ಲಿಲ್ಲ. ಶ್ರೀಲಂಕಾ ತಂಡ ಭಾರತ ವಿರುದ್ಧ ಹೀನಾಯ ಸೋಲು ಕಂಡಿತ್ತು. ಕೇವಲ 55 ರನ್‌ಗೆ ಆಲೌಟ್ ಆಗಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದೀಗ ಇನ್ನುಳಿದಿರುವ ಪಂದ್ಯದಲ್ಲಿ ಗೆದ್ದು ಅದೃಷ್ಠ ಪರೀಕ್ಷೆಗೆ ಮುಂದಾಗಿರುವ ಲಂಕಾ ಹಾಗೂ ಬಾಂಗ್ಲಾ ತಂಡಕ್ಕೆ ಇದೀಗ ವಾಯು ಮಾಲಿನ್ಯದ ಸಮಸ್ಯೆ ಎದುರಾಗಿದೆ.
ದೆಹಲಿಯಲ್ಲಿ ನವೆಂಬರ್ 6 ರಂದು ಆಯೋಜನೆಗೊಂಡಿರುವ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಮಾತ್ರ ಬಾಕಿ ಇದೆ. ಇನ್ನುಳಿದ ಪಂದ್ಯಗಳು ಇತರ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಆದರೆ ದೆಹಲಿಯ ವಾಯು ಗುಣಟ್ಟ ಸೂಚ್ಯಂಕ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಾರಣ ಆತಂಕ ಮನೆ ಮಾಡಿದೆ.
'ಪ್ರತಿ ಬಾಲ್‌ಗೂ....': ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ..!