ರಚಿನ್ ರವೀಂದ್ರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು(ನ.04): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಲ್ರೌಂಡರ್, ಬೆಂಗಳೂರು ಮೂಲದ ರಚಿನ್ ರವೀಂದ್ರ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇದೀಗ ಪಾಕಿಸ್ತಾನ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.
ರಚಿನ್ ರವೀಂದ್ರ ಅವರ ಪೋಷಕರು ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ದೊಡ್ಡ ಫ್ಯಾನ್ ಆಗಿದ್ದರಿಂದಾಗಿ ತಮ್ಮ ಮಗನಿಗೆ ರಚಿನ್ ರವೀಂದ್ರ ಎಂದು ಹೆಸರಿಟ್ಟಿರುವ ವಿಚಾರವೀಗ ಗುಟ್ಟಾಗಿ ಏನೂ ಉಳಿದಿಲ್ಲ. ಇದೀಗ ರಚಿನ್ ರವೀಂದ್ರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಲ್ಲಿ ಮಳೆ; ಪಾಕ್-ಕಿವೀಸ್ ಪಂದ್ಯ ರದ್ದಾದ್ರೆ ಗೆಲುವು ಯಾರಿಗೆ?
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ರಚಿನ್ ರವೀಂದ್ರ ಕೇವಲ 94 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 108 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ರಚಿನ್, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಬಾರಿಸಿದ ಮೂರನೇ ಶತಕವಾಗಿದ್ದು, ನ್ಯೂಜಿಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಒಂದು ಆವೃತ್ತಿಯ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ನ್ಯೂಜಿಲೆಂಡ್‌ನ ಗ್ಲೆನ್ ಟರ್ನರ್(1975ರಲ್ಲಿ), ಮಾರ್ಟಿನ್ ಗಪ್ಟಿಲ್(2015) ಹಾಗೂ ಕೇನ್ ವಿಲಿಯಮ್ಸನ್(2019) ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಕಿವೀಸ್ ಪರ ತಲಾ 2 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಇದೀಗ ಆ ದಾಖಲೆ ರಚಿನ್ ಪಾಲಾಗಿದೆ.
Rachin Ravindra continues his brilliant with another century 👏 Milestones 🏏 pic.twitter.com/u1PK5bOVTj
— ICC (@ICC)ಇನ್ನು ತಾನಾಡಿದ ಚೊಚ್ಚಲ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಕೂಡಾ ರಚಿನ್ ರವೀಂದ್ರ ಪಾತ್ರರಾಗಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಅಚ್ಚಳಿಯದೇ ಉಳಿದಿದ್ದ ಅಪರೂಪದ ದಾಖಲೆಯನ್ನೂ ಛಿದ್ರ ಮಾಡುವಲ್ಲಿ ರಚಿನ್ ರವೀಂದ್ರ ಯಶಸ್ವಿಯಾಗಿದ್ದಾರೆ. 25 ವರ್ಷ ತುಂಬುವುದರೊಳಗಾಗಿ ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ(02) ಸಿಡಿಸಿದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿತ್ತು. ಇದೀಗ ಆ ದಾಖಲೆ ರಚಿನ್ ರವೀಂದ್ರ ಪಾಲಾಗಿದೆ.
'ಪ್ರತಿ ಬಾಲ್‌ಗೂ....': ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ..!
ಇನ್ನು ಇದಷ್ಟೇ ಅಲ್ಲದೇ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಸಚಿನ್ ತೆಂಡುಲ್ಕರ್ 25 ವರ್ಷಗಳ ಹಿಂದೆ ಬಾರಿಸಿದ್ದ ಗರಿಷ್ಠ ವೈಯುಕ್ತಿಕ ರನ್(523) ದಾಖಲೆ ಸರಿಗಟ್ಟುವಲ್ಲಿ ಕೂಡಾ ಯಶಸ್ವಿಯಾಗಿದ್ದಾರೆ. ಸಚಿನ್ ತೆಂಡುಲ್ಕರ್ 1996ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ 25 ವರ್ಷ ತುಂಬುವುದರೊಳಗಾಗಿ ಒಂದು ವಿಶ್ವಕಪ್‌ನಲ್ಲಿ 523 ರನ್ ಬಾರಿಸಿದ್ದರು. ಇದೀಗ ರಚಿನ್ ರವೀಂದ್ರ ಇಲ್ಲಿಯವರೆಗೆ ಕೇವಲ 8 ಪಂದ್ಯಗಳನ್ನಾಡಿ 74.71ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಹಾಗೂ 2 ಅರ್ಧಶತಕ ಸಹಿತ 523 ರನ್ ಬಾರಿಸಿದ್ದು, ಇನ್ನೊಂದು ರನ್ ಬಾರಿಸಿದರೂ ತೆಂಡುಲ್ಕರ್ ಅವರ ಮತ್ತೊಂದು ದಾಖಲೆ ರಚಿನ್ ಪಾಲಾಗಲಿದೆ.