IPL ರವೀಂದ್ರ ಜಡೇಜಾ ಜೊತೆ CSK ತೊರೆಯಲು ಮತ್ತಿಬ್ಬರು ಪ್ಲೇಯರ್ಸ್​ ರೆಡಿ..!

Published : Jul 11, 2022, 05:23 PM IST
IPL ರವೀಂದ್ರ ಜಡೇಜಾ ಜೊತೆ CSK ತೊರೆಯಲು ಮತ್ತಿಬ್ಬರು ಪ್ಲೇಯರ್ಸ್​ ರೆಡಿ..!

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ತೊರೆಯುವ ಸೂಚನೆ ನೀಡಿದ ರವೀಂದ್ರ ಜಡೇಜಾ ರವೀಂದ್ರ ಜಡೇಜಾ ಬೆನ್ನಲ್ಲೇ ಮತ್ತಿಬ್ಬರು ಆಟಗಾರರು ಚೆನ್ನೈ ತೊರೆಯಲು ಸಿದ್ದತೆ ಚೆನ್ನೈಗೆ ಶಾಕ್ ನೀಡಲು ನಂಬಿಕಸ್ಥ ಆಟಗಾರರಿಂದಲೇ ತೀರ್ಮಾನ?

ಬೆಂಗಳೂರು(ಜು.11): 15ನೇ ಐಪಿಎಲ್​ ಸದ್ಯ ಮುಗಿದ ಅಧ್ಯಾಯ. 16ನೇ ಐಪಿಎಲ್​ ಸೀಸನ್​ ಆರಂಭಕ್ಕೆ ಇನ್ನು ಸಾಕಷ್ಟು ಟೈಮ್​ ಇದೆ. ಆದರೂ ಮಾಜಿ ಚಾಂಪಿಯನ್​​ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಸುದ್ದಿಯಾಗಗತಿದೆ. ಭಿನ್ನಾಭಿಪ್ರಯಾದಿಂದಾಗಿ ಈಗಾಗಲೇ ಆಲ್ರೌಂಡರ್‌ ರವೀಂದ್ರ​​​ ಜಡೇಜಾ ಚೆನ್ನೈ ತಂಡಕ್ಕೆ ಗುಡ್​ಬೈ ಹೇಳಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಮ್​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಪೋಸ್ಟ್​ಗಳನ್ನ ಡಿಲೀಟ್​ ಮಾಡಿದ್ರು. ಆ ಮೂಲಕ ನೆಚ್ಚಿನ ತಂಡವನ್ನ ತೊರೆವ ಸೂಚನೆಯನ್ನು ಎಡಗೈ ಆಲ್ರೌಂಡರ್‌ ನೀಡಿದ್ರು. ಈ ಸುದ್ದಿ ನಿಮಗೆಲ್ಲರಿಗೂ ಗೊತ್ತೇ ಇದೆ. ಸದ್ಯದ ಅಪ್​ಡೇಟ್​ ನ್ಯೂಸ್​ ಏನಂದ್ರೆ ರವೀಂದ್ರ ಜಡೇಜಾ ಜೊತೆ ಮತ್ತಿಬ್ಬರು ಆಟಗಾರರು ಸಿಎಸ್​​ಕೆ ಸಂಬಂಧವನ್ನ ಮುರಿದುಕೊಳ್ಳಲು ಸಜ್ಜಾಗಿದ್ದಾರೆ.

ಮನವೊಲಿಕೆಗೆ ಬಗ್ಗದ ರಾಯುಡು ಚೆನ್ನೈ ತೊರೆಯಲು ಪ್ಲಾನ್ : 

ಸದ್ಯ, ರವೀಂದ್ರ ಜಡೇಜಾ ಇನ್​ಸ್ಟಾದಲ್ಲಿ ಪೋಸ್​ಗಳನ್ನ ಡಿಲೀಟ್ ಮಾಡಿದ್ದು ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡಕ್ಕೆ ದೊಡ್ಡ ಟೆನ್ಷನ್ ತಂದೊಡ್ಡಿದೆ. ಎಲ್ಲಿ ಜಡೇಜಾ ಫ್ರಾಂಚೈಸಿಗೆ ಗುಡ್​​ಬೈ ಹೇಳ್ತಾರೋ ಅನ್ನೋ ಆತಂಕದಲ್ಲಿದೆ. ಇದೆ ಟೈಮಲ್ಲಿ ಸಿಎಸ್‌ಕೆ ಮ್ಯಾಚ್​ ವಿನ್ನರ್​​​ ಅಂಬಟಿ ರಾಯುಡು ಕೂಡ ಚೆನ್ನೈ ತಂಡ ತೊರೆಯುವ ಪ್ಲಾನ್​ ಮಾಡಿದ್ದಾರೆ ಎನ್ನಲಾಗ್ತಿದೆ. ಹೌದು, ಜಡೇಜಾರಂತೆ ಅಂಬಟಿ ರಾಯುಡು ಹಾಗೂ ಸಿಎಸ್​ಕೆ ನಡುವೆ ಮುನಿಸಿದೆ. ಇದೇ ಕಾರಣಕ್ಕೆ ಆಂಧ್ರವಾಲಾ ಐಪಿಎಲ್​ಗೆ ನಿವೃತ್ತಿ ಘೋಷಿಸಿದ್ರು. ಆದ್ರೆ ಸಿಇಒ ಕಾಶೀ ವಿಶ್ವನಾಥನ್​​​​, ಅಂಬಟಿ ರಾಯುಡು ಜೊತೆ ಮಾತಾಡಿ, ರಿಸೈನ್ ನಿರ್ಧಾರ ಹಿಂತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ರು. ಇಷ್ಟಾದ್ರು ಅಂಬಟಿಗೆ ಚೆನ್ನೈ ಮೇಲಿನ ಕೋಪ ಇನ್ನೂ ತಣ್ಣಗಾಗಿಲ್ಲ. ಹೀಗಾಗಿ ಚೆನ್ನೈ ತಂಡದ ಸಖ್ಯ ಕಳೆದುಕೊಳ್ಳಲು ರಾಯುಡು ಚಿಂತಿಸಿದ್ದಾರೆ.

CSK ಜೊತೆಗಿನ ದಶಕದ ಸಂಬಂಧ ಕಳೆದುಕೊಂಡ್ರಾ ಜಡ್ಡು..?

ಚೆನ್ನೈಗೆ  ಗೂಗ್ಲಿ ಎಸೆಯಲು ದೀಪಕ್ ಚಹರ್​​​​ ತಯಾರಿ : 

ಇನ್ನು 14 ಕೋಟಿ ಒಡೆಯ ದೀಪಕ್ ಚಹರ್​ ಕೂಡ ತಮ್ಮ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಸಂಬಂಧ ಕಟ್​ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ದೀಪಕ್ ಚಹರ್​​​ ಇಂಜುರಿಗೆ ತುತ್ತಾಗಿದ್ರು. ಈ ಟೈಮಲ್ಲಿ ಫ್ರಾಂಚೈಸಿ, ದೀಪಕ್ ಚಹರ್ ಎನ್ನುವ ಸ್ವಿಂಗ್​ ಸ್ಪೆಶಲಿಸ್ಟ್​ರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅಸಡ್ಡೆ ಮನೋಭಾವನೆ ತೋರಿತು. ಇದರಿಂದ ಆಕ್ರೋಶಗೊಂಡಿರೋ ಯುವ ವೇಗಿ ಚಹರ್​, ಸಿಎಸ್​​ಕೆಗೆ ಗುಡ್​​ಬೈ ಅನ್ನೋ ಗೂಗ್ಲಿ ಎಸೆಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಆರಂಭದಿಂದಲೂ ಪ್ಲೇಯರ್ಸ್​ ಹೊಂದಾಣಿಕೆ ವಿಚಾರದಲ್ಲಿ ಒಂದು ಕೈ ಮೇಲೂ. ಸದ್ಯ ಇದೇ ಫ್ರಾಂಚೈಸಿಯನ್ನ ತೊರೆಯಲು ಮೂವರು ಮ್ಯಾಚ್ ವಿನ್ನರ್ಸ್​ ರೆಡಿಯಾಗಿರೋದು ಹಲವು ಅಚ್ಚರಿ ಜೊತೆ ಅನೇಕ ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿದೆ. ಮಾಹಿ ನೇತೃತ್ವದ ಸಿಎಸ್‌ಕೆ ತಂಡವು 4 ಬಾರಿ ಚಾಂಪಿಯನ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್‌ಗೇರುವಲ್ಲಿ ವಿಫಲವಾಗಿತ್ತು. ಈ ಆಘಾತದಿಂದ ಹೊರಬರುವ ಮುನ್ನವೇ ಒಂದು ವೇಳೆ ಈ ಮೂವರು ಆಟಗಾರರು ಸಿಎಸ್‌ಕೆ ತಂಡಕ್ಕೆ ಬಲವಾದ ಪೆಟ್ಟು ಬೀಳಲಿದೆ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?