
ಮುಂಬೈ(ಜು.11): ಅರೆಕಾಲಿಕ ನಾಯಕ ಎನಿಸಿಕೊಂಡಿದ್ದ ರೋಹಿತ್ ಶರ್ಮಾಗೆ ಡಿಸೆಂಬರ್ 8, 2021 ರಂದು ಭಾರತ ಕ್ರಿಕೆಟ್ ತಂಡದ ಫುಲ್ಟೈಮ್ ಕ್ಯಾಪ್ಟನ್ ಆಗಿ ಬಡ್ತಿ ಸಿಕ್ತು. ಕಿಂಗ್ ಕೊಹ್ಲಿ ಬಳಿಕ ಮುಂಬೈಕರ್ ಟೀಂ ಇಂಡಿಯಾ ಚುಕ್ಕಾಣಿ ಹಿಡಿದ್ರು. ಇವರ ಕ್ಯಾಪ್ಟನ್ಸಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಮೂಡಿದ್ವು. ಆ ನಿರೀಕ್ಷೆ ಎಲ್ಲೂ ಹುಸಿಯಾಗದಂತೆ ರೋಹಿತ್ ಶರ್ಮಾ ಭಾರತ ತಂಡವನ್ನ ಮುನ್ನಡೆಸಿ ಭೇಸ್ ಅನ್ನಿಸಿಕೊಂಡಿದ್ದಾರೆ. ನಾಯಕರಾದ 8 ತಿಂಗಳಲ್ಲೇ ಹಲವು ದಾಖಳೆಗಳ ಒಡೆಯನಾಗಿ ಹೊರಹೊಮ್ಮಿದ್ದು, ಭಾರತ ತಂಡದ ಕ್ಯಾಪ್ಟನ್ಸಿ ಸೇಫ್ ಪರ್ಸನ್ ಕೈಯಲ್ಲಿದೆ ಅನ್ನೋ ಆಶಾಭಾವ ಮೂಡಿಸಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಲಾಢ್ಯ ತಂಡಗಳಿಗೆ ಸೋಲುಣಿಸುವಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ.
ನಾಯಕನಾಗಿ ಸತತ 4 ಟಿ20 ಸಿರೀಸ್ ಗೆದ್ದ ರೋಹಿತ್ :
ಹೌದು, ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಬಳಿಕ ಟೀಂ ಇಂಡಿಯಾ (Indian Cricket Team) ಒಂದೂ ಟಿ20 ಸರಣಿಯನ್ನೂ ಸೋತಿಲ್ಲ. ಪ್ರಸಕ್ತ ಇಂಗ್ಲೆಂಡ್ ಟಿ20 ಸರಣಿ ಸೇರಿ ಸತತ 4 ಸಿರೀಸ್ಗಳನ್ನ ಗೆಲ್ಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್, ವೆಸ್ಟ್ಇಂಡೀಸ್ ಹಾಗೂ ಲಂಕಾ ವಿರುದ್ಧ ಕ್ಲೀನ್ಸ್ವೀಪ್ ಸಾಧಿಸಿದ್ರೆ, ಆಂಗ್ಲರ ವಿರುದ್ಧವೂ ಸಿರೀಸ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬರೀ ಟಿ20 ಸರಣಿ ಮಾತ್ರವಲ್ಲ. ಇವರ ಕ್ಯಾಪ್ಟನ್ಸಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲೂ ಭಾರತದ ಗೆಲುವಿನ ನಗಾರಿ ಬಾರಿಸಿದೆ. ಅಲ್ಲಿಗೆ ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ 6 ಸರಣಿಗಳನ್ನ ಮುನ್ನಡೆಸಿದ್ದು, ಎಲ್ಲದರಲ್ಲೂ ಗೆದ್ದಂತಾಗಿದೆ.
ಧೋನಿ, ಕೊಹ್ಲಿಯನ್ನೇ ಹಿಂದಿಕ್ಕಿದ ಹಿಟ್‌ಮ್ಯಾನ್:
ಯೆಸ್, ಗೆಲುವಿನ ಸರಾಸರಿಯಲ್ಲಿ ರೋಹಿತ್ ದಿ ಗ್ರೇಟ್ ಧೋನಿ ಹಾಗೂ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ. ಅರೆಕಾಲಿಕ ಹಾಗೂ ಫುಲ್ಟೈಮ್ ನಾಯಕನಾಗಿ ಒಟ್ಟು 30 ಪಂದ್ಯಗಳನ್ನ ಲೀಡ್ ಮಾಡಿದ್ದು, 26 ರಲ್ಲಿ ಗೆದ್ದಿದ್ದಾರೆ. ಬರೀ 4 ರಲ್ಲಷ್ಟೇ ಭಾರತ ಸೋತಿದೆ. ಗೆಲುವಿನ ಸರಾಸರಿಯಲ್ಲಿ ರೋಹಿತ್ ಶೇಕಡಾ 86.66ರಷ್ಟು ಸರಾಸರಿ ಹೊಂದಿದ್ದಾರೆ. ಮಾಜಿ ಕ್ಯಾಪ್ಟನ್ ಕೊಹ್ಲಿ ಶೇಕಡಾ 64.58 ಹಾಗೂ ಎಂ.ಎಸ್ ಧೋನಿ 59.28ರ ಸರಾಸರಿ ಹೊಂದಿದ್ದಾರೆ.
Ind vs Eng: ಟೀಂ ಇಂಡಿಯಾ ಪ್ಲೇಯರ್ಸ್ಗೆ ಡಬಲ್ ಧಮಾಕ..!
ಎಲ್ಲಾ ಮಾದರಿಯಲ್ಲಿ ಸತತ 19 ಗೆಲುವು:
ಇನ್ನು ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ ಒಟ್ಟು 19 ಪಂದ್ಯಗಳನ್ನ ಜಯಿಸಿ ಕೊಟ್ಟಿದ್ದಾರೆ. ಆದರೆ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ವಿಫಲವಾಗಿದ್ದಾರೆ. 2003ರಲ್ಲಿ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡವನ್ನು ಸತತ 20 ಪಂದ್ಯಗಳಲ್ಲಿ ನಾಯಕನಾಗಿ ಗೆಲ್ಲಿಸಿದ್ರು. ಆ ದಾಖಲೆ ಸರಿಗಟ್ಟಲು ಹಿಟ್‌ಮ್ಯಾನ್ ಕೊನೆಯ ಕ್ಷಣದಲ್ಲಿ ವಿಫಲವಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.