ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬಾರಿಸಿದ ಆಕರ್ಷಕ ಶತಕದ ಆರ್ಭಟಕ್ಕೆ ಬೆಚ್ಚಿದ ಪಾಕಿಸ್ತಾನ ತಂಡ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ 000 ರನ್‌ಗಳ ಸೋಲು ಕಂಡಿದೆ.
ಬೆಂಗಳೂರು (ಅ.20): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸೀಸ್ ಬ್ಯಾಟಿಂಗ್ ಆರ್ಭಟದ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಬ್ಯಾಟಿಂಗ್ ಪ್ರಾಬಲ್ಯದೊಂದಿಗೆ ಬೌಲಿಂಗ್‌ನಲ್ಲೂ ಮಿಂಚಿನ ನಿರ್ವಹನೆ ತೋರಿದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ತಂಡವನ್ನು 62 ರನ್‌ಗಳಿಂದ ಮಣಿಸಿದೆ. ಇದು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಸೋಲು ಎನಿಸಿದೆ. ಇದಕ್ಕೂ ಮುನ್ನ ಭಾರತ ತಂಡದ ವಿರುದ್ಧ ಅಹಮದಾಬಾದ್‌ನಲ್ಲಿ ಸೋಲು ಕಂಡಿತ್ತು.ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗೆ 367 ರನ್‌ಗಳ ಬೃಹತ್ ಮೊತ್ತ ಪೇರಿಸಿದರೆ, ಪ್ರತಿಯಾಗಿ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ 45.3 ಓವರ್‌ಗಳಲ್ಲಿ 305 ರನ್‌ಗೆ ಆಲೌಟ್ ಆಗುವ ಮೂಲಕ ಟೂರ್ನಿಯಲ್ಲಿ 2ನೇ ಸೋಲು ಕಂಡಿತು. ಆಸೀಸ್ ಪರವಾಗಿ ಡೇವಿಡ್ ವಾರ್ನರ್ (163 ರನ್, 124 ಎಸೆತ, 14 ಬೌಂಡರಿ, 9 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ (121 ರನ್, 108 ಎಸೆತ, 10 ಬೌಂಡರಿ, 9 ಸಿಕ್ಸರ್) ಮೊದಲ ವಿಕೆಟ್‌ಗೆ 259 ರನ್‌ಗ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಬೃಹತ್ ಮೊತ್ತದ ಬುನಾದಿ ಹಾಕಿದ್ದರು.
ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡ ಸಲೀಸಾಗಿ 400ಕ್ಕಿಂತ ಅಧಿಕ ಮೊತ್ತ ಪೇರಿಸಲಿದೆ ಎನ್ನುವ ವಾತಾವರಣ ಇತ್ತಾದರೂ, ಕೊನೆಯ ಹಂತದಲ್ಲಿ ಶಹೀನ್ ಶಾ ಅಫ್ರಿಧಿ (54ಕ್ಕೆ 5) ಮಿಂಚಿನ ದಾಳಿ ನಡೆಸುವ ಮೂಲಕ ಸ್ಲಾಗ್ ಓವರ್‌ನಲ್ಲಿ ಆಸೀಸ್ ಬ್ಯಾಟಿಂಗ್ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದರು. ಇದರಿಂದಾಗಿ ವಿಕೆಟ್ ನಷ್ಟವಿಲ್ಲದೆ 259 ರನ್ ಬಾರಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ ಈ ಮೊತ್ತಕ್ಕೆ 108 ರನ್ ಸೇರಿಸುವ ವೇಳೆಗ ಉಳಿದ 10 ವಿಕೆಟ್‌ಗಳನ್ನು ಕಳೆದುಕೊಂಡಿತು.
undefined
ಚೇಸಿಂಗ್ ಆರಂಭಿಸಿದ ಪಾಕಿಸ್ತಾನ ತಂಡಕ್ಕೂ ಉತ್ತಮ ಆರಂಭ ಸಿಕ್ಕಿತ್ತು. ಅಬ್ದುಲ್ಲಾ ಶಫೀಕ್ (64 ರನ್, 61ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಇಮಾಮ್ ಉಲ್ ಹಕ್ (70 ರನ್, 71 ಎಸೆತ, 10 ಬೌಂಡರಿ) ಮೊದಲ ವಿಕೆಟ್‌ಗೆ 134 ರನ್ ಜೊತೆಯಾಟವಾಡುವ ಮೂಲಕ ಗೆಲುವಿನ ಭರವಸೆ ನೀಡಿದ್ದರು. 127 ಎಸೆತಗಳ ಇವರ ಇನ್ನಿಂಗ್ಸ್ ನಿಧಾನಗತಿಯದ್ದಾಗಿದ್ದರೂ, ತನ್ನ ಬ್ಯಾಟಿಂಗ್ ಶಕ್ತಿಯ ಕಾರಣ ಮೊತ್ತವನ್ನು ಚೇಸ್ ಮಾಡುವ ವಿಶ್ವಾಸದಲ್ಲಿ ಪಾಕಿಸ್ತಾನ ತಂಡವಿತ್ತು. ಆದರೆ, 22ನೇ ಓವರ್ನ್ ಮೊದಲ ಎಸೆತದಲ್ಲಿ ಮಾರ್ಕಸ್ ಸ್ಟೋಯಿನಿಸ್, ಅಬ್ದುಲ್ಲಾ ಶಫೀಕ್‌ರನ್ನು ಔಟ್ ಮಾಡುವ ಮೂಲಕ ಆಸೀಸ್‌ಗೆ ಮೇಲುಗೈ ನೀಡಿದರು. ಈ ಮೊತ್ತಕ್ಕೆ 20 ರನ್ ಸೇರಿಸುವ ವೇಳೆಗೆ ಇಮಾಮ್ ಉಲ್ ಉಕ್ ಕೂಡ ಸ್ಟೋಯಿನಿಸ್‌ಗೆ ವಿಕೆಟ್ ನೀಡಿದಾಗ ಆಸೀಸ್‌ಗೆ ಗೆಲುವಿನ ಬಾಗಿಲು ತೆರೆದಂತಾಯಿತು.
'ಪಾಕಿಸ್ತಾನ್ ಜಿಂದಾಬಾದ್ ಎನ್ನದೇ ಮತ್ತೇನು ಹೇಳ್ಬೇಕು..' ಬೆಂಗಳೂರು ಪೊಲೀಸ್ ಜೊತೆ ಪಾಕ್ ಯುವಕನ ಮಾತಿನ ಫೈಟ್!
ಈ ಜೊತೆಯಾಟ ಬೇರ್ಪಟ್ಟ ಬೆನ್ನಲ್ಲಯೇ ತುರ್ತಾಗಿ ಬೌಲಿಂಗ್ ಬದಲಾವಣೆ ಮಾಡಿದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅದಕ್ಕೆ ಪ್ರತಿಫಲವನ್ನೂ ಪಡೆದರು. ಪಾಕ್ ನಾಯಕ ಬಾಬರ್ ಅಜಮ್ 18 ರನ್ ಬಾರಿಸಿ ಔಟಾದರೆ, ಮೊಹಮದ್ ರಿಜ್ವಾನ್ 40 ಎಸೆತಗಳಲ್ಲಿ 46 ರನ್ ಬಾರಿಸಿದರು. ಬಾಬರ್ ಅಜಮ್ ಹಾಗೂ ಸೌದ್ ಶಕೀಲ್ (30) ಔಟಾದ ಬೆನ್ನಲ್ಲಿಯೇ ಪಾಕಿಸ್ತಾನ ತಂಡದ ಸೋಲು ಹೆಚ್ಚೂ ಕಡಿಮೆ ಖಚಿತವಾಗಿತ್ತು. ರಿಜ್ವಾನ್‌ರಿಂದ ಸಾಹಸಿಕ ಬ್ಯಾಟಿಂಗ್ ನಿರೀಕ್ಷೆಯಲ್ಲಿ ಪಾಕಿಸ್ತಾನ ತಂಡವಿತ್ತಾದರೂ, 41ನೇ ಓವರ್‌ನಲ್ಲಿ ಅವರೂ ಕೂಡ ಔಟಾಗುವುದರೊಂದಿಗೆ ತಂಡದ ಗೆಲುವಿನ ಆಸೆ ಕಮರಿ ಹೋಯಿತು.ಕೊನೆಯ ಕ್ರಮಾಂಕದಲ್ಲಿ ಇಫ್ತಿಕಾರ್ ಅಹ್ಮದ್ (26), ಮೊಹಮದ್ ನವಾಜ್ (14) ಬಾರಿಸಿದ ರನ್‌ಗಳು ಪಾಕಿಸ್ತಾನದ ಸೋಲಿನ ಅಂತರ ತಗ್ಗಿಸಿತು.
ಪಾಕ್ ಬೌಲರ್‌ಗಳನ್ನು ಚೆಂಡಾಡಿದ ವಾರ್ನರ್-ಮಾರ್ಷ್: ಪಾಕ್‌ಗೆ ಬೆಂಗಳೂರು ಪಂದ್ಯ ಗೆಲ್ಲಲು ಕಠಿಣ ಗುರಿ ನೀಡಿದ ಆಸೀಸ್
ಆಸ್ಟ್ರೇಲಿಯಾ ಪರವಾಗಿ ಆಡಂ ಜಂಪಾ 53 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಪ್ಯಾಟ್ ಕಮ್ಮಿನ್ಸ್ ಹಾಗೂ ಸ್ಟೋಯಿನಸ್ ತಲಾ ಎರಡು ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ ಹಾಗೂ ಜೋಸ್ ಹ್ಯಾಸಲ್‌ವುಡ್ ಒಂದೊಂದು ವಿಕೆಟ್ ಪಡೆದುಕೊಂಡರು.