ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಸದ್ಯಕ್ಕೆ ನಿವೃತ್ತಿ ಇಲ್ಲ ಎಂದು ಟ್ರೋಫಿ ಗೆದ್ದ ಬೆನ್ನಲ್ಲೇ ಸ್ಪಷ್ಪಡಿಸಿದ್ದರು. ಆದರೆ ಫಿಟ್ನೆಸ್ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಅನ್ನೋ ಮಾತು ಹಲವು ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಅಭಿಮಾನಿಗಳ ಆತಂಕ ಹೆಚ್ಚಿಸಿದೆ
ಚೆನ್ನೈ(ಜೂ.13): ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಧೋನಿಯ ಕೊನೆಯ ಐಪಿಎಲ್ ಎಂದೇ ಬಿಂಬಿತವಾಗಿತ್ತು. ಹೀಗಾಗಿ ಎಲ್ಲಾ ಮೈದಾನದಲ್ಲಿ ಧೋನಿ ಆಟನೋಡಲು ಅಭಿಮಾನಿಗಳು ಕ್ಕಿಕ್ಕಿರಿದು ತುಂಬಿದ್ದರು. ಟ್ರೋಫಿ ಗೆಲುವಿನ ಬಳಿಕ ನಿವೃತ್ತಿ ಇಲ್ಲ, ಫಿಟ್ನೆಸ್ ನೋಡಿಕೊಂಡು ಮುಂದಿನ ಸರಣಿ ಆಡುತ್ತೇನೆ ಎಂದಿದ್ದರು. ಈ ಮಾತು ಕೋಟ್ಯಾಂತರ ಅಭಿಮಾನಿಗಳಲ್ಲಿ ಸಂತಸ ಡಬಲ್ ಮಾಡಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಭಾವನಾತ್ಮಕ ಟ್ವೀಟ್ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಒಹ ಕ್ಯಾಪ್ಟನ್, ಮೈ ಕ್ಯಾಪ್ಟನ್ ಅನ್ನೋ ಟ್ವೀಟ್ ಮಾಡಿದೆ. ಈ ಟ್ವೀಟ್ ಮೂಲಕಧೋನಿ ವಿಡಿಯೋ ಹಂಚಿಕೊಂಡಿದೆ. ಧೋನಿಗೆ ಟ್ರಿಬ್ಯೂಟ್ ನೀಡುತ್ತಿರುವ ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದೆ. ದಿಢೀರ್ ಧೋನಿ ನಾಯಕತ್ವ ಕುರಿತು ಟ್ವೀಟ್ ಮಾಡಿರುವ ಸಿಎಸ್‌ಕೆ, ನಿವೃತ್ತಿ ಸುಳಿವು ನೀಡಿತಾ ಅನ್ನೋ ಮಾತುಗಳು ಕೇಳಿಬಂದಿದೆ.
ಐಸಿಸಿ ಟ್ರೋಫಿ ಗೆಲುವು ಸುಲಭವಲ್ಲ, ಸುಲಭವಾಗಿ ಕಾಣುವಂತೆ ಮಾಡಿದ್ದ ಧೋನಿ; ಟೀಂ ಇಂಡಿಯಾಗೆ ಫ್ಯಾನ್ಸ್ ಪಾಠ!
ಧೋನಿಯ ಐಪಿಎಲ್ ಕುರಿತು ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಹಲವು ಧೋನಿ ಮುಂದಿನ ಐಪಿಎಲ್ ಆಡುತ್ತಾರೆ ಎಂದಿದ್ದಾರೆ. ಹೀಗಾಗಿ ಈ ರೀತಿಯ ಟ್ವೀಟ್ ಮಾಡಿ ನಮ್ಮ ಆತಂಕ ಹೆಚ್ಚಿಸಬೇಡಿ. ಧೋನಿ ಆಟ ನೋಡಲು ಕಾತರರಾಗಿದ್ದೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಭಾವನಾತ್ಮಕ ಪೋಸ್ಟ್ ಮಾಡಿದೆ. ಇಡಿ ದೇಶವೇ ಮೆಚ್ಚಿಕೊಂಡ ನಾಯಕ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Oh Captain, My Captain! 🥹 🦁💛 pic.twitter.com/whJeUjWUVd
— Chennai Super Kings (@ChennaiIPL)
ಇತ್ತೀಚೆಗೆ ಧೋನಿ ತಮ್ಮ ಎಡಗಾಲಿನ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಡಗಾಲಿನ ಮಂಡಿ ನೋವಿನ ನಡುವೆಯೇ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ್ದ ಧೋನಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಧೋನಿ ಕೆಲ ತಿಂಗಳುಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.ಆ ಬಳಿಕವಷ್ಟೇ ಅವರು ಮುಂದಿನ ಐಪಿಎಲ್‌ನಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದರು. ಇದೀಗ ಸಿಎಸ್‌ಕೆ ಟ್ವೀಟ್ ಸಂಚಲನ ಮೂಡಿಸಿದೆ.
ಪ್ರಶಸ್ತಿ ಸಮಾರಂಭದ ವೇಳೆ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ‘ಭವಿಷ್ಯದ’ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ‘ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಆದರೆ ಎಲ್ಲೆಡೆ ಅಭಿಮಾನಿಗಳಿಂದ ಬಹಳ ಪ್ರೀತಿ ಸಿಗುತ್ತಿದೆ. ಇನ್ನೊಂದು ಆವೃತ್ತಿಯಲ್ಲಿ ಆಡಿದರೆ ಅಭಿಮಾನಿಗಳಿಗೆ ಉಡುಗೊರೆ ನೀಡಿದಂತಾಗುತ್ತದೆ. ಆದರೆ ಮುಂದಿನ ಐಪಿಎಲ್‌ನಲ್ಲಿ ಆಡಲು 9 ತಿಂಗಳು ಪರಿಶ್ರಮ ವಹಿಸಬೇಕಿದೆ’ ಎಂದಿದ್ದರು.
'ಬೇಗ ಗುಣಮುಖರಾಗಿ': ಧೋನಿ ಭೇಟಿ ಮಾಡಿದ ಮೊಹಮ್ಮದ್ ಕೈಫ್..! ಧೋನಿ ಮಾತಿಗೆ ಕೈಫ್ ಮಗ ದಿಲ್ ಖುಷ್
ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ದಾಖಲಿಸಿ ಟ್ರೋಫಿ ಗೆದ್ದುಕೊಂಡಿತು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 5 ಟ್ರೋಪಿ ಗೆಲ್ಲುವ ಮೂಲಕ ದಾಖಲೆ ಬರೆದಿದೆ.