ಬ್ಯಾನ್‌ ಮಾಡಿದ ಬಿಸಿಸಿಐಗೆ ಸಖತ್‌ ಠಕ್ಕರ್‌ ಕೊಟ್ಟ ಇರ್ಫಾನ್‌ ಪಠಾಣ್!‌ ಇದಪ್ಪಾ ತಿರುಗೇಟು ಅಂದ್ರೆ..!

Published : Apr 05, 2025, 05:32 PM ISTUpdated : Apr 06, 2025, 08:58 AM IST
ಬ್ಯಾನ್‌ ಮಾಡಿದ ಬಿಸಿಸಿಐಗೆ ಸಖತ್‌ ಠಕ್ಕರ್‌ ಕೊಟ್ಟ ಇರ್ಫಾನ್‌ ಪಠಾಣ್!‌ ಇದಪ್ಪಾ ತಿರುಗೇಟು ಅಂದ್ರೆ..!

ಸಾರಾಂಶ

ಈ ಬಾರಿ ಐಪಿಎಲ್‌ 2025 ಕಾಮೆಂಟರಿಯಿಂದ ಕೈಬಿಟ್ಟ ತಕ್ಷಣ, ಇರ್ಫಾನ್‌ ಪಠಾಣ್‌ ಅವರು ಬಿಸಿಸಿಐಗೆ ಠಕ್ಕರ್‌ ನೀಡಿದ್ದಾರೆ. ಏನದು? ಈ ಲೇಖನ ಓದಿ.   

ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಸೀಸನ್‌ನಲ್ಲಿ ಕಾಮೆಂಟರಿ ಪಟ್ಟಿಯಲ್ಲಿ ಇರ್ಫಾನ್ ಪಠಾಣ್ ಹೆಸರು ಇರಲಿಲ್ಲ. ಇದು ಎಲ್ಲರಿಗೂ ಅಚ್ಚರಿ ನೀಡಿತ್ತು. ಅಲಿಖಿತವಾಗಿ ಬ್ಯಾನ್‌ ಆದ ಬಳಿಕ ಇರ್ಫಾನ್‌ ಅವರು ಯುಟ್ಯೂಬ್‌ ಚಾನೆಲ್‌ ಆರಂಭಿಸಿ, ತಿರುಗೇಟು ನೀಡುತ್ತಿದ್ದಾರೆ.

ದೂರುಗಳು ಏನು?
ನಿವೃತ್ತಿ ಹೊಂದಿದ ನಂತರದಲ್ಲಿ ಇರ್ಫಾನ್‌ ಅವರು IPL, ಇಂಟರ್‌ನ್ಯಾಶನಲ್‌ ಮ್ಯಾಚ್‌ಗಳಲ್ಲಿ ನಿರಂತರವಾಗಿ ಇಂಗ್ಲಿಷ್‌, ಹಿಂದಿ ಕಾಮೆಂಟರಿ ಮಾಡುತ್ತಿದ್ದರು. ಈ ಆಲ್‌ರೌಂಡರ್ ಕೆಲ ಆಟಗಾರರ ವಿರುದ್ಧ ಪರ್ಸನಲ್‌ ಆಗಿ ಟಾರ್ಗೆಟ್‌ ಮಾಡ್ತಾರೆ, ಸೋಶಿಯಲ್‌ ಮೀಡಿಯಾ ಆಕ್ಟಿವಿಟಿ ಸರಿಯಿಲ್ಲ ಎಂದು ಕೂಡ ಆರೋಪ ಬಂದಿತ್ತು. ಹೀಗಾಗಿ ಇರ್ಫಾನ್‌ ಅವರನ್ನು ಬ್ಯಾನ್‌ ಮಾಡಲಾಗಿದೆ ಎನ್ನಲಾಗಿದೆ.  

ಬಾಯಿಗೆ ಬಂದಂತೆ ಮಾತು... ಐಪಿಎಲ್‌ 2025 ಕಾಮೆಂಟರಿ ಟೀಮ್‌ನಿಂದ ಇರ್ಫಾನ್‌ ಪಠಾಣ್‌ ಕಿಕ್‌ಔಟ್!

ನಿಜಕ್ಕೂ ಏನಾಗಿತ್ತು? 
ಎರಡೂವರೆ ತಿಂಗಳು ನಡೆಯುವ ಟಿ20 ಲೀಗ್‌ನಲ್ಲಿ ಬೌಲರ್ ಇರ್ಫಾನ್ ಪಠಾಣ್ ಹೆಸರು ಇರಲಿಲ್ಲ. ಕೆಲವಿ ವರದಿಗಳ ಪ್ರಕಾರ ಕೆಲ ಭಾರತೀಯ ಆಟಗಾರರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕೆ ಇರ್ಫಾನ್ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ. 

ಈ ಹಿಂದೆ ಬ್ಯಾನ್‌ ಆಗಿದ್ದವರು ಯಾರು? 
ಹೋದ ವರ್ಷ ಕೂಡ 2 ಇರ್ಫಾನ್ ಪಠಾಣ್ ಅವರು ಕೆಲವು ಆಟಗಾರರ ವಿರುದ್ಧ ವೈಯಕ್ತಿಕವಾಗಿ ಮಾತನಾಡುತ್ತಿದ್ದರು ಎನ್ನಲಾಗಿತ್ತು. ಈ ವರ್ಷವೂ ಇದೇ ಕಥೆ ಆದ್ದರಿಂದ ಈಗ ಬ್ಯಾನ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ಭಾರತೀಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ ಕೂಡ ಬ್ಯಾನ್‌ ಆಗಿದ್ದರು. 

ಇರ್ಫಾನ್‌ ಪಠಾಣ್‌ ಕೊನೆ, 9 ವರ್ಷದಿಂದ ನಾನು ಯಾರೊಂದಿಗೂ ಸೆಕ್ಸ್‌ ಮಾಡಿಲ್ಲ ಎಂದ ನಟಿ!

ಎಷ್ಟು ವೀಕ್ಷಣೆ ಆಗಿದೆ? 
ಐಪಿಎಲ್ 2025 ರ ಕಾಮೆಂಟರಿ ತಂಡದಿಂದ ಹೊರಹಾಕಿದ ನಂತರ ಇರ್ಫಾನ್ ಪಠಾಣ್ ಅವರು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು 'ಸಿಧಿ ಬಾತ್ ವಿತ್ ಇರ್ಫಾನ್ ಪಠಾಣ್' ಎಂದು ಹೆಸರಿಟ್ಟು, ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದಾರೆ. ಈ ಚಾನೆಲ್‌ ಶುರು ಮಾಡಿ ಎರಡು ವಾರಗಳಾಗಿದ್ದು, ಸರಿಸುಮಾರು ಎರಡು ಲಕ್ಷ ಸಬ್‌ಸ್ಕ್ರೈಬರ್ಸ್‌ ಆಗಿದ್ದಾರೆ. ಇನ್ನು 57 ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಈಗಾಗಲೇ ಮೂರು ಮಿಲಿಯನ್‌ಗೂ ಅಧಿಕ ವೀಕ್ಷಣೆಯಾಗಿದೆ.

ಯುಟ್ಯೂಬ್‌ನಲ್ಲಿ ಸಾಹಸ! 
ಇಂದು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ದುಡ್ಡಿದ್ದು, ಸಿನಿಮಾ, ಕ್ರಿಕೆಟ್‌ ಸೇರಿದಂತೆ ಸಾಮಾನ್ಯ ಜನರು ಕೂಡ ಯುಟ್ಯೂಬ್‌ ಆರಂಭಿಸಿದ್ದಾರೆ. ಈ ಮೂಲಕ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಎರಡು ವಾರಕ್ಕೆ ಇರ್ಫಾನ್‌ ಅವರಿಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಮೂಲಕ ತನ್ನನ್ನು ಬ್ಯಾನ್‌ ಮಾಡಿದ BCCI ಗೆ ಸರಿಯಾಗಿ ಠಕ್ಕರ್‌ ಕೊಟ್ಟಿದ್ದಾರೆ. 


ಇನ್ನು ವೈಯಕ್ತಿಕ ವಿಚಾರಕ್ಕೂ ಇರ್ಫಾನ್‌ ಪಠಾಣ್‌ ಅವರು ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಸಫಾ ಬೈಗ್‌ ಅವರನ್ನು ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಇದಕ್ಕೂ ಮುನ್ನ ಅವರು ಶಿವಾಂಗಿ ದೇವ್‌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಅಣ್ಣನ ಮದುವೆ ಬಳಿಕ ತಾನು ಮದುವೆ ಆಗೋದಾಗಿ ಇರ್ಫಾನ್‌ ಹೇಳಿದ್ದರು. ಇದು ಶಿವಾಂಗಿಗೆ ಇಷ್ಟ ಇರಲಿಲ್ಲ. ಹೀಗಾಗಿ ಈ ಜೋಡಿ ಬೇರೆ ಆಯ್ತು ಎಂದು ಹೇಳಲಾಗುವುದು. 2014ರಲ್ಲಿ ಇರ್ಫಾನ್‌ ಹಾಗೂ ಸಫಾ ಅವರು ದುಬೈನಲ್ಲಿ ಭೇಟಿಯಾಗಿದ್ದರು. ಮದುವೆ ಆಗೋವರೆಗೂ ಈ ಜೋಡಿ ಎಲ್ಲಿಯೂ ಪ್ರೀತಿ ಹೇಳಿಕೊಂಡಿರಲಿಲ್ಲ. ಕೊನೆಗೂ ಮದುವೆಯಾಗಿ ಈಗ ಇಬ್ಬರ ಮಕ್ಕಳ ಪಾಲಕರಾಗಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!