
ಮುಂಬೈ(ಅ.08): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣ ತೀವ್ರ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇಮ್ರಾನ್ UNGA ಭಾಷಣ ಟೀಕೆಗಳ ಜೊತೆಗೆ ಟ್ರೋಲ್ ಕೂಡ ಆಗಿತ್ತು. ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ಇಮ್ರಾನ್ ಭಾಷಣವನ್ನು ಟೀಕಿಸಿದ್ದರು. ಇದರಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಒಬ್ಬರು. ಇದೀಗ ಪಾಕ್ ಪ್ರಧಾನಿ ಭಾಷಣ ವಿಚಾರದಲ್ಲಿ ಹರ್ಭಜನ್ ಸಿಂಗ್ ಹಾಗೂ ಪಾಕಿಸ್ತಾನ ನಟಿ ವೀಣಾ ಮಲಿಕ್ ಟ್ವೀಟ್ ಸಮರ ನಡೆಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ಬಾರಿಸಲು ರೆಡಿಯಾಗಿದ್ರಂತೆ ಭಜ್ಜಿ..!
ಇಮ್ರಾನ್ ಭಾಷಣದಲ್ಲಿ ಭಾರತ ನ್ಯೂಕ್ಲಿಯರ್ ಯುದ್ದಕ್ಕೆ ಸಜ್ಜಾಗಿದೆ. ನಾವು ಕೊನೆಯ ಉಸಿರನವರೆಗೂ ಹೋರಾಡುತ್ತೇವೆ. ರಕ್ತಪಾತ ಎಂಬ ಮಾತುಗಳೇ ಹೆಚ್ಚಾಗಿತ್ತು. ಇದೇ ಭಾಷಣವನ್ನು ಪ್ರಸ್ತಾಪಿಸಿದ ಹರ್ಭಜನ್ ಸಿಂಗ್, ಇಂತಹ ಮಾತುಗಳಿಂದ ಶಾಂತಿ ಸಾಧ್ಯವಿಲ್ಲ. ಇದು ಉಭಯ ದೇಶಗಳ ಕಂದ ಹೆಚ್ಚಾಗುತ್ತೆ. ಒರ್ವ ಕ್ರಿಕೆಟಿಗನಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹರ್ಭಜನ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!
ಹರ್ಭಜನ್ ಸಿಂಗ್ ಟ್ವೀಟ್‌ಗೆ ಆಕ್ರೋಷ ವ್ಯಕ್ತಪಡಿಸಿದ ವೀಣಾ ಮಲಿಕ್, ಇಮ್ರಾನ್ ಖಾನ್ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ತನ್ನ ಭಾಷಣದಲ್ಲಿ ಶಾಂತಿ ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ಸ್ಥಿತಿಗತಿ ಕುರಿತು ವಿವರಿಸುವಾಗ ಕೆಲ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಕರ್ಫ್ಯೂ ಹಾಕಿದಾಗ ರಕ್ತಪಾತವಾಗಿತ್ತು. ಇಷ್ಟೇ ಅಲ್ಲ ನ್ಯೂಕ್ಲಿಯರ್ ಬೆದರಿಕೆ ಎಂದಿಲ್ಲ, ಭಯ ಎಂದಿದ್ದಾರೆ ಅಷ್ಟೆ. ನಿಮಗೆ ಇಂಗ್ಲೀಷ್ ಅರ್ಥವಾಗುವಿದಿಲ್ಲವೇ ಎಂದು ವೀಣಾ ಮಲಿಕ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಸೆಹ್ವಾಗ್!
ವೀಣಾ ಮಲಿಕ್ ತಮ್ಮ ಟ್ವೀಟ್‌ನಲ್ಲಿ surely ಎಂದು ಬರೆಯುವಲ್ಲಿ surly ಎಂದು ತಪ್ಪಾಗಿ ಬರೆದಿದ್ದಾರೆ. ಇಂಗ್ಲೀಷ್ ಬರುವುದಿಲ್ಲವೇ ಎಂದ ವೀಣಾ ಮಲಿಕ್‌ಗೆ ಭಜ್ಜಿ ತಿರುಗೇಟು ನೀಡಿದ್ದಾರೆ. ಮುಂದಿನ ಬಾರಿ ನೀವು ಟ್ವೀಟ್ ಮಾಡುವಾಗ ಎರಡು ಬಾರಿ ಓದಿ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.