ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!

By Web DeskFirst Published Oct 8, 2019, 4:43 PM IST
Highlights

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಇದೇ ವೇಳೆ ಪಾಕ್ ಬೌಲರ್‌ಗಳಿಗೆ ಟಾಂಗ್ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

"

ಇಸ್ಲಾಮಾಬಾದ್[ಅ.08]: ಭಾರತದ ಬೌಲರ್’ಗಳು ಅಗತ್ಯವಿದ್ದಾಗ ನನ್ನ ಬಳಿ ಸಲಹೆ ಕೇಳುತ್ತಾರೆ, ಆದರೆ ಪಾಕಿಸ್ತಾನದ ಯಾವೊಬ್ಬ ವೇಗಿಯೂ ನನ್ನನ್ನು ಇದುವರೆಗೂ ಸಲಹೆ ಕೇಳಿಲ್ಲ ಎಂದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಪಾಕ್ ಬಗ್ಗುಬಡಿದ ಲಂಕಾ; ಸರಣಿ ಕೈವಶ

ತಮ್ಮದೇ ಯೂಟ್ಯೂಬ್ ಚಾನೆಲ್’ನಲ್ಲಿ ಮಾತನಾಡಿರುವ ಅಖ್ತರ್, ವೈಜಾಗ್ ಟೆಸ್ಟ್’ನಲ್ಲಿ ಮೊಹಮ್ಮದ್ ಶಮಿ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಶಮಿ ತಮಗೆ ಕಾಲ್ ಮಾಡಿ ಸಲಹೆ ಕೇಳಿದ್ದಾಗಿ ತಿಳಿಸಿದ್ದಾರೆ. 

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲಿನ ಬಳಿಕ ಶಮಿ ನನಗೆ ಕರೆ ಮಾಡಿದ್ದರು. ಅಲ್ಲದೇ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳಲು ನನ್ನ ಬಳಿ ಸಲಹೆ ಕೇಳಿದರು. ನಾನಾಗ ನೀನು ವಿಶ್ವಾಸ ಕಳೆದುಕೊಳ್ಳಬೇಡ. ತವರಿನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ, ಹೀಗಾಗಿ ಫಿಟ್ನೆಸ್ ಕಡೆ ಗಮನ ಕೊಡು ಎಂದಿದ್ದೆ ಎಂದು ಹೇಳಿದ್ದಾರೆ.

ಶಮಿ ಬಳಿ ವೇಗ ಹಾಗೂ  ಚೆಂಡನ್ನು ಸ್ವಿಂಗ್ ಮಾಡುವ ಕಲೆಯಿದೆ. ಉಪಖಂಡದಲ್ಲಿ ರಿವರ್ಸ್ ಸ್ವಿಂಗ್ ಮಾಡುವ ಕೆಲವೇ ಕೆಲವು ವೇಗಿಗಳಲ್ಲಿ ಶಮಿ ಕೂಡಾ ಒಬ್ಬರು. ನೀನು ಮುಂದೊಂದು ದಿನ ರಿವರ್ಸ್ ಸ್ವಿಂಗ್’ನ ಕಿಂಗ್ ಆಗುತ್ತೀಯ ಎಂದು ಹೇಳಿದ್ದೇನೆ ಎಂದಿದ್ದಾರೆ. ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಶಮಿ ಪ್ರದರ್ಶನ ನೋಡಿ ಖುಷಿಯಾಯಿತು ಎಂದಿದ್ದಾರೆ.

ನಮ್ಮ ಬೆಂಬಲ ಭಾರತಕ್ಕೆ, ವಿರಾಟ್ ಪಡೆ ವಿಶ್ವಕಪ್ ಗೆಲ್ಲಲಿ ಎಂದ ಪಾಕ್ ವೇಗಿ..!

ಇದೇ ವೇಳೆ, ಪಾಕ್ ಬೌಲರ್’ಗಳಿಗೆ ಟಾಂಗ್ ಕೊಡುವುದನ್ನು ಅಖ್ತರ್ ಮರೆಯಲಿಲ್ಲ. ಭಾರತೀಯ ಬೌಲರ್’ಗಳೇ ಅಗತ್ಯ ಬಿದ್ದಾಗ ನನ್ನ ಸಲಹೆ ಕೇಳುತ್ತಾರೆ. ಆದರೆ ದುರಾದೃಷ್ಟವೆಂದರೆ, ಪಾಕಿಸ್ತಾನದ ಯಾವೊಬ್ಬ ಬೌಲರ್ ಕೂಡಾ ನನ್ನ ಸಲಹೆ ಕೇಳಿಲ್ಲ ಎಂದಿದ್ದಾರೆ.

ಬೇಸರ ಏನಂದ್ರೆ, ವೇಗ ಹೆಚ್ಚಿಸಿಕೊಳ್ಳುವುದು ಹೇಗೆ, ಸ್ವಿಂಗ್ ಮಾಡುವುದು ಹೇಗೆ ಎಂದು ಕೇಳಲು ಪಾಕಿಸ್ತಾನದ ಬೌಲರ್’ಗಳು ಸಲಹೆ ಕೇಳಲು ಸಮಯವಿಲ್ಲ. ಯುವ ಕ್ರಿಕೆಟಿಗರಾದ ನಸೀಮ್ ಶಾ, ಮೂಸಾ ಖಾನ್ ಮತ್ತು ಹ್ಯಾರಿಸ್ ರವೋಫ್ ವಿಶ್ವದ ಅತಿ ವೇಗದ ಬೌಲರ್’ಗಳಾಗಬಹುದು. ಅವರು ನನ್ನ ಸಲಹೆ ಕೇಳಿದರೆ, ಖಂಡಿತಾ ಸಹಾಯ ಮಾಡುತ್ತೇನೆ ಎಂದು ಅಖ್ತರ್ ಹೇಳಿದ್ದಾರೆ. 
 

click me!