ಲಾಕ್‌ಡೌನ್‌ ಮುಗಿದ ಮೇಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿನ್‌ ಸಲಹೆ

By Kannadaprabha NewsFirst Published Apr 4, 2020, 10:21 AM IST
Highlights

ಕೊರೋನಾ ವೈರಸ್ ಸಂಕಷ್ಟದ ಬಗ್ಗೆ ದೇಶದ ಕ್ರೀಡಾಪಟುಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿನ್ ತೆಂಡುಲ್ಕರ್, ಪ್ರಧಾನಿಗೆ ಉಪಯುಕ್ತ ಸಲಹೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.04): ಲಾಕ್‌ಡೌನ್‌ ಮುಕ್ತಾಯಗೊಂಡ ಮೇಲೆ ಸಾರ್ವಜನಿಕರು ಏಕಾಏಕಿ ರಸ್ತೆಗಿಳಿಯುವುದನ್ನು ತಡೆಯಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ. ಶುಕ್ರವಾರ ಮೋದಿ, ಭಾರತದ ಅಗ್ರ ಕ್ರೀಡಾಪಟುಗಳ ಜತೆ ವಿಡಿಯೋ ಸಂವಾದ ನಡೆಸಿದರು.

ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಉಪನಾಯಕ ರೋಹಿತ್‌ ಶರ್ಮಾ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌, ವಿಶ್ವ ಚಾಂಪಿಯನ್‌ ಶಟ್ಲರ್‌ ಪಿ.ವಿ.ಸಿಂಧು, ದಿಗ್ಗಜ ಅಥ್ಲೀಟ್‌ ಪಿ.ಟಿ.ಉಷಾ, ಚೆಸ್‌ ತಾರೆ ವಿಶ್ವನಾಥನ್‌ ಆನಂದ್‌, ಯುವ ಶೂಟರ್‌ ಮನು ಭಾಕರ್‌, ಅಥ್ಲೀಟ್‌ಗಳಾದ ಹಿಮಾ ದಾಸ್‌, ನೀರಜ್‌ ಚೋಪ್ರಾ ಸೇರಿದಂತೆ 40ಕ್ಕೂ ಹೆಚ್ಚು ಕ್ರೀಡಾ ತಾರೆಯರು ಪಾಲ್ಗೊಂಡಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸಹ ಸಂವಾದದಲ್ಲಿ ಭಾಗಿಯಾಗಿದ್ದರು.

ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಸಂವಾದ 1 ಗಂಟೆಗೂ ಹೆಚ್ಚು ಕಾಲ ನಡೆಯಿತು. ಕೊರೋನಾ ಸೋಂಕು ತಡೆಯಲು ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕ್ರೀಡಾಪಟುಗಳು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ನಿಮ್ಮ ಸಲಹೆಗಳನ್ನು ಪರಿಗಣಿಸುತ್ತೇನೆ. ಸೋಂಕಿನ ವಿರುದ್ಧ ಟೀಂ ಇಂಡಿಯಾ ರೀತಿಯಲ್ಲಿ ನಾವು ಹೋರಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲ ಭಾರತ ಗೆಲ್ಲಲು ಸಹಕಾರಿಯಾಗಲಿದೆ’ ಎಂದರು.

‘ನಮಸ್ತೆ’ ಪಾಲಿಸುವೆ: ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕವೂ ನಾನು ನಿಮ್ಮಂತೆಯೇ ಇತತರೊಂದಿಗೆ ಕೈಕುಲುಕುವ ಬದಲಿಗೆ ‘ನಮಸ್ತೆ’ ಎಂದೇ ಪರಸ್ಪರ ಕುಶಲೋಪರಿ ನಡೆಸಲು ಪ್ರುಯತ್ನಿಸುತ್ತೇನೆ ಎಂದು ಸಚಿನ್‌ ತೆಂಡುಲ್ಕರ್‌, ಮೋದಿಗೆ ತಿಳಿಸಿದರು.
 

click me!