ಏಪ್ರಿಲ್​ನಲ್ಲಿ ಎರಡು KGFಗಳು ರಿಲೀಸ್: ಅಷ್ಟಕ್ಕೂ ಇನ್ನೊಂದು 'ಕೆಜಿಎಫ್' ಯಾವ್ದು ಗೊತ್ತಾ?

By Suvarna News  |  First Published Mar 26, 2022, 9:57 PM IST

ಕೋಲಾರ ಗೋಲ್ಡ್ ಫೀಲ್ಡ್​​. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ಯಾನ್ ಇಂಡಿಯಾ ಸಿನಿಮಾ. 2018ರಲ್ಲಿ ರಿಲೀಸ್ ಆದ ಈ ಸಿನಿಮಾ ಯಾವ ಮಟ್ಟಕ್ಕೆ ಹವಾ ಸೃಷ್ಟಿಸಿದೆ ಅಂದರೆ KGF ಸೆಕೆಂಡ್ ಪಾರ್ಟ್​ ರಿಲೀಸ್​ಗಾಗಿ ಮೂರು ವರ್ಷದಿಂದ ಜತನದಿಂದ ಕಾಯ್ತಿದ್ದಾರೆ ಅಭಿಮಾನಿಗಳು. 


ಕೋಲಾರ (ಮಾ.26): KGF... ಕೋಲಾರ ಗೋಲ್ಡ್ ಫೀಲ್ಡ್​​.. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ಯಾನ್ ಇಂಡಿಯಾ ಸಿನಿಮಾ. 2018ರಲ್ಲಿ ರಿಲೀಸ್ ಆದ ಈ ಸಿನಿಮಾ ಯಾವ ಮಟ್ಟಕ್ಕೆ ಹವಾ ಸೃಷ್ಟಿಸಿದೆ ಅಂದರೆ KGF ಸೆಕೆಂಡ್ ಪಾರ್ಟ್​ ರಿಲೀಸ್​ಗಾಗಿ ಮೂರು ವರ್ಷದಿಂದ ಜತನದಿಂದ ಕಾಯ್ತಿದ್ದಾರೆ ಅಭಿಮಾನಿಗಳು. ಕನ್ನಡಿಗ ಯಶ್​​ ನಟನೆಯ KGF​​​​​​​​​ ಚಾಪ್ಟರ್-2 ಇದೇ ಏಪ್ರಿಲ್​ 14ರಂದು ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಇಡೀ ಭಾರತೀಯ ಚಿತ್ರರಂಗ ಕರ್ನಾಟಕದತ್ತ ಎದುರು ನೋಡ್ತಿದೆ. 

KGF​​​​​​​​​​​​​​​​ ಚಾಪ್ಟರ್-2 ಏಪ್ರಿಲ್​ 14ರಂದು ರಿಲೀಸ್ ಆಗ್ತಿದ್ದರೆ, ಅದಕ್ಕೂ ಮುನ್ನವೇ ಏಪ್ರಿಲ್ 5ರಂದು ಮೈದಾನದಲ್ಲಿ ಮತ್ತೊಂದು KGF ರಿಲೀಸ್ ಆಗ್ತಿದೆ. ಯೆಸ್, ಬಿಗ್ ಸ್ಕ್ರೀನ್​ನಲ್ಲಿ ರಿಲೀಸ್ ಆಗ್ತಿರೋ ಸಿನಿಮಾನೇ ಬೇರೆ. ಸ್ಟೇಡಿಯಂನಲ್ಲಿ ರಿಲೀಸ್ ಆಗೋ ಸಿನಿಮಾನೇ ಬೇರೆ. ಆದ್ರೂ KGF ಸಿನಿಮಾಗಿಂತ ಏಪ್ರಿಲ್ 5ರಂದು ಸ್ಟೇಡಿಯಂನಲ್ಲಿ ರಿಲೀಸ್ ಆಗೋ KGF ನೋಡಲು ಕ್ರಿಕೆಟ್ ಫ್ಯಾನ್ಸ್ ಕಾಯ್ತಿದ್ದಾರೆ. ಅಷ್ಟಕ್ಕೂ ಕ್ರಿಕೆಟ್ ಮೈದಾನದಲ್ಲಿ ರಿಲೀಸ್ ಆಗ್ತಿರೋ ಆ KGF ಯಾವ್ದು ಗೊತ್ತಾ..? ನಮ್ಮ ಆರ್​ಸಿಬಿ. 

Latest Videos

undefined

ಕೆಜಿಎಫ್‌ನ ಬೆಮೆಲ್‌ ಕಾರ್ಖಾನೆ ಮಾರಾಟ ಇಲ್ಲ: ಸಚಿವ ಮುರುಗೇಶ್‌ ನಿರಾಣಿ

K FOR KOHLI: ಯೆಸ್, ಆರ್​ಸಿಬಿಯಲ್ಲಿ ಕೆಜಿಎಫ್ ಇದೆ. ಅದರಲ್ಲಿ K ಮೊದಲ ಅಕ್ಷರವೇ ಕೊಹ್ಲಿ. ಹೌದು, ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟಿರಬಹುದು. ಆದ್ರೆ ಆರ್​ಸಿಬಿ ಬಿಟ್ಟಿಲ್ಲ. ಈ ಸಲವೂ ಆರ್​ಸಿಬಿ ಪರವೇ ಬ್ಯಾಟ್ ಬೀಸೋ ಕಿಂಗ್ ಕೊಹ್ಲಿ, ಬ್ಯಾಟಿಂಗ್ ಟ್ರಂಪ್​ಕಾರ್ಡ್​. ನಾಯಕತ್ವದ ಒತ್ತಡವಿಲ್ಲ. ಹಾಗಾಗಿ ಈ ಸಲ ಕಿಂಗ್ ಕೊಹ್ಲಿಯನ್ನ ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟ. ನಾಯಕನಾಗಿದ್ದಾಗಲೇ ಆ ಮಟ್ಟಕ್ಕೆ ಆರ್ಭಟಿಸುತ್ತಿದ್ದರು. ಈಗ ನಾಯಕತ್ವವಿಲ್ಲ, ಒತ್ತಡವೂ ಇಲ್ಲ. ಕೇವಲ ಪ್ಲೇಯರ್. ಯಾವ್ದೇ ಟೆಕ್ಷನ್ ಇಲ್ಲ. ನಾಯಕನಾಗಿ ಆರ್​​ಸಿಬಿಗೆ ಐಪಿಎಲ್ ಕಪ್ ಗೆಲ್ಲಿಸಿಕೊಡಲಾಗಲಿಲ್ಲ ಅನ್ನೋ ಕೊರಗಿದೆ. ಈಗ ಆಟಗಾರನಾಗಿಯಾದ್ರೂ ಟ್ರೋಫಿ ಗೆಲ್ಲಿಸಿಕೊಡಲು ಎದುರು ನೋಡ್ತಿದ್ದಾರೆ. ಅಲ್ಲಿಗೆ ಈ ಸಲದ ಐಪಿಎಲ್​ನಲ್ಲಿ ಬೌಲರ್​ಗಳ ಪಾಲಿಗೆ ಕೊಹ್ಲಿಯೇ ಸಿಂಹ ಸ್ವಪ್ನ.

G FOR GLENN: ಆಸ್ಟ್ರೇಲಿಯಾದ ಈ ಆಲ್​​ರೌಂಡರ್​, ಗ್ಲೆನ್ ಮ್ಯಾಕ್ಸ್​ವೆಲ್ ಪಂಜಾಬ್ ಕಿಂಗ್ಸ್ ಟೀಮ್​ನಲ್ಲಿದ್ದ ಕಾಲ ಯಾಕೋ ಮಂಕಾಗಿದ್ದರು. 2020ರಲ್ಲಿ ತೀರ ಕಳಪೆ ಪ್ರದರ್ಶನ ನೀಡಿ ಪಂಜಾಬ್​ ಟೀಮ್​ನಿಂದ ಹೊರಬಿದ್ದರು. ಆದ್ರೆ ಪಂಜಾಬ್ ಬಿಟ್ಟಿದ್ದೇ ಬಿಟ್ಟಿದ್ದ ಗ್ಲೆನ್ ನಸೀಬು ಬದಲಾಗಿ ಹೋಯ್ತು. ಕಳೆದ ವರ್ಷ ಯಾವಾಗ ಆರ್​ಸಿಬಿ ಸೇರಿಕೊಂಡರೋ ಅಲ್ಲಿಂದ ಮ್ಯಾಕ್ಸ್​ವೆಲ್ ನಸೀಬು ಮಾತ್ರವಲ್ಲ, ಆರ್​​ಸಿಬಿ ನಸೀಬು ಬದಲಾಯ್ತು. ನಂಬರ್ 4 ಸ್ಲಾಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲ್ಕ ಎದುರಾಳಿ ಬೌಲರ್​ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ತಮ್ಮ ಫೇವರಿಟ್, ಸ್ವಿಚ್ ಹಿಟ್​ಗಳನ್ನ ಬಾರಿಸಿ, ಎದುರಾಳಿಯನ್ನ ಕೆಂಗೆಡಿಸಿದ್ರು. ಈ ಸಲವೂ ಆರ್​ಸಿಬಿ ಪರ ಆಡೋದ್ರಿಂದ ಕೊಹ್ಲಿ ಜೊತೆ ಸೇರಿಕೊಂಡು ಬೌಲರ್​ಗಳನ್ನ ಬೆಂಡೆತ್ತಲು ರೆಡಿಯಾಗಿದ್ದಾರೆ. 

ಹಳೆ ಕಾರುಗಳಿಗೆ ಹೈಟೆಕ್ ಸ್ಪರ್ಶ ನೀಡುವ ಜಾದೂಗಾರ!

F FOR FAF: K ಮತ್ತು G, ಎರಡು ಕಳೆದ ವರ್ಷವೇ ಆರ್​ಸಿಬಿಯಲ್ಲಿದ್ದವು. ಆದ್ರೆ ಈ ಸಲ ಆರ್​ಸಿಬಿಗೆ F ಸೇರಿಕೊಂಡಿದೆ. ಹಾಗಾಗಿಯೇ ಆರ್​ಸಿಬಿ ಈಗ KGF ಆಗಿರೋದು. ಹೌದು, ಈ ಸಲದ ಬಿಡ್​ನಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನ 7 ಕೋಟಿ ಕೊಟ್ಟು ಖರೀದಿಸಿದೆ ಆರ್​ಸಿಬಿ. ಡುಪ್ಲೆಸಿಸ್ ಖರೀದಿಸಿದ ಮೇಲೆನೇ ಆರ್​ಸಿಬಿ KGF ಆಗಿರೋದು. ಫಾಫ್ ಡುಪ್ಲೆಸಿಸ್​, ಸಿಎಸ್​ಕೆಯಲ್ಲಿ ಹೇಗೆ ಆಡಿದ್ರು ಅನ್ನೋದನ್ನ ನಾವು ನೀವೆಲ್ಲಾ ನೋಡಿದ್ದೀವಿ. 37 ವರ್ಷವಾದ್ರೂ ಈಗಲೂ ಫಿಟ್ & ಫೈನ್. ಓಪನಿಂಗ್ ಬ್ಯಾಟ್ಸ್​ಮನ್. ಅದ್ಭುತ ಫೀಲ್ಡರ್. ಈ ಎರಡು ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕೊಹ್ಲಿ, ಗ್ಲೆನ್ ಜೊತೆ ಫಾಫ್ ಸೇರಿದ್ರೆ ಕೆಜಿಎಫ್. ಈ ಕೆಜಿಎಫ್ ಒಟ್ಟಿಗೆ ಆಡಿದ್ರೆ ಆರ್​ಸಿಬಿ ಬ್ಯಾಟಿಂಗ್ ಲೈನ್ ಅಪ್ ವೆರಿ ವೆರಿ ಸ್ಟ್ರಾಂಗ್. ಈ ಮೂವರನ್ನ ಕಟ್ಟಿಹಾಕಲು ಎದುರಾಳಿಗಳು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. 

click me!