IPL 2022 CSK vs KKR ಟಾಸ್ ಬೆನ್ನಲ್ಲೇ ಹೊಸ ದಾಖಲೆ ಬರೆದ ಕ್ಯಾಪ್ಟನ್ ಜಡೇಜಾ!

By Suvarna NewsFirst Published Mar 26, 2022, 7:59 PM IST
Highlights
  • ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯ
  • ಟಾಸ್‌ ಬೆನ್ನಲ್ಲೇ ರವೀಂದ್ರ ಜಡೇಜಾ ಹೊಸ ದಾಖಲೆ
  • ಐಪಿಎಲ್ 2022 ಟೂರ್ನಿಯ ಉದ್ಘಟನಾ ಪಂದ್ಯ

ಮುಂಬೈ(ಮಾ.26): ಐಪಿಎಲ್ 2022 ಟೂರ್ನಿಗೆ ಚಾಲನೆ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಅಂತ್ಯಗೊಂಡಿದೆ. ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟಾಸ್ ಬೆನ್ನಲ್ಲೇ ಚೆನ್ನೈ ನೂತನ ನಾಯಕ ರವೀಂದ್ರ ಜಡೇಜಾ ಹೊಸ ದಾಖಲೆ ಬರೆದಿದ್ದಾರೆ. ಅತೀ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ಬಳಿಕ ನಾಯಕನಾದ ಸಾಧನೆ ಮಾಡಿದ್ದಾರೆ.

ಹೌದು, ರವೀಂದ್ರ ಜಡೇಜಾ ಐಪಿಎಲ್ ಟೂರ್ನಿಯಲ್ಲಿ 200 ಪಂದ್ಯಗಳನ್ನು ತಂಡದ ಆಟಗಾರನಾಗಿ, ಆಲ್ರೌಂಡರ್ ಆಗಿ ಆಡಿದ್ದಾರೆ. 200 ಪಂದ್ಯದ ಬಳಿಕ ಜಡೇಜಾಗೆ ನಾಯಕತ್ವ ಒಲಿದು ಬಂದಿದೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಪಂದ್ಯ ಆಡಿದ ಬಳಿಕ ನಾಯಕ ಪಟ್ಟ ಗಿಟ್ಟಿಸಿಕೊಂಡ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

 ಚೆನ್ನೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್,ತಂಡದಲ್ಲಿ ಯಾರಿಗೆ ಸ್ಥಾನ?

 ಗರಿಷ್ಠ IPL ಪಂದ್ಯ ಆಡಿ ನಾಯಕತ್ವ ಗಿಟ್ಟಿಸಿಕೊಂಡ ಕ್ರಿಕೆಟಿಗರು 
200 ಪಂದ್ಯ: ರವೀಂದ್ರ ಜಡೇಜಾ
153 ಪಂದ್ಯ: ಮನೀಶ್ ಪಾಂಡೆ
137 ಪಂದ್ಯ: ಕೀರನ್ ಪೊಲಾರ್ಡ್
111 ಪಂದ್ಯ: ಆರ್ ಅಶ್ವಿನ್
107 ಪಂದ್ಯ: ಸಂಜು ಸ್ಯಾಮ್ಸನ್
103 ಪಂದ್ಯ: ಭುವನೇಶ್ವರ್ ಕುಮಾರ್

ರವೀಂದ್ರ ಜಡೇಜಾ ಚೆನ್ನೈನ್ನು ಮುನ್ನಡೆಸಲಿರುವ 3ನೇ ನಾಯಕ. ಧೋನಿ ಅನುಪಸ್ಥಿತಿಯಲ್ಲಿ ಕೆಲ ಪಂದ್ಯಗಳಲ್ಲಿ ಸುರೇಶ್‌ ರೈನಾ ತಂಡದ ನಾಯಕತ್ವ ವಹಿಸಿದ್ದರು.

ಧೋನಿಯನ್ನೂ ಬಿಟ್ಟಿಲ್ಲ IPL ಕಾಂಟ್ರವರ್ಸಿಗಳು..! ಈ 3 ವಿವಾದ ನಿಮಗೆ ನೆನಪಿದೆಯಾ..?

2012ರಲ್ಲಿ ಚೆನ್ನೈ ತಂಡಕ್ಕೆ 9.8 ಕೋಟಿ ರು.ಗೆ ಹರಾಜಾಗಿದ್ದ ಜಡೇಜಾ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಸೇರಿ ಎಲ್ಲಾ ವಿಭಾಗದಲ್ಲೂ ತಂಡಕ್ಕೆ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. 2016-17ರಲ್ಲಿ ಗುಜರಾತ್‌ ಲಯನ್ಸ್‌ ಪರ ಆಡಿದ್ದ ಜಡೇಜಾ ಬಳಿಕ 2018ರಲ್ಲಿ ಚೆನ್ನೈ ತಂಡಕ್ಕೆ ಮರಳಿದ್ದರು. 2022ರ ಐಪಿಎಲ್‌ಗೂ ಮುನ್ನ ಅವರನ್ನು ತಂಡ 16 ಕೋಟಿ ರು. ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಒಟ್ಟಾರೆ ಐಪಿಎಲ್‌ನಲ್ಲಿ 200 ಪಂದ್ಯಗಳನ್ನಾಡಿರುವ 33 ವರ್ಷದ ಜಡೇಜಾ 2386 ರನ್‌ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೇ 127 ವಿಕೆಟ್‌ಗಳನ್ನೂ ಪಡೆದಿದ್ದಾರೆ.

2008ರಲ್ಲಿ ಧೋನಿಯನ್ನು ಖರೀದಿಸಿದ್ದ ಚೆನ್ನೈ ತಂಡ, ಅವರಿಗೆ ನಾಯಕತ್ವದ ಹೊಣೆಯನ್ನು ನೀಡಿತ್ತು. ಆದರೆ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಚೆನ್ನೈ ತಂಡ 2016 ಹಾಗೂ 2017ರಿಂದ ಆವೃತ್ತಿಯಲ್ಲಿ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು. ಬಳಿಕ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡ ಸೇರಿದ್ದ ಧೋನಿ, 2 ವರ್ಷಗಳ ಬಳಿಕ ಮತ್ತೆ ಚೆನ್ನೈ ತಂಡಕ್ಕೆ ವಾಪಸಾಗಿ ನಾಯಕತ್ವದ ಹೊಣೆಗಾರಿಗೆ ಮುಂದುವರಿಸಿದ್ದರು.

213 ಪಂದ್ಯಗಳಿಗೆ ನಾಯಕತ್ವ
ಧೋನಿ ಐಪಿಎಲ್‌ ಹಾಗೂ ಚಾಂಪಿಯನ್ಸ್‌ ಲೀಗ್‌ ಟಿ20ಯಲ್ಲಿ ಒಟ್ಟಾರೆ 213 ಪಂದ್ಯಗಳಲ್ಲಿ ಚೆನ್ನೈ ನಾಯಕತ್ವ ವಹಿಸಿದ್ದರು. ಈ ಪೈಕಿ 130 ಪಂದ್ಯಗಳಲ್ಲಿ ಚೆನ್ನೈ ಗೆದ್ದಿದ್ದರೆ, 81 ಪಂದ್ಯಗಳಲ್ಲಿ ಸೋಲನುಭವಿಸಿದೆ.

4 ಬಾರಿ ಚಾಂಪಿಯನ್‌, 5 ಬಾರಿ ರನ್ನರ್‌-ಅಪ್‌!
ಧೋನಿ ಐಪಿಎಲ್‌ ಕಂಡ ಅತ್ಯಂತ ಯಶಸ್ವಿ ನಾಯಕ. 2020ರ ಆವೃತ್ತಿ ಹೊರತುಪಡಿಸಿ ಉಳಿದೆಲ್ಲಾ ವರ್ಷ ಚೆನ್ನೈಯನ್ನು ಪ್ಲೇ-ಆಪ್‌ಗೇರಿಸಿದ್ದ ಧೋನಿ, 9 ಬಾರಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಈ ಪೈಕಿ 2010, 2011, 2018 ಹಾಗೂ 2021ರಲ್ಲಿ ಚೆನ್ನೈ ಚಾಂಪಿಯನ್‌ ಪಟ್ಟಅಲಂಕರಿಸಿತ್ತು. 2008, 2012, 2013, 2015 ಹಾಗೂ 2019ರಲ್ಲಿ ರನ್ನರ್‌-ಅಪ್‌ ಆಗಿತ್ತು.

ಚಾಂಪಿಯನ್ಸ್‌ ಲೀಗ್‌ನಲ್ಲೂ ಹವಾ
3 ದೇಶಗಳ ನಡುವಿನ ಟಿ20 ಲೀಗ್‌ ಚಾಂಪಿಯನ್ಸ್‌ ಲೀಗ್‌ನಲ್ಲೂ ಚೆನ್ನೈ ತಂಡವನ್ನು ಧೋನಿ ಯಶಸ್ಸಿನತ್ತ ಕೊಂಡೊಯ್ದಿದ್ದರು. 2010ರ ಬಳಿಕ ಸತತ 5 ವರ್ಷ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ತಂಡ 2010 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

click me!