IPL 2022 CSK vs KKR ಎಂಎಸ್ ಧೋನಿ ಅರ್ಧಶತಕ, ಚೆನ್ನೈ ಸಾಧಾರಣ ಮೊತ್ತ

Published : Mar 26, 2022, 09:19 PM ISTUpdated : Mar 26, 2022, 09:26 PM IST
IPL 2022 CSK vs KKR ಎಂಎಸ್ ಧೋನಿ ಅರ್ಧಶತಕ, ಚೆನ್ನೈ ಸಾಧಾರಣ ಮೊತ್ತ

ಸಾರಾಂಶ

ಚೆನ್ನೈ ತಂಡಕ್ಕೆ ಆರಂಭಿಕ ಆಘಾತ ನೀಡಿದ ಉಮೇಶ್ ಯಾದವ್ ಸೂಪರ್ ಕಿಂಗ್ಸ್ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದ ಎಂಎಸ್ ಧೋನಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್  

ಮುಂಬೈ (ಮಾ. 26): ತಂಡದ ಅಲ್ಪ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ವೇಳೆ ಕ್ರೀಸ್ ಗಿಳಿದ ಅನುಭವಿ ಬ್ಯಾಟ್ಸ್ ಮನ್ ಹಾಗೂ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಆಡಿದ ಆಕರ್ಷಕ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022 )ಮೊದಲ ಪಂದ್ಯದಲ್ಲಿ ಕೆಕೆಆರ್ (KKR) ವಿರುದ್ಧ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ ನೈಟ್ ರೈಡರ್ಸ್ ( kolkata knight riders) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭದಲ್ಲಿ ಉಮೇಶ್ ಯಾದವ್ ( Umesh Yadav ) ನೀಡಿದ ಘಾತಕ ಪೆಟ್ಟಿನಿಂದ 61 ರನ್ ಗಳಿಗೆ ಪ್ರಮುಖ 5 ವಿಕೆಡ್ ಕಳೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಕೊನೆಯಲ್ಲಿ ಎಂಎಸ್ ಧೋನಿ (50*ರನ್, 38 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ರವೀಂದ್ರ ಜಡೇಜಾ (26*ರನ್, 28 ಎಸೆತ, 1 ಸಿಕ್ಸರ್) ಸಾಹಸದಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ಗೆ 131 ರನ್ ಪೇರಿಸಿತು.

ಕಳೆದ ವರ್ಷ ಫಾಫ್ ಡು ಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಜೋಡಿಯ ಭರ್ಜರಿ ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್  ತಂಡದ ದೊಡ್ಡ ಯಶಸ್ಸಿಗೆ ಕಾರಣವಾಗಿತ್ತು. ಆದರೆ, ಅಂಥ ಕಮಾಲ್‌ ಮಾಡುವಲ್ಲಿ ಹೊಸ ಆರಂಭಿಕ ಜೋಡಿ ವಿಫಲವಾಯಿತು. ಕಳೆದ ವರ್ಷದ ಐಪಿಎಲ್ ನಲ್ಲಿ ಸಾಲು ಸಾಲು ಅರ್ಧಶತಕಗಳೊಂದಿಗೆ ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್ ಮನ್ ಅಗಿ ಗುರುತಿಸಿಕೊಂಡಿದ್ದ ರುತುರಾಜ್ ಗಾಯಕ್ವಾಡ್ ಉಮೇಶ್ ಯಾದವ್ ಎಸೆದ ಮೊದಲ ಓವರ್ ನ ಮೂರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

IPL 2022 ಚೆನ್ನೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್,ತಂಡದಲ್ಲಿ ಯಾರಿಗೆ ಸ್ಥಾನ?

ಮೊದಲ ಓವರ್ ನಲ್ಲಿ ಅನಿರೀಕ್ಷಿತ ಆಘಾತ ಕಂಡಿದ್ದ ಚೆನ್ನೈ ತಂಡಕ್ಕೆ 2ನೇ ವಿಕೆಟ್ ಗೆ ನ್ಯೂಜಿಲೆಂಡ್ ನ ಡೆವೋನ್ ಕಾನ್ವೆ ಹಾಗೂ ಕರ್ನಾಟಕದ ರಾಬಿನ್ ಉತ್ತಪ್ಪ 26 ರನ್ ಜೊತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಈ ವೇಳೆ ಮತ್ತೆ ದಾಳಿಗಿಳಿದ ಉಮೇಶ್ ಯಾದವ್, 3 ರನ್ ಬಾರಿಸಿದ್ದ ಕಾನ್ವೆ ವಿಕೆಟ್ ಉರುಳಿಸಿದರು. ಪವರ್ ಪ್ಲೇ ಅವಧಿಯಲ್ಲಿ ಚೆನ್ನೈ ತಂಡ ನೀರಸ ಆಟವಾಡಿದ್ದರೂ, ರಾಬಿನ್ ಉತ್ತಪ್ಪ ಮಾತ್ರ ಕೆಲ ಬೌಂಡರಿ ಸಿಕ್ಸರ್ ಗಳ ಮೂಲಕ ಗಮನಸೆಳೆದಿದ್ದರು. 21 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್ ಇದ್ದ 28 ರನ್ ಬಾರಿಸಿದ ಉತ್ತಪ್ಪ, 8ನೇ ಓವರ್ ನಲ್ಲಿ ವರುಣ್ ಚಕ್ರವರ್ತಿಗೆ ವಿಕೆಟ್ ನೀಡಿದಾಗ ಚೆನ್ನೈ ತಂಡಕ್ಕೆ ಅರ್ಧಶತಕದ ಗಡಿ ಮುಟ್ಟಲು ಇನ್ನು 1 ರನ್ ಬೇಕಿತ್ತು.

IPL 2022 CSK vs KKR ಟಾಸ್ ಬೆನ್ನಲ್ಲೇ ಹೊಸ ದಾಖಲೆ ಬರೆದ ಕ್ಯಾಪ್ಟನ್ ಜಡೇಜಾ!

ಉತ್ತಪ್ಪ ನಿರ್ಗಮನದ ಬಳಿಕ ಅಂಬಟಿ ರಾಯುಡು (15) ಹಾಗೂ ಆಲ್ರೌಂಡರ್ ಶಿವಂ ದುಬೆ (3) ವಿಕೆಟ್ ಗಳನ್ನು ಉರುಳಿಸಿದ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಕಡಿವಾಣ ಹೇರಲು ಯಶಸ್ವಿಯಾಯಿತು. 61 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ನಾಯಕ ರವೀಂದ್ರ ಜಡೇಜಾಗೆ ಜತೆಯಾದ ದಿಗ್ಗಜ ನಾಯಕ ಎಂಎಸ್ ಧೋನಿ, ಆರಂಭದಲ್ಲಿ ನಿಧಾಗತಿಯ ಆಟವಾಡಿ ಚೆನ್ನೈ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ