ಬಾಂಗ್ಲಾದೇಶ ವಿರುದ್ದದ ಟಿ20 ಹಾಗೂ ಟೆಸ್ಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡೋ ಕುರಿತು ಬಿಸಿಸಿಐ ನೂತನ ಅಧ್ಯಕ್ಷ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಲ್ಕತಾ(ಅ.22): ಬಿಸಿಸಿಐನ ನೂತನ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಲಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳುವುದು, ಬಿಡುವುದು ಕೊಹ್ಲಿಗೆ ಬಿಟ್ಟವಿಚಾರ ಎಂದಿದ್ದಾರೆ. ಅ.24ರಂದು ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ತಂಡವನ್ನು ಆಯ್ಕೆ ಮಾಡಲಾಗುತ್ತದೆ. ‘ನಾನು ಅ.24ರಂದು ಕೊಹ್ಲಿಯನ್ನು ಭೇಟಿಯಾಗುತ್ತೇನೆ. ಬಿಸಿಸಿಐ ಅಧ್ಯಕ್ಷ ತಂಡದ ನಾಯಕನೊಂದಿಗೆ ಹೇಗೆ ಮಾತನಾಡುತ್ತಾರೋ ಅದೇ ರೀತಿ ಮಾತನಾಡುತ್ತೇನೆ. ಅವರು ತಂಡದ ನಾಯಕ, ವಿಶ್ರಾಂತಿ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬಹುದಾಗಿದೆ’ ಎಂದು ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಬಾಂಗ್ಲಾ ಸರಣಿ ಅನುಮಾನ!
undefined
ವಿಶ್ವಕಪ್ ಟೂರ್ನಿ ಬಳಿಕ ನಡೆದ ವೆಸ್ಟ್ ಇಂಡೀಸ್ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಕೊಹ್ಲಿ ರೆಸ್ಟ್ ತೆಗೆದುಕೊಳ್ಳದೇ ಆಡಿದ್ದರು. ಇದೀಗ ಬಾಂಗ್ಲಾ ವಿರುದ್ಧದ ಸರಣಿಗೆ ಕೊಹ್ಲಿಗೆ ಬ್ರೇಕ್ ನೀಡಲು ಬಿಸಿಸಿಐ ಚಿಂತಿಸಿದೆ. ಇದೀಗ ಕೊಹ್ಲಿ ನಿರ್ಧಾರದ ಮೇಲೆ ಆಯ್ಕೆ ಸಮಿತಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: ಬಾಂಗ್ಲಾ ಟಿ20 ಸರಣಿಯಿಂದ ಈ ಕ್ರಿಕೆಟಿಗನಿಗೆ ಗೇಟ್ ಪಾಸ್..?
ನವೆಂಬರ್ 3 ರಿಂದ ಬಾಂಗ್ಲಾದೇಶ ವಿರುದ್ದದ 3 ಟಿ20 ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ಆದರೆ ಶಕೀಬ್ ಅಲ್ ಹಸನ್, ಮುಷ್ಫೀಕರ್ ರಹೀಮ್ ಸೇರಿದಂತೆ ಬಾಂಗ್ಲಾ ಕ್ರಿಕೆಟಿಗರು ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಭಾರತ ಹಾಗೂ ಬಾಂಗ್ಲಾ ನಡುವಿನ ಸರಣಿ ನಡೆಯುವುದೇ ಅನುಮಾನವಾಗಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ, ಸರಣಿ ನಡೆಯಲಿದೆ ಎಂದಿದ್ದಾರೆ.