ದುಬಾರಿಯಾದ ಐಪಿಎಲ್‌ನ ಕಾಸ್ಟ್ಲಿ ಆಟಗಾರ ಮಿಚೆಲ್ ಸ್ಟಾರ್ಕ್..! ಕೆಕೆಆರ್ ಫ್ರಾಂಚೈಸಿ ಟ್ರೋಲ್ ಮಾಡಿದ ನೆಟ್ಟಿಗರು

Published : Mar 24, 2024, 10:40 AM IST
ದುಬಾರಿಯಾದ ಐಪಿಎಲ್‌ನ ಕಾಸ್ಟ್ಲಿ ಆಟಗಾರ ಮಿಚೆಲ್ ಸ್ಟಾರ್ಕ್..! ಕೆಕೆಆರ್ ಫ್ರಾಂಚೈಸಿ ಟ್ರೋಲ್ ಮಾಡಿದ ನೆಟ್ಟಿಗರು

ಸಾರಾಂಶ

ಸದ್ಯ ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಎಡಗೈ ಮಾರಕ ವೇಗಿ ಎಂದು ಗುರುತಿಸಿಕೊಂಡಿದ್ದ ಮಿಚೆಲ್ ಸ್ಟಾರ್ಕ್, ಐಪಿಎಲ್‌ನಲ್ಲಿ ಕೂಡಾ ತಮ್ಮ ಝಲಕ್ ತೋರಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಅದರಲ್ಲೂ 19ನೇ ಓವರ್ ಬೌಲಿಂಗ್ ಮಾಡಿದ ಸ್ಟಾರ್ಕ್‌, ಹೆನ್ರಿಚ್ ಕ್ಲಾಸೇನ್ ಹಾಗೂ ಶಾಬಾಜ್ ಅಹಮ್ಮದ್ ಬರೋಬ್ಬರಿ 26 ರನ್ ಚಚ್ಚಿಸಿದರು. ಇದರ ಬೆನ್ನಲ್ಲೇ ನೆಟ್ಟಿಗರು ಸ್ಟಾರ್ಕ್ ಅವರನ್ನು ಹೀಗೆಲ್ಲಾ ಟ್ರೋಲ್ ಮಾಡಿದ್ದಾರೆ.

ಕೋಲ್ಕತಾ(ಮಾ.24): 2024ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಕಳೆದ ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮಿಚೆಲ್ ಸ್ಟಾರ್ಕ್‌ಗೆ 24.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಹೀಗಾಗಿ ಐಪಿಎಲ್‌ನಲ್ಲಿ ಆಸೀಸ್ ಮೂಲದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮೇಲೆ ಫ್ರಾಂಚೈಸಿ ಸಾಕಷ್ಟು ನಿರೀಕ್ಷೆಯಿಟ್ಟಿತ್ತು. ಆದರೆ ಮೊದಲ ಪಂದ್ಯದಲ್ಲೇ ಸ್ಟಾರ್ಕ್ ಆ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ಕ್ ಹಾಗೂ ಕೆಕೆಆರ್ ಫ್ರಾಂಚೈಸಿಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾರಂಭಿಸಿದ್ದಾರೆ.

ಹೌದು, ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ 4 ಓವರ್ ಬೌಲಿಂಗ್ ಮಾಡಿ 53 ರನ್ ಚಚ್ಚಿಸಿಕೊಂಡರು. ಸ್ಟಾರ್ಕ್ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ಪರ ಯುವ ವೇಗಿ ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಆಂಡ್ ರಸೆಲ್ 2 ಹಾಗೂ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.  

ಮೇ 26ಕ್ಕೆ ಚೆನ್ನೈನಲ್ಲಿ ಐಪಿಎಲ್ ಫೈನಲ್ ಪಂದ್ಯ..?

ಸದ್ಯ ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಎಡಗೈ ಮಾರಕ ವೇಗಿ ಎಂದು ಗುರುತಿಸಿಕೊಂಡಿದ್ದ ಮಿಚೆಲ್ ಸ್ಟಾರ್ಕ್, ಐಪಿಎಲ್‌ನಲ್ಲಿ ಕೂಡಾ ತಮ್ಮ ಝಲಕ್ ತೋರಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಅದರಲ್ಲೂ 19ನೇ ಓವರ್ ಬೌಲಿಂಗ್ ಮಾಡಿದ ಸ್ಟಾರ್ಕ್‌, ಹೆನ್ರಿಚ್ ಕ್ಲಾಸೇನ್ ಹಾಗೂ ಶಾಬಾಜ್ ಅಹಮ್ಮದ್ ಬರೋಬ್ಬರಿ 26 ರನ್ ಚಚ್ಚಿಸಿದರು. ಇದರ ಬೆನ್ನಲ್ಲೇ ನೆಟ್ಟಿಗರು ಸ್ಟಾರ್ಕ್ ಅವರನ್ನು ಹೀಗೆಲ್ಲಾ ಟ್ರೋಲ್ ಮಾಡಿದ್ದಾರೆ.

ಕ್ಲಾಸೆನ್‌ ಕಿಚ್ಚಿಗೂ ಬೆಚ್ಚದ ನೈಟ್‌ ರೈಡರ್ಸ್‌!

ಕೋಲ್ಕತಾ: ಹೆನ್ರಿಚ್ ಕ್ಲಾಸೆನ್‌ ಸಾಹಸಿಕ ಹೋರಾಟದ ಹೊರತಾಗಿಯೂ 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ವೀರೋಚಿತ ಸೋಲಿನ ಆರಂಭ ಪಡೆದಿದೆ. ಸಿಕ್ಸರ್‌ಗಳ ಸುರಿಮಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ 4 ರನ್ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ 7 ವಿಕೆಟ್‌ ಕಳೆದುಕೊಂಡು ಬರೋಬ್ಬರಿ 208 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಹೈದರಾಬಾದ್‌ ಕ್ಲಾಸೆನ್‌ ಸಾಹಸದ ಹೊರತಾಗಿಯೂ  7 ವಿಕೆಟ್‌ಗೆ 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಆರಂಭಿಕರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಅಭಿಷೇಕ್‌ ಶರ್ಮಾ 33 ಎಸೆತಗಳಲ್ಲಿ 60 ರನ್‌ ಸೇರಿಸಿತು. ಆದರೆ ತಲಾ 32 ರನ್‌ ಗಳಿಸಿ ಇಬ್ಬರೂ ಔಟಾದ ಬಳಿಕ ತಂಡದ ರನ್‌ ವೇಗ ಕುಸಿಯಿತು.

16 ಓವರಲ್ಲಿ 133 ರನ್ ಗಳಿಸಿದ್ದ ತಂಡಕ್ಕೆ ಕೊನೆ 4 ಓವರಲ್ಲಿ 76 ರನ್‌ ಬೇಕಿತ್ತು. ರಸೆಲ್‌ ಎಸೆದ 17ನೇ ಓವರಲ್ಲಿ ಕ್ಲಾಸೆನ್‌-ಶಾಬಾದ್‌ ಅಹ್ಮದ್‌ 16 ರನ್‌ ದೋಚಿದರೆ, ವರುಣ್‌ ಚಕ್ರವರ್ತಿಯ 18ನೇ ಓವರಲ್ಲಿ 21 ರನ್‌ ಮೂಡಿಬಂತು. ಮಿಚೆಲ್‌ ಸ್ಟಾರ್ಕ್‌ ಎಸೆದ 19ನೇ ಓವರಲ್ಲಿ 26 ರನ್‌ ಚಚ್ಚಿದ ತಂಡಕ್ಕೆ ಕೊನೆ ಓವರಲ್ಲಿ ಬೇಕಿದ್ದಿದು 13 ರನ್‌. ಆದರೆ ಹರ್ಷಿತ್ ರಾಣಾ ಮ್ಯಾಜಿಕ್‌ ಮಾಡಿದರು. ಕ್ಲಾಸೆನ್‌, ಶಾಬಾಜ್‌ ಇಬ್ಬರನ್ನೂ ಔಟ್‌ ಮಾಡಿದರು. ಕೊನೆ ಎಸೆತಕ್ಕೆ 5 ರನ್‌ ಬೇಕಿದ್ದಾಗ ಕಮಿನ್ಸ್‌ ಸಿಕ್ಸರ್‌ ಸಿಡಿಸಲು ವಿಫಲರಾದರೆ, ಕೆಕೆಆರ್‌ ಗೆಲುವಿನ ಸಂಭ್ರಮದಲ್ಲಿ ತೇಲಾಡಿತು.

ರಸೆಲ್‌ ಅಬ್ಬರ: ಇದಕ್ಕೂ ಮುನ್ನ ಕೆಕೆಆರ್‌ ರಸೆಲ್‌, ಸಾಲ್ಟ್‌ ಅಬ್ಬರದಿಂದಾಗಿ ಬೃಹತ್‌ ಮೊತ್ತ ಕಲೆಹಾಕಿತು. ಆರಂಭಿಕ ಸಾಲ್ಟ್‌ 50 ರನ್‌ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ರಸೆಲ್‌ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 64 ರನ್‌ ಚಚ್ಚಿದರು. ರಮನ್‌ದೀಪ್‌ 17 ಎಸೆತದಲ್ಲಿ 35, ರಿಂಕು 15 ಎಸೆತಗಳ್ಲಿ 23 ರನ್‌ ಕೊಡುಗೆ ನೀಡಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!