ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಬಾಂಗ್ಲಾದೇಶ ತಂಡವು, ಇದೀಗ ಭಾರತದ ವಿರುದ್ಧವೂ ಗೆಲುವು ಸಾಧಿಸಲು ಹಾತೊರೆಯುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಈವರೆಗೂ ಭಾರತದ ವಿರುದ್ಧ ಗೆದ್ದಿಲ್ಲ. ಆದ್ರೆ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಹಲವು ಬಾರಿ ಗೆದ್ದು ಬೀಗಿದೆ. ಆ ಮೂಲಕ ಟೀಂ ಇಂಡಿಯಾಗೆ ಶಾಕ್ ನೀಡಿದೆ. ಈಗ ಟೆಸ್ಟ್‌ನಲ್ಲೂ ಸೋಲಿನ ರುಚಿ ತೋರಿಸೋಕೆ ಸಿದ್ದವಾಗಿದೆ. ಬನ್ನಿ, ಹಾಗಾದ್ರೆ ಬಾಂಗ್ಲಾದೇಶ ಟೀಂ ಇಂಡಿಯಾಗೆ ಯಾವಾಗೆಲ್ಲಾ ಶಾಕ್ ನೀಡಿತ್ತು.? ಅನ್ನೋದನ್ನ ನೋಡ್ಕೊಂಡು ಬರೋಣ
ಟೆಸ್ಟ್‌ನಲ್ಲೂ ರೋಹಿತ್ ಶರ್ಮಾ ಪಡೆಗೆ ಶಾಕ್ ನೀಡಲು ಬಾಂಗ್ಲಾ ಪಣ..!
undefined
ಟೀಂ ಇಂಡಿಯಾ -ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕೌಂಟ್‌ಡೌನ್ ಶುರುವಾಗಿದೆ. 12 ವರ್ಷಗಳಿಂದ ಭಾರತ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲ. ಈಗ ಬಾಂಗ್ಲಾದೇಶ ವಿರುದ್ಧವೂ ಗೆಲುವಿನ ಜೈತ್ರಯಾತ್ರೆ ಮುಂದುವರಿಸಲು ರೋಹಿತ್ ಶರ್ಮಾ ಸೈನ್ಯ ರೆಡಿಯಾಗಿದೆ. ಬಾಂಗ್ಲಾ ಪಡೆಗೆ ಹೋಲಿಸಿದ್ರೆ ಭಾರತೀಯ ಪಡೆ ಎಲ್ಲಾ ವಿಭಾಗಗಳಲ್ಲೂ ಸಖತ್ ಸ್ಟ್ರಾಂಗ್ ಆಗಿದೆ. ಹಾಗಂತ, ಬಾಂಗ್ಲಾ ಹುಲಿಗಳನ್ನ ಹಗುರವಾಗಿ ಪರಿಗಣಿಸಿದ್ರೆ, ಮುಖಭಂಗ ತಪ್ಪಿದ್ದಲ್ಲ. ಅದಕ್ಕೆ ಈ ಪಂದ್ಯಗಳೇ ಸಾಕ್ಷಿ!
RCB, ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತಾಡಿದ ಕನ್ನಡಿಗ ಕೆ ಎಲ್ ರಾಹುಲ್
2007ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಗೆಲುವಿನ ಬಾವುಟ..!
2007ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮೊದಲ ಬಾರಿ ಟೀಂ ಇಂಡಿಯಾಗೆ ಮೊದಲ ಬಾರಿ ಶಾಕ್ ನೀಡಿತ್ತು. ನಾಯಕ ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್‌ರಂಥ ಘಟಾನುಘಟಿ ಆಟಗಾರರಿದ್ದ ತಂಡದ ವಿರುದ್ಧ ಗೆದ್ದು ಬೀಗಿತ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದ್ರಾವಿಡ್ ಪಡೆ, 49.3 ಓವರ್‌ನಲ್ಲಿ 191 ರನ್ಗೆ ಆಲೌಟ್ ಆಗಿತ್ತು. ಈ ಗುರಿಯನ್ನ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು, ಇನ್ನು 9 ಎಸೆತಗಳು ಬಾಕಿ ಇರುವಂತೆಯೆ ತಲುಪಿತ್ತು. ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಔಟ್ ಆಗಲು ಕಾರಣವಾಗಿತ್ತು. ಈ ಸೋಲನ್ನ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ.
ಕರ್ನಾಟಕ ರಣಜಿ ಸಂಭವನೀಯರ ಪಟ್ಟಿಯಲ್ಲಿ ದ್ರಾವಿಡ್ ಪುತ್ರ ಸಮಿತ್‌ಗೆ ಸ್ಥಾನ!
2015ರಲ್ಲಿ ಮೊದಲ ಬಾರಿ ಏಕದಿನ ಸರಣಿ ಜಯ..!
2015ರ ಏಕದಿನ ವಿಶ್ವಕಪ್ ನಂತರ ಧೋನಿ ನಾಯಕತ್ವದ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಏಕೈಕ ಟೆಸ್ಟ್ ಕಾದಾಟದಲ್ಲಿ ಗೆಲುವು ಸಾಧಿಸಿದ್ದ ಧೋನಿ ಪಡೆ, ಏಕದಿನ ಸರಣಿಯಲ್ಲಿ ಮಕಾಡೆ ಮಲಗಿತ್ತು. ಮೂರು ಪಂದ್ಯಗಳ ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಸೋಲು ಕಂಡು, ಸರಣಿ ಕೈಚೆಲ್ಲಿತ್ತು. ಆ ಮೂಲಕ ಬಾಂಗ್ಲಾದೇಶ ವಿರುದ್ಧ ಸರಣಿ ಸೋತ ಮೊದಲು ಕ್ಯಾಪ್ಟನ್ ಅನ್ನೋ ದಾಖಲೆ ಧೋನಿ ಹೆಗಲೇರಿತ್ತು.
2022ರಲ್ಲಿ ರೋಹಿತ್ ಶರ್ಮಾ ಪಡೆ ವಿರುದ್ಧ ಗೆಲುವು..!
2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಟೂರ್ ಕೈಗೊಂಡಿತ್ತು. ಏಕದಿನ ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಇದರೊಂದಿಗೆ ಭಾರತದ ವಿರುದ್ಧ ಎರಡನೇ ಬಾರಿ ಬಾಂಗ್ಲಾ ಸರಣಿ ಗೆದ್ದುಕೊಂಡಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಈವರೆಗೂ ಭಾರತದ ವಿರುದ್ಧ ಗೆದ್ದಿಲ್ಲ. ಆದ್ರೆ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಹಲವು ಬಾರಿ ಗೆದ್ದು ಬೀಗಿದೆ. ಆ ಮೂಲಕ ಟೀಂ ಇಂಡಿಯಾಗೆ ಶಾಕ್ ನೀಡಿದೆ. ಈಗ ಟೆಸ್ಟ್‌ನಲ್ಲೂ ಸೋಲಿನ ರುಚಿ ತೋರಿಸೋಕೆ ಸಿದ್ದವಾಗಿದೆ. ನಮ್ಮವರು ಸ್ವಲ್ಪ ಯಾಮಾರಿದ್ರೂ ಪಾಕಿಸ್ತಾನಕ್ಕೆ ಆದ ಗತಿಯೇ ಆದರೂ ಅಚ್ಚರಿ ಇಲ್ಲ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್