RCB, ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತಾಡಿದ ಕನ್ನಡಿಗ ಕೆ ಎಲ್ ರಾಹುಲ್

By Naveen KodaseFirst Published Sep 17, 2024, 12:37 PM IST
Highlights

ಕನ್ನಡಿಗ ಕೆ ಎಲ್ ರಾಹುಲ್ ರಾಹುಲ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡುತ್ತಾರಾ ಎನ್ನುವುದರ ಕುರಿತಂತೆ ಮಹತ್ವದ ಅಪ್‌ಡೇಟ್ ಕೊಟ್ಟಿದ್ದಾರೆ. ಏನದು? ನೋಡೋಣ ಬನ್ನಿ 

ಹಲವು ವರ್ಷಗಳಿಂದ ಈ ಆಟಗಾರನನ್ನ ತಂಡಕ್ಕೆ ಸೇರಿಸಿಕೊಳ್ಳಿ ಅಂತ ಆರ್‌ಸಿಬಿ ಫ್ಯಾನ್ಸ್, ಆರ್‌ಸಿಬಿ ಫ್ರಾಂಚೈಸಿಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೀಗ, ಆ ಆಟಗಾರನೇ ನಾನು ಆರ್‌ಸಿಬಿ ಪರ ಆಡಲು ಕಾಯ್ತಿದ್ದೇನೆ ಅಂತ ಹೇಳಿದ್ದಾರೆ. ಇದ್ರಿಂದ ಈ ಬಾರಿಯಾದ್ರೂ ಈ ಸ್ಟೈಲಿಶ್ ಪ್ಲೇಯರ್, ಆರ್‌ಸಿಬಿಗೆ ಎಂಟ್ರಿ ಕೊಡ್ತಾರಾ..? ಅನ್ನೋ ಪ್ರಶ್ನೆ ಮೂಡಿದೆ. 

ಮತ್ತೆ ಆರ್‌ಸಿಬಿ ಸೈನ್ಯ ಸೇರಲು ಕನ್ನಡಿಗ ರೆಡಿ..! 

Latest Videos

ಸದ್ಯ ಟೀಂ ಇಂಡಿಯಾದಲ್ಲಿರೋ ಏಕೈಕ ಕನ್ನಡಿಗ ಅಂದ್ರೆ, ಅದು ಕೆ ಎಲ್ ರಾಹುಲ್. ಈ ಸ್ಟಾರ್ ಪ್ಲೇಯರ್ ನಮ್ಮ ಆರ್‌ಸಿಬಿಯಲ್ಲಿ ಇರಬೇಕು ಅನ್ನೋದೆ ಕನ್ನಡಿಗರ ಆಸೆ. ಸದ್ಯ ಲಖನೌ ಸೂಪರ್‌ಜೈಂಟ್ಸ್ ತಂಡದ ಪರ ರಾಹುಲ್ ಆಡ್ತಿದ್ದಾರೆ.  ಆದ್ರೆ, ಈ ಐಪಿಎಲ್‌ ಸೀಸನ್ 18ಕ್ಕೂ ಮುನ್ನ ರಾಹುಲ್ ಆರ್‌ಸಿಬಿಗೆ ಕಮ್‌ಬ್ಯಾಕ್ ಮಾಡಲೇಬೇಕು ಅಂತ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಈ ನಡುವೆ ರಾಹುಲ್ ಆರ್‌ಸಿಬಿಗೆ ಎಂಟ್ರಿ ನೀಡೋ ಸೂಚನೆ ನೀಡಿದ್ದಾರೆ. ಈ ಸುದ್ದಿ ಕೇಳಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. 

ಆರ್‌ಸಿಬಿ ಆಭಿಮಾನಿಯೊಬ್ಬ ರಾಹುಲ್‌ಗೆ ಆರ್‌ಸಿಬಿ ಎಂದರೆ ನನಗೆ ತುಂಬ ಇಷ್ಟ. ಬಹಳ ವರ್ಷಗಳಿಂದ ನಾನು ಆರ್‌ಸಿಬಿ ದೊಡ್ಡ ಅಭಿಮಾನಿಯಾಗಿದ್ದೇನೆ. ನೀವು ಮತ್ತೊಮ್ಮೆ ಆರ್‌ಸಿಬಿ ಪರ  ಆಡುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾನೆ. ಇದಕ್ಕೆ ರಾಹುಲ್ ಪ್ರತಿಕ್ರಿಸಿದ ರಾಹುಲ್, ನಾನು ಕೂಡ ಹಾಗೆ ಆಗಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ. 

I'm happy that KL Rahul knows about the rumours that are going around for him & RCB.

Please boss change your IPL team! 🙏❤️ pic.twitter.com/Os06Uj39gQ

— Kunal Yadav (@Kunal_KLR)

ಆರ್‌ಸಿಬಿ, ಬೆಂಗಳೂರಿನ ಬಗ್ಗೆ ಕೆ ಎಲ್ ರಾಹುಲ್ ಹೇಳಿದ್ದೇನು ಗೊತ್ತಾ..?  

ಇನ್ನು ರಾಹುಲ್ ಹಲವು ಬಾರಿ ಆರ್‌ಸಿಬಿ ಪರ ಆಡೋ ಆಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಆರ್ ಅಶ್ವಿನ್‌ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಆರ್‌ಸಿಬಿ ಮತ್ತು ಬೆಂಗಳೂರಿನ ಮೇಲಿನ ತಮ್ಮ ಪ್ರೀತಿ ಅಭಿಮಾನವನ್ನ ಹೊರಹಾಕಿದ್ರು.  

ಬಾಂಗ್ಲಾ ಟೆಸ್ಟ್‌ಗೆ ಭಾರತ ತಂಡ ಕಠಿಣ ಅಭ್ಯಾಸ; ಚೆನ್ನೈ ಟೆಸ್ಟ್‌ಗೆ ಟೀಂ ಇಂಡಿಯಾದಿಂದ 3 ಸ್ಪಿನ್ನರ್ ಕಣಕ್ಕೆ?

ನಾನು ಕರ್ನಾಟಕದ ಆಟಗಾರ, ನನ್ನ ಊರು ಬೆಂಗಳೂರು, ಚಿನ್ನಸ್ವಾಮಿ ನನ್ನ ಮನೆ,  ಅದು ಯಾವತ್ತಿಗೂ  ಬದಲಾಗಲ್ಲ. ಪ್ರತಿಯೊಬ್ಬ ಆಟಗಾರನಿಗೂ ತವರಿನ ತಂಡದ ಪರ ಆಡಬೇಕು ಅನ್ನೋ ಆಸೆ ಇರುತ್ತೆ, ಅದರಂತೆ ನನಗೂ ಆರ್‌ಸಿಬಿ ಪರ ಆಡೋದು ಇಷ್ಟ,  ಐಪಿಎಲ್‌ ಕರಿಯರ್ ಸ್ಟಾರ್ಟ್ ಆಗಿದ್ದು ಆರ್‌ಸಿಬಿ ಮೂಲಕ, ಅಲ್ಲೇ ಕರಿಯರ್ ಮುಗಿಸಿದ್ರೆ ಚೆನ್ನಾಗಿರುತ್ತೆ ಅಂತ ರಾಹುಲ್ ಹೇಳಿದ್ರು. 

ರಾಹುಲ್ ಬಂದ್ರೆ ಆರ್‌ಸಿಬಿ  ಕನ್ನಡಿಗರಗೆ ಮತ್ತಷ್ಟು ಹತ್ತಿರ..!

ಯೆಸ್, ಟ್ರೇಡಿಂಗ್ ಅಥವಾ ಮುಂದಿನ ವರ್ಷ  ಐಪಿಎಲ್ ಮೆಗಾ ಆಕ್ಷನ್ ನಡಯಲಿದೆ. ಇವೆರಡರಲ್ಲಿ ಯಾವುದಾರೊಂದರ ಮೂಲಕ ರಾಹುಲ್ ಆರ್‌ಸಿಬಿ ತಂಡ ಸೇರಿಕೊಳ್ಳಬಹುದು. ರಾಹುಲ್ ಬಂದ್ರೆ, ಕನ್ನಡಿಗರಿಗೆ ಆರ್‌ಸಿಬಿ ಮತ್ತಷ್ಟು ಹತ್ತಿರವಾಗಲಿದೆ. ಈ ಸೀಸನ್ ನಂತರ ಫಾಫ್ ಡುಪ್ಲೆಸಿ ರಿಟೈರ್ ಆಗೋ ಸಾಧ್ಯತೆ ಇರೋದ್ರಿಂದ, ರಾಹುಲ್ಗೆ ನಾಯಕತ್ವವೂ ಒಲಿಯಲಿದೆ. ಆದ್ರೆ, ಇದೆಲ್ಲಾ ಆರ್‌ಸಿಬಿ ಫ್ರಾಂಚೈಸಿ ಕೈಯಲ್ಲಿದೆ. ಆರ್‌ಸಿಬಿ ಓನರ್ಸ್ ಅಂತಹ ಮನಸ್ಸು ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಈತನೇ ಟೀಂ ಇಂಡಿಯಾ ನಿಜವಾದ ಆಸ್ತಿ ಎಂದು ಬಣ್ಣಿಸಿದ ಅಶ್ವಿನ್! ಆದ್ರೆ ಅದು ರೋಹಿತ್, ಕೊಹ್ಲಿ ಅಲ್ಲ!

ಏನ್ಮಾಡ್ತಾರೆ  ಕೆ ಎಲ್ ರಾಹುಲ್? ಲಖನೌ ಸೂಪರ್ ಜೈಂಟ್ಸ್ ತಂಡ ಬಿಡ್ತಾರಾ? ಆಕ್ಷನ್‌ಗೆ ಬರ್ತಾರಾ? 

ಈ ವರ್ಷದ ಐಪಿಎಲ್‌ನಲ್ಲಿ ಮ್ಯಾಚ್ ಸೋತಿದ್ದಕ್ಕೆ ಲಖನೌ ಸೂಪರ್ ಜೈಂಟ್ಸ್‌ ಓನರ್ ಸಂಜೀವ್ ಗೋಯೆಂಕಾ, ಮೈದಾನದಲ್ಲಿ ರಾಹುಲ್ ಮೇಲೆ ಮುಗಿಬಿದ್ದಿದ್ರು. ಲಖನೌ ಓನರ್ ರಾಹುಲ್‌ರನ್ನು ನಡೆಸಿಕೊಂಡ ರೀತಿ ಅಭಿಮಾನಿಗಳಿಗೆ, ಅದರಲ್ಲೂ ಕನ್ನಡಿಗ ಆಕ್ರೋಶಕ್ಕೆ ಗುರಿಯಾಗಿತ್ತು. ಇದ್ರಿಂದ ರಾಹುಲ್ ಲಖನೌ ತಂಡದಿಂದ ಹೊರಬರ್ತಾರೆ. ಆಕ್ಷನ್ನಲ್ಲಿ ಆರ್‌ಸಿಬಿ ಸೇರ್ತಾರೆ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಕ್ತರು ಅಂದುಕೊಂಡಿದ್ರು. ಆದ್ರೀಗ, ಅದು ಅನುಮಾನವಾಗಿದೆ. 

ಇತ್ತೀಚೆಗೆ ರಾಹುಲ್ ಲಖನೌ ಸೂಪರ್ ಜೈಂಟ್ಸ್‌ ಓನರ್ ಸಂಜೀವ್ ಗೋಯೆಂಕಾ ಅವರನ್ನ ಭೇಟಿಯಾಗಿದ್ದಾರೆ. ಕೊಲ್ಕತ್ತಾದ ತಮ್ಮ ಆಫೀಸಿಗೆ ಕರೆಸಿಕೊಂಡು ರಾಹುಲ್ ಜೊತೆ ಸಂಜೀವ್  ಮಾತನಾಡಿದ್ದಾರೆ.  ಈ ಮಾತುಕತೆಯ ಬೆನ್ನಲ್ಲೇ  ರಾಹುಲ್ ಮುಂದಿನ ನಡೆಯೇನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ರಾಹುಲ್ ಲಕ್ನೋ ತಂಡವನ್ನು ತೊರೆಯಲು ಮುಂದಾಗಿದ್ದು, ಇದೇ ಕಾರಣದಿಂದಾಗಿ ಅವರ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಲಖನೌ ಸೂಪರ್ ಜೈಂಟ್ಸ್‌ ಮಾಲೀಕರು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.  

ಒಂದು ವೇಳೆ ಲಖನೌ  ರಾಹುಲ್‌ರನ್ನ ರಿಟೇನ್ ಮಾಡಿಕೊಂಡ್ರೆ, ಆರ್‌ಸಿಬಿ &  ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಆಸೆ ನುಚ್ಚು ನೂರಾಗೋದಂತೂ ಪಕ್ಕಾ..!  
 

click me!