ಕ್ರಿಕೆಟಿಗ ಮನೀಶ್ ಪಾಂಡೆ, ನಟಿ ಆಶ್ರಿತಾ ಶೆಟ್ಟಿ ಜೊತೆ ವಿವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಂಡೆ ಮದುವೆಗೆ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ.
ಮುಂಬೈ(ಡಿ.03): ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಬಹುಕಾಲದ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಮದುವೆಯಾಗಿದ್ದಾರೆ. ಡಿಸೆಂಬರ್ 2 ರಂದು ಮುಂಬೈನಲ್ಲಿ ವಿವಾಹವಾದ ಮನೀಶ್ ಪಾಂಡೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ.
Congratulations Pandey ji. Wish you both a lifetime of beautiful moments and happiness. God bless you both 😇🙏
— Virat Kohli (@imVkohli)undefined
ಇದನ್ನೂ ಓದಿ: ಡಿ.1ಕ್ಕೆ ಫೈನಲ್, ಡಿ.2ಕ್ಕೆ ಮದ್ವೆ, ಡಿ.4ಕ್ಕೆ ಟೀಂ ಇಂಡಿಯಾ; ಇದು ಮನೀಶ್ ಪಾಂಡೆ ಜರ್ನಿ.
ಮನೀಶ್ ಪಾಂಡೆಗೆ ವಿವಾಹಕ್ಕೆ ಟ್ವಿಟರ್ ಮೂಲಕ ವಿರಾಟ್ ಕೊಹ್ಲಿ ಶುಭಕೋರಿದ್ದಾರೆ. ಡಿಸೆಂಬರ್ 1 ರಂದು ಸಯ್ಯದು ಮುಷ್ತಾಕ್ ಅಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ ಮನೀಶ್ ಪಾಂಡೆ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ತಡರಾತ್ರಿ ಮುಂಬೈಗೆ ತೆರಳಿದ ಪಾಂಡೆ ಮದುವೆಗೂ ಕೆಲ ಗಂಟೆಗಳ ಮುನ್ನ ಮಂಟಪ ತಲಪುದಿದ್ದರು.
ಇದನ್ನೂ ಓದಿ: ಮುಂಬೈನಲ್ಲಿ ಮನೀಶ್ ಪಾಂಡೆ ಮದುವೆ; ಕೆಲವೇ ಗಂಟೆ ಮೊದಲು ಮಂಟಪ ತಲುಪಿದ ಕ್ರಿಕೆಟಿಗ!
ಮಂಗಳೂರು ಮೂಲದ, ದಕ್ಷಿಣ ಭಾರತದ ನಟಿ ಆಶ್ರಿತಾ ಶೆಟ್ಟಿ ಮದುವೆಯಾದ ಮನೀಶ್ ಪಾಂಡೆ, ಡಿಸೆಂಬರ್ 3 ರಂದು ವಿಶ್ರಾಂತಿ ಪಡೆದು, ಡಿಸೆಂಬರ್ 4 ರಂದು ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಡಿಸೆಂಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ಹೈದರಾಬಾದ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ನಾಳೆ(ಡಿ.4) ಪಾಂಡೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ