ಟಿ20 ವಿಶ್ವಕಪ್ ಮುಗೀತು. ಮುಂದಿನ ವಾರದಿಂದ ನಾನು ನಿರುದ್ಯೋಗಿ, ಯಾವುದಾದರೂ ಆಫರ್ ಇದೆಯಾ? ಇದು ರಾಹುಲ್ ದ್ರಾವಿಡ್ ಕೇಳಿದ ಪ್ರಶ್ನೆ. ದ್ರಾವಿಡ್ ಈ ಮಾತು ಆಡಿದ ಬೆನ್ನಲ್ಲೇ ಇದೀಗ ವಿಶ್ವಕ್ರಿಕೆಟ್‌ನಿಂದ ಹಲವು ಆಫರ್‌ಗಳು ಹರಿದು ಬರುತ್ತಿದೆ.
ಬಾರ್ಬಡೋಸ್(ಜೂ.30) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಂಭ್ರಮ ಇನ್ನೂ ನಿಂತಿಲ್ಲ. ದೇಶದ ಮೂಲೆ ಮೂಲೆಯಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಯುತ್ತಿದೆ. ಗೆಲುವಿನ ಬಳಿಕ ನಾಯಕ ರೋಹಿತ್, ವಿರಾಟ್ ಕೊಹ್ಲಿ ಬುಮ್ರಾ ಸೇರಿದಂತೆ ಕ್ರಿಕೆಟಿಗರು ಆಡಿದ ಮಾತುಗಳೇ ಅಭಿಮಾನಿಗಳ ಮನದಲ್ಲಿ ರಿಪೀಟ್ ಆಗುತ್ತಿದೆ. ಇದರ ನಡುವೆ ಈ ಟ್ರೋಫಿ ಗೆಲ್ಲಿಸಿಕೊಟ್ಟಿ ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಗೆಲುವಿನ ಬಳಿಕ ಆಡಿದ ಮಾತುಗಳು ಬಾರಿ ಸಂಚಲನ ಸೃಷ್ಟಿಸಿದೆ. ಮುಂದಿನ ವಾರದಿಂದ ನಾನು ನಿರುದ್ಯೋಗಿ, ಯಾವುದಾದರು ಆಫರ್ ಇದೆಯಾ ಎಂದು ದ್ರಾವಿಡ್ ಪ್ರಶ್ನಿಸಿದ್ದಾರೆ. ದ್ರಾವಿಡ್ ಮಾತಿನ ಬೆನ್ನಲ್ಲೇ ಇದೀಗ ಆಫರ್‌ಗಳ ಸುರಿಮಳೆಯಾಗಿದೆ.
ಕೋಚ್ ಆಗಿ ರಾಹುಲ್ ದ್ರಾವಿಡ್ ಕೊನೆಯ ಸರಣಿ ಇದಾಗಿತ್ತು. ಭರ್ಜರಿ ಗೆಲುವಿನೊಂದಿಗೆ ದ್ರಾವಿಡ್ ಕೋಚಿಂಗ್‌ಗೆ ವಿದಾಯ ಹೇಳಿದ್ದಾರೆ. ರಾಹುಲ್ ದ್ರಾವಿಡ್ ತನ್ನ ಕ್ರಿಕೆಟ್ ಕರಿಯರ್‌ನ್ನು ಟ್ರೋಫಿ ಇಲ್ಲದೆ ಅಂತ್ಯಗೊಳಿಸಿದ್ದರು. ಕೋಚಿಂಗ್ ಅವಧಿಯಲ್ಲಿ ಏಕದಿನ ವಿಶ್ವಕಪ್, ಟಿ20, ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಸರಣಿಗಳಲ್ಲೂ ಫೈನಲ್ ಹಂತದಲ್ಲಿ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು. ಹೀಗಾಗಿ ದ್ರಾವಿಡ್ ಕೋಚ್ ಆಗಿ ಕೊನೆಯ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ದ್ರಾವಿಡ್ ಕಾರಣಕ್ಕೂ ಪ್ರಮುಖವಾಗಿತ್ತು. ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ದ್ರಾವಿಡ್ ಕಿರೀಟಕ್ಕೆ ಟಿ20 ಚಾಂಪಿಯನ್ ಪಟ್ಟ ಸೇರಿಕೊಂಡಿದೆ. ಗೆಲುವಿನ ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್, ಮುಂದಿನ ವಾರದಿಂದ ನಾನು ನಿರುದ್ಯೋಗಿ ಎಂದಿದ್ದಾರೆ.
undefined
ಟಿ20 ವಿಶ್ವಕಪ್ ಗೆದ್ದ ಭಾರತ: ದ್ರಾವಿಡ್ ಆದ ವಿರಾಟ್ ಕೊಹ್ಲಿ, ಕೊಹ್ಲಿಯಾದ ಕೋಚ್ ದ್ರಾವಿಡ್!
ಮುಂದಿನ ವಾರದಿಂದ ನಿಮಗೆ ಯಾವುದೇ ಜವಾಬ್ದಾರಿಗಳಿಲ್ಲ, ನೀವು ನಿರಾಳ ಎಂದು ಮಾಧ್ಯಮ ರಾಹುಲ್ ದ್ರಾವಿಡ್‌ರನ್ನು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ದ್ರಾವಿಡ್, ಹೌದು ಮುಂದಿನ ವಾರದಿಂದ ನಾನು ನಿರುದ್ಯೋಗಿ, ಯಾವುದಾದರೂ ಆಫರ್ ಇದೆಯಾ ಎಂದು ಮರು ಪ್ರಶ್ನಿಸಿದ್ದಾರೆ. ದ್ರಾವಿಡ್ ಈ ಮಾತುಗಳು ಭಾರಿ ವೈರಲ್ ಆಗಿದೆ. ಹಲವರು ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಕೋಚ್ ಮಾಡಿ, 16 ವರ್ಷಗಳ ಟ್ರೋಫಿ ಬರ ನೀಗಿಸಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.
"I am Unemployed from next week, any offers.. ?" !!! 😂
You just can't hate Jammy ❤️ pic.twitter.com/tLECUD69OJ
ಕೆಲವರು ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಇದು ನಿಜವಾದ ಬೆಂಗಳೂರಿಗನ ಸ್ವಭಾವ. ಕೆಲಸದ ಕೊನೆಯ ದಿನದಲ್ಲಿ ಬೇರೆ ಕೆಲಸ ಹುಡುಕುತ್ತಿರುವುದು ಬೆಂಗಳೂರಿನಲ್ಲಿ ಸಾಮಾನ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೌತ್ ಆಫ್ರಿಕಾ ವಿರುದ್ದದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 7 ರನ್ ರೋಚಕ ಗೆಲುವು ಕಂಡಿದೆ. ಒಂದು ಹಂತದಲ್ಲಿ ಸೌತ್ ಆಫ್ರಿಕಾ ಸುಲಭಾಗಿ ಟ್ರೋಫಿ ಗೆಲ್ಲಲಿದೆ ಅನ್ನೋ ಆತಂಕ ಎದುರಾಗಿತ್ತು. ಆದರೆ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಹಾಗೂ ಅಂತಿಮ ಓವರ್ ಹಾರ್ದಿಕ್ ಪಾಂಡ್ಯ ಮ್ಯಾಜಿಕ್ ಭಾರತಕ್ಕೆ ಗೆಲುವು ತಂದುಕೊಟ್ಟಿದೆ. ಇದರ ಜೊತೆಗೆ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು. ಇದೀಗ ಭಾರತ 2ನೇ ಬಾರಿ ಟಿ20 ಟ್ರೋಫಿ ಗೆದ್ದುಕೊಂಡಿದೆ.
'ಅವರನ್ನು ಅಪ್ಪಿಕೊಳ್ಳೋಕೆ ಯಾರಿಲ್ವಾ?' ಅಳುತ್ತಿದ್ದ ಕ್ರಿಕೆಟಿಗರನ್ನು ನೋಡಿದ ವಾಮಿಕಾಗೆ ತಲೆಬಿಸಿ!