ಟೀಂ ಇಂಡಿಯಾಗೆ ಮತ್ತೊಂದು ಶಾಕ್, ಸ್ಟಾರ್ ಆಟಗಾರನ ಎಡಗೈ ಬೆರಳು ಮುರಿತ: ಪರ್ತ್‌ ಟೆಸ್ಟ್‌ನಿಂದ ಔಟ್?

By Naveen Kodase  |  First Published Nov 17, 2024, 12:22 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಾರಾ ಆಟಗಾರನ ಹೆಬ್ಬೆರಳು ಮುರಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಪರ್ತ್: ಕಳೆದ ಬಾರಿಯಂತೆ ಈ ಸಲವೂ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್ ಸರಣಿಗೆ ಭಾರತ ತಂಡ ಗಾಯಾಳುಗಳ ಸಮಸ್ಯೆ ಎದುರಿಸುವ ಎಲ್ಲಾ ಸಾಧ್ಯತೆಗಳಿವೆ. ಶನಿವಾರ ತಾರಾ ಬ್ಯಾಟರ್ ಶುಭ್‌ಮನ್ ಗಿಲ್ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿದ್ದು, ನ.22ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ.

ಅಭ್ಯಾಸ ಪಂದ್ಯದ 2ನೇ ದಿನ ಫೀಲ್ಡಿಂಗ್ ನಿರತರಾಗಿದ್ದ ಗಿಲ್ ಎಡಗೈ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಸಾಧಾರಣವಾಗಿ ಹೆಬ್ಬೆರಳು ಮುರಿತಕ್ಕೊಳಗಾದರೆ ಅದರಿಂದ ಚೇತರಿಸಿಕೊಳ್ಳಲು 14 ದಿನ ಅಗತ್ಯವಿದೆ. ಆದರೆ ಮೊದಲ ಟೆಸ್ಟ್‌ಗೆ ಒಂದು ವಾರ ಮಾತ್ರ ಬಾಕಿ ಇದ್ದು, ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನವೆನಿಸಿದೆ. ಒಂದು ವೇಳೆ ಶುಭ್‌ಮನ್ ಗಿಲ್ ಅಲಭ್ಯರಾದರೆ ಅಭಿಮನ್ಯು ಈಶ್ವರನ್ ತಂಡ ದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. 

Tap to resize

Latest Videos

undefined

ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ ತಿಲಕ್ ವರ್ಮ, ಟಿ20ಯಲ್ಲಿ ಹೊಸ ದಾಖಲೆ!

ಇದಕ್ಕೂ ಮುನ್ನ ಶುಕ್ರವಾರ ಕೆ.ಎಲ್. ರಾಹುಲ್ ಕೈಗೆ ಚೆಂಡು ಬಡಿದಿದ್ದರೆ, ವಿರಾಟ್ ಕೊಹ್ಲಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಇವರಿಬ್ಬರ ಗಾಯದ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ತಂಡ ಇನ್ನೂ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಗೆ ಭಾರತ ತಂಡ: 

ರೋಹಿತ್‌ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೆಲ್‌, ಆರ್.ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.

ರಣಜಿ ಟ್ರೋಫಿ: ಅನಿಲ್ ಕುಂಬ್ಳೆ ರೀತಿ ಎಲ್ಲ 10 ವಿಕೆಟ್ ಕಿತ್ತ ಹರ್ಯಾಣದ ಅನ್ಶುಲ್ ಕಾಂಬೋಜ್!

ಪರ್ತ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ:

ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಶ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ಮಾರ್ಷ್, ನೇಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.

ರೋಹಿತ್‌ ಶರ್ಮಾ ಜತೆ ವೇಗಿ ಮೊಹಮ್ಮದ್ ಶಮಿ ಶೀಘ್ರ ಆಸೀಸ್ ಪ್ರಯಾಣ?

ಮುಂಬೈ: 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತದ ನಾಯಕ ರೋಹಿತ್ ಶರ್ಮಾ ಒಂದೆರಡು ದಿನದಲ್ಲೇ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ. ಅವರ ಜೊತೆ ವೇಗಿ ಮೊಹಮ್ಮದ್ ಶಮಿ ಕೂಡಾ ಆಸೀಸ್ ವಿಮಾನವೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ರೋಹಿತ್ ಶರ್ಮಾ ಇತರ ಆಟಗಾರರೊಂದಿಗೆ ಆಸೀಸ್‌ಗೆ ತೆರಳಿಲ್ಲ. ಅವರು ಮೊದಲ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಶುಕ್ರವಾರ ರಾತ್ರಿ ರೋಹಿತ್ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಶೀಘ್ರವೇ ಆಸೀಸ್‌ಗೆ ತೆರಳಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಮಧ್ಯಪ್ರದೇಶ ವಿರುದ್ಧ ರಣಜಿ ಪಂದ್ಯದಲ್ಲಿ ಆಡಿ ಫಿಟ್ಟೆಸ್ ಸಾಬೀತುಪಡಿಸಿರುವ ಶಮಿ ಕೂಡಾ ರೋಹಿತ್ ಜೊತೆ ಆಸೀಸ್‌ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೊ ಇಲ್ಲವೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
 

click me!