ಮಗಳೊಂದಿಗೆ ಕೈಂಚಿ ಧಾಮಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ: ಅಭಿಮಾನಿಗಳೊಂದಿಗೆ ಫೋಸ್

Published : Nov 18, 2022, 10:32 PM ISTUpdated : Nov 18, 2022, 10:33 PM IST
ಮಗಳೊಂದಿಗೆ ಕೈಂಚಿ ಧಾಮಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ: ಅಭಿಮಾನಿಗಳೊಂದಿಗೆ ಫೋಸ್

ಸಾರಾಂಶ

ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಪತ್ನಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಜೋಡಿ ತಮ್ಮ ಎಳೆಯ ಪುತ್ರಿಯೊಂದಿಗೆ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ.  ಉತ್ತರಾಖಂಡ್ ಪ್ರವಾಸದಲ್ಲಿರುವ ಈ ಜೋಡಿ ಇಂದು ನೈನಿತಾಲ್‌ನಲ್ಲಿರುವ ಪವಿತ್ರ ಕ್ಷೇತ್ರ ಕೈಂಚಿ ಧಾಮ್‌ಗೆ ಭೇಟಿ ನೀಡಿ ವಾಯುಪುತ್ರ ಆಂಜನೇಯನ ಆಶೀರ್ವಾದ ಪಡೆದರು.

ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಪತ್ನಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಜೋಡಿ ತಮ್ಮ ಎಳೆಯ ಪುತ್ರಿಯೊಂದಿಗೆ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ.  ಉತ್ತರಾಖಂಡ್ ಪ್ರವಾಸದಲ್ಲಿರುವ ಈ ಜೋಡಿ ಇಂದು ನೈನಿತಾಲ್‌ನಲ್ಲಿರುವ ಪವಿತ್ರ ಕ್ಷೇತ್ರ ಕೈಂಚಿ ಧಾಮ್‌ಗೆ ಭೇಟಿ ನೀಡಿ ವಾಯುಪುತ್ರ ಆಂಜನೇಯನ ಆಶೀರ್ವಾದ ಪಡೆದರು. ಅಲ್ಲದೇ ಅಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಗುರುಗಳ ಆಶೀರ್ವಾದ ಪಡೆದರು. ಅಲ್ಲದೇ ಆ ಸ್ಥಳದಲ್ಲಿ ಅಭಿಮಾನಿಗಳು ಈ ತಾರಾ ಜೋಡಿಯನ್ನು ಮುತ್ತಿಕೊಂಡಿದ್ದು, ಇಬ್ಬರೂ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಸಖತ್ ಫೋಸ್ ನೀಡಿದ್ದರು. 

ಅಲ್ಲದೇ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯೊಡನೆ ತೆಗೆದುಕೊಂಡಿರುವ ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ. ಉತ್ತರಾಖಂಡ್‌ನಲ್ಲಿ ಈಗ ಮೈ ಕೊರೆಯುವ ಚಳಿ ಇದ್ದು, ಇಬ್ಬರೂ ಚಳಿಗಾಲದ ಉಡುಗೆಯೊಂದಿಗೆ ಮಗು ವಮಿಕಾಳನ್ನು ತೋಳಲೆತ್ತಿಕೊಂಡು ಫೋಟೋಗಳಿಗೆ ಅಭಿಮಾನಿಗಳಿಗೆ ಫೋಸ್ ಕೊಟ್ಟಿದ್ದಾರೆ. 

 

ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ವಿರಾಟ್‌  ಕೊಹ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಆಟವಾಡಿ ಎಲ್ಲರ ಹೃದಯವನ್ನು ಮತ್ತೊಮ್ಮೆ ಕದ್ದಿದ್ದರು. ಈ ವೇಳೆ ಅನುಷ್ಕಾ ತನ್ನ ಪತಿ  ವಿರಾಟ್ ಪರ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿ ಬೆಂಬಲಿಸಿದಲ್ಲದೇ ವಿರಾಟ್ ತಮ್ಮ ಜೀವನದ ಕಠಿಣ ಕ್ಷಣಗಳ್ಲಿ ಹೋರಾಡುತ್ತ ಹೇಗೆ ಮಿಂಚಿದರು ಎಂಬುದನ್ನು ಹೇಳಿಕೊಂಡಿದ್ದರು. 

ವಿರುಷ್ಕಾ ಜೋಡಿಯನ್ನು ಭೇಟಿಯಾದ ಅನುಪಮ್ ಖೇರ್..! ಫೋಟೋ ವೈರಲ್

ಪ್ರೀತಿಯಲ್ಲಿ ಬಿದ್ದಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೆಲವು ವರ್ಷಗಳ ಡೇಟಿಂಗ್ ನಂತರ 2017 ರಲ್ಲಿ ಹಸೆಮಣೆ ಏರಿದ್ದರು.  ಜನವರಿ 2021 ರಲ್ಲಿ ಇಬ್ಬರು ಹೆಣ್ಣು ಮಗು ವಮಿಕಾಗೆ ಪೋಷಕರಾಗಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕಾಗಿ (New Zealand tour) ಟೀಮ್ ಇಂಡಿಯಾ ತಂಡದಲ್ಲಿ (team India squad)ವಿರಾಟ್ ಇಲ್ಲದ ಕಾರಣ ಪ್ರಸ್ತುತ ಅವರು ವಿಶ್ರಾಂತಿಯಲ್ಲಿದ್ದು, ಕುಟುಂಬದೊಂದಿಗೆ ಒಳ್ಳೆಯ ಟೈಮ್ ಕಳೆಯುತ್ತಿದ್ದಾರೆ.

Virat Kohli Birthday: ಕಿಂಗ್‌ ಕೊಹ್ಲಿಗೆ ಮುದ್ದಾಗಿ ಶುಭಕೋರಿದ ಮಡದಿ ಅನುಷ್ಕಾ ಶರ್ಮಾ..!

ಇತ್ತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (ANUSHKA SHARMA) ಇತ್ತೀಚೆಗೆ ತನ್ನ ಮುಂಬರುವ ಚಲನಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನ (Chakda Xpress) ಕೋಲ್ಕತ್ತಾದಲ್ಲಿ (Kolkata)  ಶೂಟ್ ಮುಗಿಸಿದ್ದಾರೆ. ಇದು ಇದು ಭಾರತದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ (Jhulan Goswami) ಅವರ ಜೀವನಚರಿತ್ರೆಯನ್ನು ಆಧರಿಸಿದ ಸಿನಿಮಾವಾಗಿದೆ. ಅನುಷ್ಕಾ ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಅನ್ನು ಸಹ ಹಂಚಿಕೊಂಡಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!