ಪಾಕ್ ಕ್ರಿಕೆಟಿಗನ ಮುಂದೆ ಜೈಶ್ರೀರಾಮ್ ಘೋಷಣೆ ತಪ್ಪೆಂದ ಉದನಿಧಿ ಸ್ಟಾಲಿನ್, ಅಣ್ಣಾಮಲೈ ತಿರುಗೇಟು!

By Suvarna News  |  First Published Oct 15, 2023, 5:03 PM IST

ಭಾರತ ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿನ ಕೆಲ ಘಟನೆಗಳು ಭಾರಿ ಚರ್ಚೆಯಾಗುತ್ತಿದೆ. ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಪೆವಿಲಿಯನ್‌ಗೆ ವಾಪಸ್ ವೇಳೆ ಕ್ರಿಕೆಟ್ ಅಭಿಮಾನಿಗಳು ಜೈ ಶ್ರೀ ರಾಂ ಘೋಷಣೆ ಕೂಗಿದ್ದಾರೆ. ಇದು ತಮಿಳುನಾಡು ಸಚಿವ, ಸಿಎಂ ಪುತ್ರನ ಕೆರಳಿಸಿದೆ. ಸನಾತನ ಧರ್ಮದ ನಾಶಕ್ಕೆ ಕರೆಕೊಟ್ಟ ಸ್ಟಾಲಿನ್ ಇದೀಗ ಜೈ ಶ್ರೀರಾಂ ಘೋಷಣೆ ತಪ್ಪೆಂದಿದ್ದಾರೆ. ಉದನಿಧಿ ಸ್ಟಾಲಿನ್‌ಗೆ ಬಿಜೆಪಿ ಖಡಕ್ ತಿರುಗೇಟು ನೀಡಿದೆ.


ಚೆನ್ನೈ(ಅ.15) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಭರ್ಜರಿ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ. ಇದರ ಜೊತೆಗೆ ಕ್ರೀಡಾಂಗಣದ ಕೆಲ ವೈರಲ್ ವಿಡಿಯೋಗಳು ಕುರಿತು ಭಾರಿ ಚರ್ಚೆಯಾಗುತ್ತಿದೆ. ಈ ಪೈಕಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಔಟಾಗಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಚಿವ, ಸಿಎಂ ಪುತ್ರ ಉದನಿಧಿ ಸ್ಟಾಲಿನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಡೆಯನ್ನು ಖಂಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗನ ಮುಂದೆ ಜೈ ಶ್ರೀರಾಂ ಘೋಷಣೆ ಕ್ರೀಡಾ ಮನೋಭಾವವಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಸ್ಟಾಲಿನ್‌ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಖಡಕ್ ತಿರುಗೇಟು ನೀಡಿದ್ದಾರೆ.

ಮೊಹಮ್ಮದ್ ರಿಜ್ವಾನ್ ಭಾರತ ವಿರುದ್ದ 69 ಎಸೆತದಲ್ಲಿ 49 ರನ್ ಸಿಡಿಸಿ ಔಟಾಗಿದ್ದರು. ಪೆವಿಲಿಯನ್‌ಗೆ ಮರಳುತ್ತಿದ್ದ ರಿಜ್ವಾನ್‌ಗೆ ಅಭಿಮಾನಿಗಳು ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಬದಿಯಿಂದಲೇ ಪೆವಿಲಿಯನ್‌ಗೆ ಸಾಗಬೇಕಾದ ಕಾರಣ, ಅಭಿಮಾನಿಗಳು ಗಟ್ಟಿಯಾಗಿ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು ಎಕ್ಸ್ ಖಾತೆ ಮೂಲಕ ಹಂಚಿಕೊಂಡಿರುವ ಉದನಿಧಿ ಸ್ಟಾಲಿನ್, ಭಾರತದ ಕ್ರೀಡಾಮನೋಭಾವವಲ್ಲ. ಇದು ದ್ವೇಷ ಹರಡು ಸಂಸ್ಕೃತಿಯಾಗಿದೆ ಎಂದಿದ್ದಾರೆ.

Latest Videos

undefined

IND vs PAK ಪೆವಿಲಿಯನ್ ರೈಡ್‌ ಸಹಾಯಕ್ಕಿದೆ ಹೆಕ್ಟರ್, ಪಾಕಿಸ್ತಾನ ಬ್ಯಾಟಿಂಗ್ ಕುಟುಕಿದ ಎಂಜಿ ಮೋಟಾರ್ಸ್!

ಭಾರತ ತನ್ನ ಕ್ರೀಡಾ ಮನೋಭಾವ ಹಾಗೂ ಅತ್ಯುತ್ತಮ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಆಟಗಾರರ ಮುಂದೆ ಅಭಿಮಾನಿಗಳು ತೋರಿದ ವರ್ತನೆ ಸರಿಯಲ್ಲ. ಕ್ರೀಡೆಗಳು ದೇಶಳನ್ನು ಒಗ್ಗೂಡಿಸುವ, ಸೌಹಾರ್ಧತೆ, ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ಆದರೆ ದ್ವೇಷ ಹರಡವು ಸಾಧನವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಉದನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. 

 

India is renowned for its sportsmanship and hospitality. However, the treatment meted out to Pakistan players at Narendra Modi Stadium in Ahmedabad is unacceptable and a new low. Sports should be a unifying force between countries, fostering true brotherhood. Using it as a tool… pic.twitter.com/MJnPJsERyK

— Udhay (@Udhaystalin)

 

ಭಾರತ ದೇಶ ಪಾಕಿಸ್ತಾನ ತಂಡಕ್ಕೆ ಪ್ರತಿ ಭಾರಿ ಗೌರವ ನೀಡಿದೆ. ಇದರಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ ಎಂದು ನೀವು ಹೇಳಿದ್ದೀರಿ. ಹಾಗಯೇ ಧರ್ಮವನ್ನು ಧರ್ಮವಾಗಿ ನೋಡಿ. ಮತ್ಯಾಕೆ ಸನಾತನ ಧರ್ಮವನ್ನು ನಾಶ ಮಾಡಲು ಹೊರಟಿದ್ದೀರಿ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 13 ರನ್‌ಗಳಿಂದ ಗೆದ್ದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಹೈದರಾಬಾದ್, ಅಹಮ್ಮದಾಬಾದ್‌ನಲ್ಲೂ ಪಾಕಿಸ್ತಾನ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಎಲ್ಲಾ ರೀತಿಯ ಗೌರವ ನೀಡಲಾಗಿದೆ. ಇನ್ನು ಪಾಕಿಸ್ತಾನ ಆಟಗಾರರ ಪಾಸ್ ಆಗುವ ವೇಳೆ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಇದರಲ್ಲಿ ಅಗೌರವ ತೋರಿದ ಮಾತೆಲ್ಲಿ. ಅಭಿಮಾನಿಗಳು ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಒತ್ತಾಯ ಹೇರಿಲ್ಲ. ಇದರಲ್ಲಿ ರಾಜಕೀಯ ಹುಡುಕು ಸಣ್ಣಮಟ್ಟಕ್ಕೆ ಇಳಿಯದೇ ಇರುವುದು ಒಳಿತು ಎಂದು ಅಣ್ಣಾಮಲೈ ಹೇಳಿದ್ದಾರೆ.

IND vs PAK ಪಂದ್ಯದ ನಡುವೆ ಕಾಣಿಸಿಕೊಂಡ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್, ಪ್ರತಿಕ್ರಿಯಿಸಿದ ಸರ್ಕಾರ!
 

click me!