ವಿಶ್ವಕಪ್ ಚಾನ್ಸ್ ಗೊಂದಲ ನಡುವೆ ಬಿಗ್ ಟ್ವಿಸ್ಟ್, ಟಿವಿ ಶೋಗೆ ಪಾದಾರ್ಪಣೆ ಮಾಡುತ್ತಿದ್ದಾರೆ ರೋಹಿತ್ ಶರ್ಮಾ

Published : Aug 12, 2026, 03:29 PM IST
Rohit Shamr Show

ಸಾರಾಂಶ

ರೋಹಿತ್ ಶರ್ಮಾ ಖಾಸಗಿ ಟಿವಿ ಕಾರ್ಯಕ್ರಮದ ಮೂಲಕ ಟೆಲಿವಿಶನ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ವಿಶ್ವಕಪ್ ಆಯ್ಕೆ ಕುರಿತು ಗೊಂದಲ ತೀವ್ರಗೊಳ್ಳುತ್ತಿದ್ದಂತೆ ರೋಹಿತ್ ಶರ್ಮಾ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಮುಂಬೈ (ಆ.12) ಏಕದಿನ ಮಾದರಿಯಲ್ಲಿ ಮಾತ್ರ ಉಳಿದುಕೊಂಡಿರುವ ರೋಹಿತ್ ಶರ್ಮಾ ಮುಂಬರು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರಾ ಅನ್ನೋ ಕುರಿತು ಗೊಂದಲಗಳು ಮುಂದುವರಿದಿದೆ. ಈ ಬೆಳವಣಿಗೆ ನಡುವೆ ರೋಹಿತ್ ಶರ್ಮಾ ಟೆಲಿವಿಶನ್ ಕಾರ್ಯಕ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ಸ್ಪೋರ್ಟ್ಸ್,ಸೋನಿ ಸೇರಿದಂತೆ ಕ್ರೀಡಾ ನೇರ ಪ್ರಸಾರ ವಾಹನಿಗಳಲ್ಲಿ ರೋಹಿತ್ ಶರ್ಮಾ ಸಂದರ್ಶನ ನೀಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಪ್ರಮುಖ ಜವಾಬ್ದಾರಿಯೊಂದಿಗೆ ಟಿವಿ ಕಾರ್ಯಕ್ರಮಕ್ಕೆ ಕಾಲಿಡುತ್ತಿದ್ದಾರೆ.

ನಿರೂಪಕನಾಗಿ ರೋಹಿತ್ ಶರ್ಮಾ

ಸೋನಿ ಟಿವಿ ಮೂಲಕ ರೋಹಿತ್ ಶರ್ಮಾ ಟೆಲಿವಿಶನ್ ಕಾರ್ಯಕ್ರಮದ ಮೂಲಕ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ರೋಹಿತ್ ಶರ್ಮಾ ಶೋ ಅದ್ಧೂರಿಯಾಗಿ ಆರಂಭಿಸಲು ಸೋನಿ ಟಿವಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಈಗಾಗಲೇ ಪ್ರೋಮೋ ರೂಡ ರಿಲೀಸ್ ಮಾಡಲಾಗಿದೆ. ಇದು ರಿಯಾಲಿಟಿ ಶೋ ರೀತಿಯ ಕಾರ್ಯಕ್ರಮವಾಗಿದ್ದು, ರೋಹಿತ್ ಶರ್ಮಾ ನಿರೂಪಕನಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದೆ. ರೋಹಿತ್ ಶರ್ಮಾ ಕಾರ್ಯಕ್ರಮದ ಹೆಸರು, ಸ್ವರೂಪ, ರೂಪುರೇಶೆಗಳ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ರಿಯಾಲಿಟಿ ಶೋ ಮೂಲಕ ಗಮನಸೆಳೆದಿದ್ದಾರೆ. 2026ರ ಬಂಗಾಳ ಬಿಗ್ ಬಾಶ್ ಶೋ ಕಾರ್ಯಕ್ರಮವನ್ನು ಸೌರವ್ ಗಂಗೂಲಿ ಹೋಸ್ಟ್ ಮಾಡಲಿದ್ದಾರೆ. ಶೀಘ್ರದಲ್ಲೇ ಬಂಗಾಳ ಬಿಗ್ ಬಾಸ್ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಇನ್ನು ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್ 2008ರಲ್ಲಿ ಏಕ್ ಕಿಲಾಡಿ ಏಕ್ ಹಸೀನಾ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 2014ರಲ್ಲಿಜಲಕ್ ದಿಕ್‌ಲಾಜ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖತ್ರೋಂಕಿ ಕಿಲಾಡಿ ಹಾಗೂ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲೂ ಶ್ರಿಶಾಂತ್ ಪಾಲ್ಗೊಂಡಿದ್ದಾರೆ.

ನವಜೋತ್ ಸಿಂಗ್ ಸಿಧು, ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮಂಡ್ಸ್ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಜಲಕ್ ದಿಕ್‌ಲಾಜ ರಿಯಾಲಿಟಿ ಶೋದಲ್ಲಿ ಮೊಹಿಂದರ್ ಅಮರನಾಥ್, ಅಜಯ್ ಜಡೇಜಾ, ಸನತ್ ಜಯಸೂರ್ಯ, ಇರ್ಫಾನ್ ಪಠಾಣ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗುಜರಾತ್ ಟೈಟಾನ್ಸ್‌ಗೆ ಬರ್ತೇನೆ ಆದ್ರೆ ಒಂದು ಕಂಡೀಷನ್ ಎಂದ ಹಾರ್ದಿಕ್ ಪಾಂಡ್ಯ..! ಮಾಜಿ ನಾಯಕನ ಆ ಬೇಡಿಕೆ ರಿಜೆಕ್ಟ್‌ ಮಾಡಿದ ಗುಜರಾತ್ ಫ್ರಾಂಚೈಸಿ
ಆರ್‌ಸಿಬಿ, ಆಸೀಸ್ ಮಾಜಿ ಆಲ್ರೌಂಡರ್‌ಗೆ ಖುಲಾಯಿಸಿದ ಅದೃಷ್ಟ; 39ನೇ ವಯಸ್ಸಿಗೆ ಒಲಿದ ಇನ್ನೊಂದು ದೇಶದ ಕ್ಯಾಪ್ಟನ್ ಪಟ್ಟ!