IPL Broadcasting Rights : ಕಂಪನಿಗಳು ಬಿಡ್ ಮಾಡೋಕೆ ರೆಡಿಯಾಗಿರೋ ಮೊತ್ತ ಎಷ್ಟು ಗೊತ್ತಾ?

By Suvarna NewsFirst Published Dec 11, 2021, 5:00 PM IST
Highlights

5 ವರ್ಷಕ್ಕೆ 40 ಸಾವಿರ ಕೋಟಿಗೆ ಮಾರಾಟ ಸಾಧ್ಯತೆ
ಪ್ರಸ್ತುತ ಇರುವ 5 ವರ್ಷದ ಒಪ್ಪಂದ 16,348 ಕೋಟಿ
ಸ್ಟಾರ್ ಇಂಡಿಯಾ ಬಳಿ ಇದೆ ಐಪಿಎಲ್ ನೇರಪ್ರಸಾರದ ಹಕ್ಕು
 

ಬೆಂಗಳೂರು (ಡಿ.11): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಲಿನ ಚಿನ್ನದ ಮೊಟ್ಟೆ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League), ಕ್ರಿಕೆಟ್ ಮಂಡಳಿಯನ್ನು ಮತ್ತೊಮ್ಮೆ ಶ್ರೀಮಂತ ಮಾಡಲು ಸಿದ್ಧವಾಗಿದೆ. ಹಾಲಿ ಇರುವ ಐಪಿಎಲ್ ನ ನೇರಪ್ರಸಾರದ ಹಕ್ಕುಗಳ (IPL Broadcasting Rights) ಒಪ್ಪಂದ 2022ರ ಐಪಿಎಲ್ (IPL 2022) ನೊಂದಿಗೆ ಮುಕ್ತಾಯವಾಗಲಿದೆ. 2023 ರಿಂದ 2027ರ ವರೆಗಿನ ಐದು ವರ್ಷದ ಐಪಿಎಲ್ ನೇರಪ್ರಸಾರದ ಹಕ್ಕುಗಳಿಗೆ ಟೆಂಡರ್ ಪ್ರಕಟ ಮಾಡುವ ಸಿದ್ಧತೆಯನ್ನು ಬಿಸಿಸಿಐ ಈಗಾಗಲೇ ಆರಂಭಿಸಿದ. ಬಹುತೇಕವಾಗಿ ಈ ವರ್ಷದ ಕೊನೆಯಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಮುಂದಿನ ಐದು ವರ್ಷಗಳ ಐಪಿಎಲ್ ನೇರಪ್ರಸಾರದ ಹಕ್ಕುಗಳ ಟೆಂಡರ್ ಆರಂಭವಾಗಲಿದ್ದು, ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಐಪಿಎಲ್ ನೇರಪ್ರಸಾರವನ್ನು ಪಡೆದುಕೊಳ್ಳಲೇಬೇಕು ಎನ್ನುವ ಹಠದಲ್ಲಿ ನಿಂತಿವೆ. ಹಕ್ಕುಗಳ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಹೊಸ ಎರಡು ತಂಡಗಳು ಲೀಗ್ ಗೆ ಸೇರ್ಪಡೆಯಾಗಿರುವುದು ಹಾಗೂ ಐಪಿಎಲ್ ನ ಎಕ್ಸೈಟ್ ಮೆಂಟ್ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಮುಂದಿನ ಐದು ವರ್ಷದ ಅವಧಿಯ ನೇರಪ್ರಸಾರದ ಹಕ್ಕು 35 ಸಾವಿರದಿಂದ 40 ಸಾವಿರ ಕೋಟಿಯವರೆಗೆ ತಲುಪುವ ಸಾಧ್ಯತೆ ಇದೆ.  2008ರಲ್ಲಿ ಸೋನಿ ಇಂಡಿಯಾ (Sony India) 8,200 ಕೋಟಿ ರೂಪಾಯಿಗೆ ಮೊದಲ 10 ವರ್ಷದ ಐಪಿಎಲ್ ನೇರಪ್ರಸಾರ ಹಕ್ಕುಗಳನ್ನು ಗೆದ್ದುಕೊಂಡಿತ್ತು. ಆ ಬಳಿಕ 2018-22ರ ಅವಧಿಗೆ ಐಪಿಎಲ್ ನ ಜಾಗತಿಕ ಬಿಡ್ ಕ್ಲೀನ್ ಸ್ವೀಪ್ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್ (Star Sports)16,348 ರೂಪಾಯಿಯನ್ನು ಬಿಸಿಸಿಐಗೆ (BCCI)ನೀಡಿತ್ತು. ಆದರೆ, ಈ ಬಾರಿ ನೇರಪ್ರಸಾರದದ ಮೊತ್ತ ನಿರೀಕ್ಷೆಗೂ ಮೀರಿ ಹೆಚ್ಚಾಗುವ ಸಾಧ್ಯತೆಗಳು ಕಾಣುತ್ತಿದೆ.

IPL Auction 2022 : ಮುಂದಿನ ಐಪಿಎಲ್ ನಲ್ಲಿ ಇವರೆಲ್ಲಾ ಕ್ಯಾಪ್ಟನ್ ಆಗೋದು ಖಂಡಿತ!
ಸ್ಟಾರ್ ಸ್ಪೋರ್ಟ್ಸ್ ಇಂಡಿಯಾಗೆ (Star Sports India) ದೊಡ್ಡ ಮಟ್ಟದ ಪೈಪೋಟಿ ಎದುರಾಗುವುದು ಈಗಾಗಲೇ ಐಪಿಎಲ್ ನೇರಪ್ರಸಾರ ಹಕ್ಕಿನ ರುಚಿಯನ್ನು ಸವಿದಿರುವ ಸೋನಿ ಸ್ಪೋರ್ಟ್ಸ್ ಕಂಪನಿಯಿಂದ. ಭಾರತದಲ್ಲಿ ಕ್ರಿಕೆಟ್ ನ ಕ್ರೇಜ್ ಅನ್ನು ಬಹುವಾಗಿ ಅರಿತಿರುವ ಜೀ ಎಂಟರ್ ಟೇನ್ಮೆಂಟ್ (Zee Entertainment) ಸಂಸ್ಥೆಯ ಶೇಕಡಾ 53ರಷ್ಟು ಪಾಲನ್ನು ಸೋನಿ ಖರೀದಿಸುವುದು ಬಹುತೇಕ ಖಚಿತವಾಗಿದ್ದು, ಸೋನಿ-ಜೀ ಜಂಟಿಯಾಗಿ ಐಪಿಎಲ್ ನೇರಪ್ರಸಾರದ ಹಗ್ಗಜಗ್ಗಾಟಕ್ಕೆ ಇಳಿಯುವ ಸಾಧ್ಯತೆ ಬಹುತೇಕವಾಗಿ ಕಾಣುತ್ತಿದೆ. 

IPL Auction 2022: ಅನ್ ಸೋಲ್ಡ್ ಆಗೋ ಲಿಸ್ಟ್ ನಲ್ಲಿದ್ದಾರೆ ಈ ದಿಗ್ಗಜರು!
ಹಾಲಿ ವರ್ಷದಲ್ಲಿ ಐಪಿಎಲ್ ಕೆಲವು ದೊಡ್ಡ ಮಟ್ಟದ ಹಣಕಾಸು ಡೀಲ್ ಗಳನ್ನು ಮಾಡಿದೆ. ಅಹಮದಾಬಾದ್ (Ahmedabad) ಹಾಗೂ ಲಖ್ನೋ (Lucknow) ಫ್ರಾಂಚೈಸಿಗಳ ಮಾರಾಟದಿಂದ 12715 ಕೋಟಿ ರೂ. ಸಂಪಾದನೆ ಮಾಡಿದೆ. ಸ್ಪೇನ್ ಪ್ರಸಿದ್ಧ ಫುಟ್ ಬಾಲ್ ಲೀಗ್ ಲಾ (La Liga) ಲೀಗಾದ ಪಾಲುದಾರನಾಗಿರುವ ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್ನರ್ಸ್ (CVC Capital Partners) 5,625 ಕೋಟಿ ರೂಪಾಯಿಗೆ ಅಹಮದಾಬಾದ್ ಫ್ರಾಂಚೈಸಿ ಖರೀದಿ ಮಾಡಿದ್ದರೆ, ಸಂಜೀವ್ ಗೋಯೆಂಕಾ (Sanjiv Goenka) ಒಡೆತನದ ಆರ್ ಇಎಸ್ಜಿ(RPSG) ಕಂಪನಿ ಲಕ್ನೋ ಫ್ರಾಂಚೈಸಿಗಾಗಿ 7090 ಕೋಟಿ ರೂಪಾಯಿ ನೀಡಿದೆ. ಇನ್ನು ರೆಡ್ ಬರ್ಡ್ ಕ್ಯಾಪಿಟಲ್ (RedBird Capital)ರಾಜಸ್ಥಾನ ರಾಯಲ್ಸ್ (Rajasthan Royals)ತಂಡದಲ್ಲಿ ಶೇಕಡಾ 15ರಷ್ಟು ಪಾಲನ್ನು 284 ಕೋಟಿ ರೂಪಾಯಿಗೆ ಖರೀದಿಸಿದ್ದು, ಒಟ್ಟಾರೆ ರಾಜಸ್ಥಾನ ರಾಯಲ್ಸ್ (RR)ತಂಡದ ಮೌಲ್ಯವೀಗ 1893 ಕೋಟಿ ರೂಪಾಯಿ ಎನಿಸಿದೆ. 

ಐಪಿಎಲ್ ಮೌಲ್ಯ 47 ಸಾವಿರ ಕೋಟಿ!
ಕೋವಿಡ್-19, ವಿವಾದಗಳು ಈ ಎಲ್ಲದರ ನಡುವೆಯೂ ಐಪಿಎಲ್ ಆದಾಯಕ್ಕೆ ಸಣ್ಣ ಮಟ್ಟದ ಏಟೂ ಕೂಡ ಬಿದ್ದಿಲ್ಲ. ಒಂದು ಅಂದಾಜಿನ ಪ್ರಕಾರ 2020ರ ವೇಳೆಗೆ ಐಪಿಎಲ್ ನ ಮೌಲ್ಯ 47 ಸಾವಿರ ಕೋಟಿ ರೂಪಾಯಿ. ಈಗ ಅದು 50 ಸಾವಿರ ಕೋಟಿ ರೂಪಾಯ ದಾಟಿರಲೂಬಹುದು. ಇನ್ನು 2021ರ ಐಪಿಎಲ್ ಫೈನಲ್ ಅನ್ನು ಅಂದಾಜು 3.10 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದ್ದರೆ,  ಒಟ್ಟಾರೆ ಐಪಿಎಲ್ ನ ಕನಿಷಷ್ಠ 1 ಪಂದ್ಯವನ್ನು ನೋಡಿದವರ ಸಂಖ್ಯೆ 40 ಕೋಟಿ ಎಂದು ಹೇಳಿದೆ.

click me!