ಟೀಂ ಇಂಡಿಯಾ ಬೆಂಗಳೂರು ಟೆಸ್ಟ್‌ನಲ್ಲಿ 46 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಮಳೆಯ ಅಡಚಣೆಯ ನಡುವೆ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಕಿವೀಸ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಸರ್ವಪತನ ಕಂಡಿದೆ. ಟೀಂ ಇಂಡಿಯಾದ ಐವರುವ ಬ್ಯಾಟರ್‌ಗಳು ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. 46 ರನ್‌ಗೆ ಆಲೌಟ್ ಇದು ಭಾರತೀಯ ನೆಲದಲ್ಲಿ ಟೀಂ ಇಂಡಿಯಾ ದಾಖಲಿಸಿದ ಕನಿಷ್ಠ ಮೊತ್ತ ಎನ್ನುವ ಕುಖ್ಯಾತಿಗೆ ಕಾರಣವಾಗಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆಯಿಂದ ಮೊದಲ ದಿನ ಟಾಸ್ ಕೂಡಾ ನಡೆಯದೇ ಕೊನೆಗೊಂಡಿತ್ತು. ಆದರೆ ಎರಡನೇ ದಿನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 9 ರನ್ ಗಳಿಸುವಷ್ಟರಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
undefined
ಬೆಂಗಳೂರು ಟೆಸ್ಟ್: ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ 2 ಮೇಜರ್ ಚೇಂಜ್
New Zealand on a tear in Bengaluru! 👀 📝 https://t.co/WDUnLWUH8q pic.twitter.com/PmYDpE93qO
— ICC (@ICC)ಕೈಕೊಟ್ಟ ಮಧ್ಯಮ ಕ್ರಮಾಂಕ, 5 ಮಂದಿ ಶೂನ್ಯ ಸಂಪಾದನೆ: ಇನ್ನು ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ವಿಲಿಯಮ್ ಓರ್ಕೆ ಎಸೆತದ ಹೆಚ್ಚಿನ ಪುಟಿತ ಕಂಡ ಚೆಂಡನ್ನು ಸರಿಯಾಗಿ ಗ್ರಹಿಸದ ಕೊಹ್ಲಿ, ಗ್ಲೆನ್ ಫಿಲಿಪ್ಸ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಹಾದಿ ಹಿಡಿದರು.
ಸರ್ಫರಾಜ್ ಖಾನ್ ಹಾಗೂ ಕೆ ಎಲ್ ರಾಹುಲ್ ಕೂಡಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಈ ಇಬ್ಬರು ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದರು. ಇನ್ನು ಬೌಲಿಂಗ್ ಆಲ್ರೌಂಡರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್‌ಗೆ ಸನ್‌ರೈಸರ್ಸ್ ₹23 ಕೋಟಿ ಮೀಸಲು?
ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 13 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 20 ರನ್ ಬಾರಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ನ್ಯೂಜಿಲೆಂಡ್ ಪರ ಮಾರಕ ದಾಳಿ ನಡೆಸಿದ ವೇಗಿ ಮ್ಯಾಟ್ ಹೆನ್ರಿ 15 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ವಿಲಿಯಮ್ ಓರ್ಕೆ 4 ಹಾಗೂ ಟಿಮ್ ಸೌಥಿ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಭಾರತೀಯ ನೆಲದಲ್ಲಿ ಭಾರತದ ಕನಿಷ್ಠ ಸ್ಕೋರ್: ಟೀಂ ಇಂಡಿಯಾ ತವರಿನಲ್ಲಿ ಇದೀಗ ಕೇವಲ 46 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ತವರಿನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ ಮುಖಭಂಗ ಅನುಭವಿಸಿದೆ. ಈ ಮೊದಲು ಟೀಂ ಇಂಡಿಯಾ 1987ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ದೆಹಲಿಯಲ್ಲಿ 75 ರನ್‌ಗಳಿಗೆ ಆಲೌಟ್ ಆಗಿದ್ದು ಕನಿಷ್ಠ ಸ್ಕೋರ್ ಎನಿಸಿಕೊಂಡಿತ್ತು. ಆ ದಾಖಲೆ ಇದೀಗ ಬ್ರೇಕ್ ಆಗಿದೆ.