ರಣಜಿ ಟ್ರೋಫಿ: ಕೇರಳ ವಿರುದ್ಧ ಪಂದ್ಯಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಪ್ರಕಟ

By Naveen Kodase  |  First Published Oct 17, 2024, 12:50 PM IST

ಅಕ್ಟೋಬರ್ 18ರಿಂದ ಆರಂಭವಾಗಲಿರುವ ಕೇರಳ ಎದುರಿನ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟವಾಗಿದೆ


ಬೆಂಗಳೂರು: ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ, 2024-25ರ ರಣಜಿ ಟ್ರೋಫಿಯಲ್ಲಿ ಮೊದಲ ಗೆಲುವಿಗೆ ಎದುರು ನೋಡುತ್ತಿದೆ. ಶುಕ್ರವಾರದಿಂದ ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ಕೇರಳ ವಿರುದ್ಧ ಎಲೈಟ್ 'ಸಿ' ಗುಂಪಿನ ಪಂದ್ಯ ನಡೆಯಲಿದ್ದು, ರಾಜ್ಯ ಕ್ರಿಕೆಟ್‌ ಸಂಸ್ಥೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. 

ಮೊದಲ ಪಂದ್ಯಕ್ಕೆ ತಂಡದಲ್ಲಿದ್ದ ಆಟಗಾರರು ಸ್ಥಾನ ಉಳಿಸಿ ಕೊಂಡಿದ್ದಾರೆ. ಇನ್ನು, ಕೇರಳ ತಂಡದಲ್ಲಿ ಸಂಜು ಸ್ಯಾಮ್ಸ್ನ್ ಆಡಲಿದ್ದು, ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಟೆಸ್ಟ್‌ ಕ್ರಿಕೆಟ್ ಆಡುವುದು ತಮ್ಮ ಮುಂದಿನ ಗುರಿ ಎಂದಿದ್ದರು. ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಲು ಸ್ಯಾಮನ್ ಈ ಪಂದ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

Tap to resize

Latest Videos

undefined

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್‌ಗೆ ಸನ್‌ರೈಸರ್ಸ್‌ ₹23 ಕೋಟಿ ಮೀಸಲು?

ತಂಡ: ಮಯಾಂಕ್ ಅಗರ್‌ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಸ್ಮರಣ್ ಪಾಂಡೆ, ಶ್ರೇಯಸ್ ಗೋಪಾಲ್, ಸುಜಯ್, ಹಾರ್ದಿಕ್ ರಾಜ್, ವೈಶಾಖ್ ವಿಜಯ್‌ಕುಮಾರ್, ಕೌಶಿಕ್, ಲುತ್, ಮೊಹಿನ್, ವಿದ್ಯಾಧರ್, ಕಿಶನ್, ಅಭಿಲಾಷ್.

ಐಸಿಸಿ ಹಾಲ್ ಆಫ್ ಫೇಮ್‌ಗೆ ನೀತು ಡೇವಿಡ್ ಸೇರ್ಪಡೆ: ಎಬಿಡಿ, ಕುಕ್‌ಗೂ ಐಸಿಸಿಯಿಂದ ಗೌರವ 

ದುಬೈ: ಭಾರತದ ಮಾಜಿ ಸ್ಪಿನ್ನರ್ ನೀತು ಡೇವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇವರ ಜೊತೆಗೆ ದಿಗ್ಗಜ ಕ್ರಿಕೆಟಿಗರಾದ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹಾಗೂ ಇಂಗ್ಲೆಂಡ್‌ನ ಅಲಿಸ್ಟೈರ್ ಕುಕ್ ಗೂ ಐಸಿಸಿ ಹಾಲ್ ಆಫ್ ಫೇಮ್ ಗೌರವ ದೊರೆತಿದೆ.

ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ (8/53) ನೀಡಿದ ವಿಶ್ವದಾಖಲೆ ಹೊಂದಿರುವ ನೀತು, ಭಾರತ ಪರ 10 ಟೆಸ್ಟ್ ಹಾಗೂ 97 ಏಕದಿನ ಪಂದ್ಯಗಳನ್ನಾಡಿದ್ದು, ಸದ್ಯ ಬಿಸಿಸಿಐ ಹಿರಿಯ ಮಹಿಳೆಯರ ಆಯ್ಕೆ ಸಮಿತಿ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಭಾರತದ ಕೇವಲ 2ನೇಮಹಿಳಾ ಕ್ರಿಕೆಟರ್‌ ಎನ್ನುವ ಹಿರಿಮೆ ತುಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಶಾಂತಾ ರಂಗಸ್ವಾಮಿಗೆ ಈ ಗೌರವ ಸಿಕ್ಕಿತ್ತು.

ಬೆಂಗಳೂರು ಟೆಸ್ಟ್‌: ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ 2 ಮೇಜರ್ ಚೇಂಜ್

ಐಪಿಎಲ್‌: ಮುಂಬೈ ತಂಡಕ್ಕೆ ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ಮುಕ್ತಾಯಗೊಂಡ ಭಾರತ ಕ್ರಿಕೆಟ್ ತಂಡದ ಜತೆಗಿನ ಒಪ್ಪಂದ ಕೊನೆಗೊಂಡಿತ್ತು.  ಪರಾಸ್ ಮಾಂಬ್ರೆ ಈ ಮೊದಲು ಮುಂಬೈ ತಂಡದೊಂದಿಗೆ 2010, 2011 ಹಾಗೂ 2013ರಲ್ಲಿ ಕೆಲಸ ಮಾಡಿದ್ದರು.
 

click me!