IPL 2021 ಸ್ಥಗಿತದಿಂದ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟ!

By Suvarna NewsFirst Published May 4, 2021, 8:38 PM IST
Highlights

ಕೊರೋನಾ ವೈರಸ್ ಭೀಕರತೆ ಸರಾಗವಾಗಿ ನಡೆಯುತ್ತಿದ್ದ ಐಪಿಎಲ್ ಟೂರ್ನಿ ರದ್ದಾಗಿದೆ. ಪರಿಣಾಮ ಪ್ರಾಯೋಜಕತ್ವ, ಜಾಹೀರಾತು, ಟಿವಿ ಹಕ್ಕು ಮಾರಾಟ ಸೇರಿದಂತೆ ಹಲವು ವಾಣಿಜ್ಯ ಒಪ್ಪಂದಕ್ಕೆ ಪೆಟ್ಟು ಬಿದ್ದಿದೆ. ಹೀಗಾಗಿ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಮುಂಬೈ(ಮೇ.04): ಕೊರೋನಾ ವೈರಸ್ ಭಾರತದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ತಂದಿಟ್ಟಿದೆ. ಕೊರೋನಾ ಭೀಕರತೆಗೆ ಇದೀಗ ಐಪಿಎಲ್ ಟೂರ್ನಿ ಕೂಡ ರದ್ದಾಗಿದೆ. ಇದರ ಪರಿಣಾಮ ಬಿಸಿಸಿಐಗೆ 2,000 ದಿಂದ 2,200 ರೂಪಾಯಿ ನಷ್ಟವಾಗಿದೆ. 

ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!

ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿಯನ್ನು ಅನಿರ್ದಾಷ್ಟವದಿ ಕಾಲಕ್ಕೆ ಮುಂದೂಡಲಾಗಿದೆ. ಇದರಲ್ಲಿ ಅತೀ ದೊಡ್ಡ ಪಾಲು ಟೂರ್ನಿ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯದ್ದಾಗಿದೆ. ಐಪಿಎಲ್ 5 ವರ್ಷಗಳ ಪ್ರಸಾರ ಹಕ್ಕನ್ನು ಬಿಸಿಸಿಐ ಬರೋಬ್ಬರಿ 16,347 ಕೋಟಿ ರೂಪಾಯಿಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಮಾರಾಟ ಮಾಡಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ಆಯೋಜನೆಯಾಗುತ್ತಾ ರದ್ದಾಗಿರುವ ಐಪಿಎಲ್ ಟೂರ್ನಿ?

ಅಂದರೆ ಪ್ರತಿ ಆವೃತ್ತಿಯ 50 ಪಂದ್ಯಗಳಿಗೆ 3269.4 ಕೋಟಿ ರೂಪಾಯಿ. ಇದೀಗ ಕೇವಲ 29 ಪಂದ್ಯಗಳು ಮಾತ್ರ ಅಂತ್ಯಗೊಂಡಿದೆ. ಹೀಗಾಗಿ ಬಾಕಿ ಉಳಿದ ಪಂದ್ಯ ಹಾಗೂ ಮೊತ್ತ ಇದೀಗ ಬಿಸಿಸಿಐ ಟೆನ್ಶನ್ ಹೆಚ್ಚಿಸಿದೆ. ಪ್ರತಿ ಒಂದು ಪಂದ್ಯ ರದ್ದಾದರೆ 54.5 ಕೋಟಿ ರೂಪಾಯಿ ನಷ್ಟವಾಗಲಿದೆ. ಈ ನಿಟ್ಟಿನಲ್ಲಿ 29 ಪಂದ್ಯಗಳಿಗೆ 1,580 ರೂಪಾಯಿ. ಹೀಗಾಗಿ ಇನ್ನುಳಿದ ಪಂದ್ಯದ 1,690 ರೂಪಾಯಿ ಸ್ಟಾರ್ ಸ್ಪೋರ್ಟ್ಸ್ ನಷ್ಟ ಬಿಸಿಸಿಐ ಹೆಗಲೇರಿದೆ.

ಟೈಟಲ್ ಪ್ರಾಯೋಜಕತ್ವ ಪಡೆದಿರುವ ವಿವೋ ಪ್ರತಿ ಆವೃತ್ತಿಗೆ 440 ಕೋಟಿ ರೂಪಾಯಿಗೆ ಬಿಸಿಸಿಐಗೆ ಪಾವತಿಸುತ್ತದೆ. ಹೀಗಾಗಿ ಇದೀಗ 29 ಪಂದ್ಯಗಳಾಗಿರುವ ಕಾರಣ ವಿವೋ ಐಪಿಎಲ್ ಸಣ್ಣ ಮೊತ್ತವನ್ನು ಮಾತ್ರ ಬಿಸಿಸಿಐಗೆ ನೀಡಲಿದೆ. 

ಇದರ ಜೊತೆಗೆ ಸಹ ಪ್ರಾಯೋಜಕತ್ವ ಪಡೆದಿರುವ ಅನ್‌ಅಕಾಡೆಮಿ, ಡ್ರೀಮ್ 11, ಸಿರೆಡ್, ಅಪ್‌ಸ್ಟಾಕ್ಸ್, ಟಾಟಾ ಮೋಟಾರ್ಸ್ ಗಳಿಂದ ಬರಬೇಕಿದ್ದ 120 ಕೋಟಿ ರೂಪಾಯಿ ಕೂಡ ಬಿಸಿಸಿಐಗೆ ನಷ್ಟವಾಗಿದೆ. ಹೀಗಾಗಿ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಬರಬೇಕಿದ್ದ ನಷ್ಟ ಒಟ್ಟುಗೂಡಿಸಿದರೆ ಸರಿಸುಮಾರು 2,200 ಕೋಟಿ ರೂಪಾಯಿ ಸ್ಪಷ್ಟ ನಷ್ಟ ಬಿಸಿಸಿಐಗೆ ಆಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. 

ಇದು ಪ್ರಾಯೋಜಕತ್ವದಿಂದ ಬಿಸಿಸಿಐಗೆ ಆಗಲಿರುವ ನಷ್ಟ. ಇನ್ನು ಟೂರ್ನಿ ಆಯೋಜನೆ ಸೇರಿದಂತೆ ಇತರ ಖರ್ಚು ಸುಮಾರು 1,000 ಕೋಟಿ ರೂಪಾಯಿಗೂ ಹೆಚ್ಚಾಗಲಿದೆ. ಹೀಗಾಗಿ ಪ್ರಾಯೋಜಕತ್ವದಿಂದ ಬರಬೇಕಿದ್ದ 2,200 ಕೋಟಿ ರೂಪಾಯಿ ಹಾಗೂ ಆಯೋಜನೆ ಖರ್ಚು ವೆಚ್ಚ 1,000 ಕೋಟಿ ರೂಪಾಯಿ ಒಟ್ಟು 3,200 ಕೋಟಿ ರೂಪಾಯಿ ನಷ್ಟ ಬಿಸಿಸಿಐ ತಲೆಮೇಲೆ ಇದೆ. 

ಐಪಿಎಲ್ ಟೂರ್ನಿ ಸ್ಥಗಿತಗೊಂಡಿದೆ, ಆದರೆ ರದ್ದಾಗಿಲ್ಲ ಎಂದು ಚೇರ್ಮೆನ್ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಟೂರ್ನಿಯನ್ನು ಭಾರತದಲ್ಲಿ ಅಥವಾ ದುಬೈಗೆ ಸ್ಛಳಾಂತರ ಮಾಡುತ್ತಾ ಅನ್ನೋ ಕುರಿತು ಯಾವುದೇ ಖಚಿತತೆ ಇಲ್ಲ. ಒಂದು ವೇಳೆ ಟೂರ್ನಿ ಆಯೋಜನೆಗೊಂಡರೆ ಬಿಸಿಸಿಐ ಭಾರಿ ನಷ್ಟದಿಂದ ಪಾರಾಗಲಿದೆ. 

click me!