ಕೊರೋನಾ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. 29 ಲೀಗ್ ಪಂದ್ಯದ ಬಳಿಕ ಐಪಿಎಲ್ ಟೂರ್ನಿ ದಿಢೀರ್ ರದ್ದಾಗಿದೆ. ಇದೀಗ ರದ್ದುಗೊಂಡಿರುವ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ.
ಮುಂಬೈ(ಮೇ.04): ಆಟಗಾರರು, ಸಿಬ್ಬಂದಿಗಳಿಗೆ ಕೊರೋನಾ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. ಇದೀಗ ರದ್ದುಗೊಂಡಿರುವ ಟೂರ್ನಿಯನ್ನು ಮುಂದುವರಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಸಿಸಿಐಗೆ ಇರುವ ಸಣ್ಣ ಸಮಯದಲ್ಲಿ ಐಪಿಎಲ್ ಟೂರ್ನಿ ಅಂತ್ಯಗೊಳಿಸಲು ಪ್ಲಾನ್ ಮಾಡಿದೆ.
IPL ಶಾಕ್ ಬೆನ್ನಲ್ಲೇ ಟಿ20 ವಿಶ್ವಕಪ್ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!
ಸೆಪ್ಟೆಂಬರ್ ವೇಳಗೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಲಿದೆ ಅನ್ನೋ ಲೆಕ್ಕಾಚಾರ ಬಿಸಿಸಿಐಗಿದೆ. ಸೆಪ್ಟೆಂಬರ್ ತಿಂಗಳಲ್ಲಿನ ಸಂಪೂರ್ಣ ಸಮಯ ಬಿಸಿಸಿಐಗೆ ಸೇರಿದ್ದಾಗಿದೆ. ಹೀಗಾಗಿ ಈ ಸಮಯದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ ಸುರಕ್ಷತೆಗೆ ಆದ್ಯತೆ ನೀಡಿರುವ ಬಿಸಿಸಿಐ ಕೊರೋನಾ ಕಡಿಮೆಯಾದರೆ ಮಾತ್ರ ಟೂರ್ನಿ ಆಯೋಜಿಸಲು ಸಾಧ್ಯ ಎಂದು ಈಗಾಗಲೇ ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿ ನೋಡಿದರೆ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿಲ್ಲ. ಹೀಗಾಗಿ ಐಪಿಎಲ್ ಟೂರ್ನಿ ಆಯೋಜನೆ ಬಹುತೇಕ ಕಷ್ಟ.
ಕೆಕೆಆರ್ ತಂಡದಲ್ಲಿ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೊರೋನಾ ಪಾಸಿಟೀವ್ ಬಂದಿತ್ತು. ಇದರ ಬೆನ್ನಲ್ಲೇ ವೃದ್ಧಿಮಾನ ಸಾಹ ಹಾಗೂ ಅಮಿತ್ ಮಿಶ್ರಾಗೂ ಕೊರೋನಾ ಪಾಸಿಟೀವ್ ಬಂದಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಸಿಬ್ಬಂದಿಗಳಿಗೂ ಕೊರೋನಾ ಅಂಟಿಕೊಂಡಿದೆ