ಕೊರೋನಾ ವೈರಸ್ ಬಿಸಿ ಕ್ರಿಕೆಟ್ ವಲಯಕ್ಕೂ ತಟ್ಟಿದ್ದು, ಆಟಗಾರರ ವೇತನ ಕಡಿತಗೊಳ್ಳುವ ಸಾಧ್ಯೆತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.01): ಕೊರೋನಾ ಸೋಂಕಿನಿಂದಾಗಿ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ಅಮಾನತುಗೊಂಡಿದ್ದು, ಬಿಸಿಸಿಐಗೆ ಸಾವಿರಾರು ಕೋಟಿ ನಷ್ಟ ಎದುರಾಗಿದೆ. ಈ ಕಾರಣದಿಂದಾಗಿ ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರ ವೇತನವನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?
ಈಗಾಗಲೇ ಇಂಗ್ಲೆಂಡ್, ಆಸ್ಪ್ರೇಲಿಯಾದಲ್ಲಿ ಆಟಗಾರರು ವೇತನ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದೇ ಮಾದರಿಯನ್ನು ಬಿಸಿಸಿಐ ಸಹ ಅನುಸರಿಸುವ ಸಾಧ್ಯತೆ ಇದೆ. ಇನ್ನು ದೇಸಿ ಕ್ರಿಕೆಟಿಗರು ಸಹ ಸಮಸ್ಯೆ ಎದುರಿಸಲಿದ್ದಾರೆ ಎನ್ನಲಾಗಿದೆ.
'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್!
ಇದೇ ವೇಳೆ ಐಪಿಎಲ್ ಟೂರ್ನಿ ಸಹ ನಡೆಯುವುದು ಅನುಮಾನವೆನಿಸಿದ್ದು, ಫ್ರಾಂಚೈಸಿಗಳಿಗೆ ಹೊರೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರತಿ ಐಪಿಎಲ್ ತಂಡದ ಮಾಲಿಕರು ಆಟಗಾರರಿಗೆ ವೇತನ ನೀಡಲು ವಾರ್ಷಿಕ 75ರಿಂದ 80 ಕೋಟಿ ವೆಚ್ಚ ಮಾಡಲಿವೆ ಎಂದು ಅಂದಾಜಿಸಲಾಗಿದೆ.