ಡ್ರೆಸ್ಸಿಂಗ್ ರೂಮ್, ಶೌಚಾಲಯ ಕತೆ ಕೇಳಿ ಬಿಸಿಸಿಐ ಶಾಕ್, ಸ್ಟಾರ್ ಕ್ರಿಕೆಟಿಗರು ಏಷ್ಯನ್ ಗೇಮ್ಸ್‌ನಿಂದ ಔಟ್?

Published : Aug 28, 2026, 09:03 PM IST
TEAM INDIA

ಸಾರಾಂಶ

ಏಷ್ಯನ್ ಗೇಮ್ಸ್ ಕ್ರಿಕೆಟ್‌ಗೆ ಟೀಂ ಇಂಡಿಯಾ ತಯಾರಿ ಆರಂಭಗೊಂಡಿದೆ. ಟಾಯ್ಲೆಟ್, ಡ್ರೆಸ್ಸಿಂಗ್ ರೂಂ ಕತೆ ಕೇಳಿದ ಬಿಸಿಸಿಐ ಕಕ್ಕಾಬಿಕ್ಕಿಯಾಗಿದೆ. ಇದರ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ.

ನವದೆಹಲಿ (ಆ.28) ಏಷ್ಯನ್ ಗೇಮ್ಸ್ ಕ್ರಿಕೆಟ್‌ಗೆ ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ಈ ಬಾರಿ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಜಪಾನ್ ಆಯೋಜಿಸುತ್ತಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಲು ಟೀಂ ಇಂಡಿಯಾ ಸಜ್ಜಾಗಿದೆ. ಆದರೆ ಗೇಮ್ಸ್ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಬಿಸಿಸಿಐ ಪ್ಲಾನ್ ಬದಲಿಸಲು ಮುಂದಾಗಿದೆ. ಏಷ್ಯನ್ ಗೇಮ್ಸ್ ಕ್ರೀಡೆಯ ಕ್ರಿಕೆಟಿಗರ ಡ್ರೆಸ್ಸಿಂಗ್ ರೂಂ, ಶೌಚಾಲಯದ ಕತೆ ಕೇಳಿ ಬಿಸಿಸಿಐ ಕಂಗಾಲಾಗಿದೆ. ಇದರ ಬೆನ್ನಲ್ಲೇ ಪ್ರಮುಖ ಆಟಗಾರರನ್ನು ಏಷ್ಯನ್ ಗೇಮ್ಸ್ ಕ್ರಿಕೆಟ್‌ಗೆ ಕಳುಹಿಸದಿರಲು ಮುಂದಾಗಿದೆ.

ಟೆಂಟ್ ಹಾಕಿದ ಡ್ರೆಸ್ಸಿಂಗ್, ಟಾಯ್ಲೆಟ್ ಮಾರುದ್ದ ದೂರ

ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟಿಗರಿಗೆ ವಿಶೇಷ ವ್ಯವಸ್ಥೆ ಇಲ್ಲ. ಏಷ್ಯನ್ ಗೇಮ್ಸ್‌ಗಾಗಿ ನಿರ್ಮಾಣ ಮಾಡಿರುವ ಕ್ರೀಡಾ ಗ್ರಾಮಗಳಲ್ಲೇ ಕ್ರಿಕೆಟ್ ಕೂಡ ನಡೆಯಲಿದೆ. ಹೀಗಾಗಿ ಡ್ರೆಸ್ಸಿಂಗ್ ರೂಂ ಇಲ್ಲ. ಟೆಂಟ್ ಹಾಕಿ ಡ್ರೆಸ್ಸಿಂಗ್ ರೂಂ ಮಾಡಲಾಗಿದೆ. ಇನ್ನು ಶೌಚಾಲಯಗಳು ಡ್ರೆಸ್ಸಿಂಗ್ ರೂಂನಿಂದ ಸಾಕಷ್ಟು ದೂರದಲ್ಲಿದೆ. ಇನ್ನು ಕ್ರಿಕೆಟಿಗರಿಗೆ ನೀಡಿರುವ ಹೊಟೆಲ್ ರೂಂ ಕೊಠಡಿಗಳು ಚಿಕ್ಕದಾಗಿದೆ. ಹಲವು ಸಮಸ್ಯೆಗಳು ತಲೆದೋರಿದೆ. ಈ ಮಾಹಿತಿ ತಿಳಿದ ಬಿಸಿಸಿಐ ಇದೀಗ ಪೂರ್ಣ ಪ್ರಮಾಣದ ತಂಡ ಕಳುಹಿಸಿದೆ ಅನ್‌ಕ್ಯಾಪ್ಡ್ ಸೇರಿದಂತೆ ಯುವ ಕ್ರಿಕೆಟಿಗರನ್ನು ಕಳುಹಿಸಲು ನಿರ್ಧರಿಸಿದೆ.

ಪರಿಶೀಲನೆಗೆ ಮುಂದಾದ ಬಿಸಿಸಿಐ

ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟಿಗರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ಬಿಸಿಸಿಐ ಮಾತ್ರವಲ್ಲ, ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಬಿಸಿಸಿಐ ಜಪಾನ್‌ನ ಏಷ್ಯನ್ ಗೇಮ್ಸ್ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲು ಮುಂದಾಗಿದೆ. ನೀಡಿರುವ ಸೌಲಭ್ಯಗಳು ನಿರೀಕ್ಷಿತವಾಗಿರದಿದ್ದರೆ, ಬಿ ತಂಡ ಕಳುಹಿಸಲು ಬಿಸಿಸಿಐ ಮುಂದಾಗಿದೆ. ಇದರ ನಡುವೆ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಏಷ್ಯನ್ ಗೇಮ್ಸ್ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಸಿಸಿಐ ಪೂರ್ಣ ಪ್ರಮಾಣದ ತಂಡವನ್ನೇ ಕಳುಹಿಸುವ ಸಾಧ್ಯತೆ ಇದೆ.

ಭಾರತ ಸೇರಿದಂತೆ ಹಲವು ದೇಶಗಳು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಇದರ ಪರಿಣಾಮ ಏಷ್ಯನ್ ಗೇಮ್ಸ್ ಆಯೋಜಕರು ವಿಶೇಷ ಪರಿಗಣನೆ ನೀಡಲು ಮುಂದಾಗಿದ್ದಾರೆ.

ಶ್ರೇಯಸ್ ಅಯ್ಯರ್ ನೇತೃತ್ವದ ತಂಡ

ಏಷ್ಯನ್ ಗೇಮ್ಸ್ ಕ್ರಿಕೆಟ್‌ಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ. ಇನ್ನು ತಿಲಕ್ ವರ್ಮಾ ಉಪ ನಾಯಕನಾಗಿದ್ದಾರೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಇದೀಗ ಈ ಬಾರಿಯೂ ಚಿನ್ನದ ಪದಕ ಸಾಧನೆಗೆ ಸಜ್ಜಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ ಇಷ್ಟೊಂದು ಅಸಹಾಯಕ ಸ್ಥಿತಿಗೆ ತಲುಪಿದ್ದು ನನಗೆ ನೆನಪೇ ಇಲ್ಲ: ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಮೊಹಮ್ಮದ್ ಕೈಫ್ ಕಿಡಿ
Cricket: ಈ 5 ಬ್ಯಾಟರ್‌ಗಳು ಒಮ್ಮೆಯೂ ಶೂನ್ಯಕ್ಕೆ ಔಟ್ ಆಗಿಲ್ಲ; ಪಟ್ಟಿಯಲ್ಲೊಬ್ಬ ಭಾರತೀಯ!