Cricket: ಈ 5 ಬ್ಯಾಟರ್‌ಗಳು ಒಮ್ಮೆಯೂ ಶೂನ್ಯಕ್ಕೆ ಔಟ್ ಆಗಿಲ್ಲ; ಪಟ್ಟಿಯಲ್ಲೊಬ್ಬ ಭಾರತೀಯ!

Published : Aug 28, 2026, 04:57 PM IST
Cricket-1

ಸಾರಾಂಶ

149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, 20ಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಅಪರೂಪದ ದಾಖಲೆಯನ್ನು ಐವರು ಬ್ಯಾಟ್ಸ್‌ಮನ್‌ಗಳು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಒಬ್ಬ ಆಟಗಾರರಿದ್ದಾರೆ.

ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಎಸೆತಗಳಲ್ಲೇ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆ ಭಂಗಗೊಳಿಸಿ ಶೂನ್ಯಕ್ಕೆ ಔಟ್ ಮಾಡುವುದು ಬೌಲರ್‌ಗಳಿಗೆ ಸುಲಭ. ಆದರೆ, 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 20ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿ, ಎಂದಿಗೂ 0 ರನ್‌ಗೆ ಔಟ್ ಆಗದ 5 ಬ್ಯಾಟ್ಸ್‌ಮನ್‌ಗಳು ಈ ಅಪರೂಪದ ದಾಖಲೆ ಬರೆದಿದ್ದಾರೆ.

1. ಸೀನ್ ವಿಲಿಯಮ್ಸ್ (ಜಿಂಬಾಬ್ವೆ)!

ಈ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಇನ್ನಿಂಗ್ಸ್ ಆಡಿದ ಹೆಗ್ಗಳಿಕೆ ಸೀನ್ ವಿಲಿಯಮ್ಸ್ ಅವರದ್ದು. 2013 ರಿಂದ 2025 ರವರೆಗೆ ಜಿಂಬಾಬ್ವೆ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದ ಇವರು 47 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ.

ಪಂದ್ಯಗಳು / ಇನ್ನಿಂಗ್ಸ್; 24 ಪಂದ್ಯ / 47 ಇನ್ನಿಂಗ್ಸ್

ಒಟ್ಟು ರನ್; 1,946 (ಸರಾಸರಿ: 45.25)

ಅತ್ಯಧಿಕ ಸ್ಕೋರ್; 154

ಶತಕ / ಅರ್ಧಶತಕ; 6 ಶತಕ, 7 ಅರ್ಧಶತಕ

2. ಜಿಮ್ ಬರ್ಕ್ (ಆಸ್ಟ್ರೇಲಿಯಾ)!

1950ರ ದಶಕದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಜಿಮ್ ಬರ್ಕ್, ತಮ್ಮ 8 ವರ್ಷಗಳ ಟೆಸ್ಟ್ ಪಯಣದ 44 ಇನ್ನಿಂಗ್ಸ್‌ಗಳಲ್ಲಿ ಪ್ರತಿ ಬಾರಿಯೂ ರನ್ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಪಂದ್ಯಗಳು / ಇನ್ನಿಂಗ್ಸ್; 24 ಪಂದ್ಯ / 44 ಇನ್ನಿಂಗ್ಸ್

ಒಟ್ಟು ರನ್; 1,280 (ಸರಾಸರಿ: 34.59)

ಅತ್ಯಧಿಕ ಸ್ಕೋರ್; 189

ಶತಕ / ಅರ್ಧಶತಕ; 3 ಶತಕ, 5 ಅರ್ಧಶತಕ

3. ರೆಗ್ಗೀ ಡಫ್ (ಆಸ್ಟ್ರೇಲಿಯಾ)!

20ನೇ ಶತಮಾನದ ಆರಂಭದಲ್ಲೇ (1902-1905) ಕಠಿಣ ಮತ್ತು ಅನಿರೀಕ್ಷಿತ ಪಿಚ್‌ಗಳಿದ್ದ ಕಾಲದಲ್ಲೂ ರೆಗ್ಗೀ ಡಫ್ ಈ ಸಾಧನೆ ಮಾಡಿದ್ದು ವಿಶೇಷ.

ಪಂದ್ಯಗಳು / ಇನ್ನಿಂಗ್ಸ್: 22 ಪಂದ್ಯ / 40 ಇನ್ನಿಂಗ್ಸ್

ಒಟ್ಟು ರನ್; 1,317 (ಸರಾಸರಿ: 35.59)

ಅತ್ಯಧಿಕ ಸ್ಕೋರ್; 146

ಶತಕ / ಅರ್ಧಶತಕ; 2 ಶತಕ, 6 ಅರ್ಧಶತಕ

4. ಬ್ರಿಜೇಶ್ ಪಟೇಲ್ (ಭಾರತ)!

ಈ ವಿಶೇಷ ಕ್ಲಬ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಬ್ರಿಜೇಶ್ ಪಟೇಲ್. 1974 ರಿಂದ 1977 ರವರೆಗೆ ಭಾರತವನ್ನು ಪ್ರತಿನಿಧಿಸಿದ್ದ ಇವರು ಆಡಿದ ಎಲ್ಲಾ 38 ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 1 ರನ್ ಆದರೂ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.

ಪಂದ್ಯಗಳು / ಇನ್ನಿಂಗ್ಸ್; 21 ಪಂದ್ಯ / 38 ಇನ್ನಿಂಗ್ಸ್

ಒಟ್ಟು ರನ್; 972 (ಸರಾಸರಿ: 29.45)

ಅತ್ಯಧಿಕ ಸ್ಕೋರ್; 115

ಶತಕ / ಅರ್ಧಶತಕ; 1 ಶತಕ, 5 ಅರ್ಧಶತಕ

5. ರಾಬರ್ಟ್ ಕ್ರಿಸ್ಟಿಯಾನಿ (ವೆಸ್ಟ್ ಇಂಡೀಸ್)

1948 ರಿಂದ 1954 ರವರೆಗೆ ವೆಸ್ಟ್ ಇಂಡೀಸ್ ಪರ ಆಡಿದ ರಾಬರ್ಟ್ ಕ್ರಿಸ್ಟಿಯಾನಿ, ಆಕ್ರಮಣಕಾರಿ ಆಟಕ್ಕೆ ಹೆಸರಾದ ವೆಸ್ಟ್ ಇಂಡೀಸ್ ತಂಡದಲ್ಲಿ ಅದ್ಭುತ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಈ ಪಟ್ಟಿಗೆ ಸೇರಿದ್ದಾರೆ.

ಪಂದ್ಯಗಳು / ಇನ್ನಿಂಗ್ಸ್; 22 ಪಂದ್ಯ / 37 ಇನ್ನಿಂಗ್ಸ್

ಒಟ್ಟು ರನ್; 896 (ಸರಾಸರಿ: 26.35)

ಅತ್ಯಧಿಕ ಸ್ಕೋರ್; 107

ಶತಕ / ಅರ್ಧಶತಕ; 1 ಶತಕ, 4 ಅರ್ಧಶತಕ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತ್ರಿಶತಕ ಸಿಡಿಸಿ, ಲಕ್ಷ್ಮಣ್‌ರನ್ನೇ ಹಿಂದಿಕ್ಕಿ ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಈ ಆಟಗಾರ ಒಂದೂ ಟೆಸ್ಟ್ ಪಂದ್ಯ ಆಡಲಿಲ್ಲ!
ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ ಮಾಡಿದ್ರೆ ಲಾರ್ಡ್ಸ್‌ ಟೆಸ್ಟ್ ಬಾಯ್ಕಾಟ್ ಮಾಡ್ತೇವೆ; ಇಂಗ್ಲೆಂಡ್‌ಗೆ ಬೆದರಿಕೆ ಹಾಕಿ ಕೆಲವೇ ಹೊತ್ತಿನಲ್ಲೇ ತೆಪ್ಪಗಾದ ಪಾಕಿಸ್ತಾನ