ಸೌರವ್ ಗಂಗೂಲಿಗೆ 49ರ ಸಂಭ್ರಮ; ಹರಿದು ಬಂತು ಅಭಿನಂದನೆಗಳ ಮಹಾಪೂರ

Published : Jul 08, 2021, 12:26 PM IST
ಸೌರವ್ ಗಂಗೂಲಿಗೆ 49ರ ಸಂಭ್ರಮ;  ಹರಿದು ಬಂತು ಅಭಿನಂದನೆಗಳ ಮಹಾಪೂರ

ಸಾರಾಂಶ

* 49ನೇ ವಸಂತಕ್ಕೆ ಕಾಲಿಟ್ಟ ಸೌರವ್ ಗಂಗೂಲಿ * ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ದಾದಾ * ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂತು ಅಭಿನಂದನೆಗಳ ಮಹಾಪೂರ

ನವದೆಹಲಿ(ಜು.08): ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ದಾದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

ಸೌರವ್ ಗಂಗೂಲಿ 5 ವರ್ಷಗಳ ಕಾಲ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2003ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಗಂಗೂಲಿ ನಾಯಕರಾದ ಬಳಿಕ ವಿದೇಶಿ ನೆಲದಲ್ಲೂ ಟೀಂ ಇಂಡಿಯಾ ಗೆಲುವಿನ ರುಚಿ ಕಾಣಲಾರಂಭಿಸಿತು. ಗಂಗೂಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 28 ಪಂದ್ಯಗಳನ್ನು ವಿದೇಶದಲ್ಲಾಡಿ 11ರಲ್ಲಿ ಗೆಲುವಿನ ನಗೆ ಬೀರಿತ್ತು.

Happy Birthday MS Dhoni: ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ 40ನೇ ಹುಟ್ಟುಹಬ್ಬದ ಸಂಭ್ರಮ!

ಸೌರವ್‌ ಗಂಗೂಲಿ ಭಾರತ ಪರ 311 ಏಕದಿನ ಪಂದ್ಯಗಳನ್ನಾಡಿ 22 ಶತಕ, 72 ಅರ್ಧಶತಕ ಸಹಿತ 11,163 ರನ್ ಬಾರಿಸಿದ್ದಾರೆ. ಇನ್ನು 113 ಟೆಸ್ಟ್‌ ಪಂದ್ಯಗಳನ್ನಾಡಿ 16 ಶತಕ ಹಾಗೂ 35 ಅರ್ಧಶತಕ ಸಹಿತ 7,212 ರನ್‌ ಬಾರಿಸಿದ್ದಾರೆ. ಅಕ್ಟೋಬರ್ 23, 2019ರಿಂದ ಬಿಸಿಸಿಐನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾದಾ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಹಿರಿಕಿರಿಯ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2000ರ U19 ವಿಶ್ವಕಪ್ ಹೀರೋ: ಕ್ರಿಕೆಟ್ ಇತಿಹಾಸದ 'ದಿ ಬೆಸ್ಟ್' ಆಲ್‌ರೌಂಡರ್ ಆಗಬೇಕಿದ್ದವನ ದುರಂತ ಕಥೆ!
ಪಾಕಿಸ್ತಾನ ಕೇವಲ 55 ರನ್‌ಗೆ ಆಲೌಟ್, 7 ವಿಕೆಟ್ ಗೆಲುವು ದಾಖಲಿಸಿ ದಾಖಲೆ ಬರೆದ ಭಾರತ ಮಹಿಳಾ ತಂಡ