ಟಿ20 ರ‍್ಯಾಂಕಿಂಗ್‌: ಟಾಪ್ 10 ಪಟ್ಟಿಯೊಳಗೆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಥಾನ

Published : Jul 08, 2021, 10:42 AM IST
ಟಿ20 ರ‍್ಯಾಂಕಿಂಗ್‌: ಟಾಪ್ 10 ಪಟ್ಟಿಯೊಳಗೆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಥಾನ

ಸಾರಾಂಶ

* ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟ * ಟಾಪ್‌ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ-ರಾಹುಲ್‌ಗೆ ಸ್ಥಾನ * ಅಗ್ರಸ್ಥಾನದಲ್ಲೇ ಮುಂದುವರೆದ ಇಂಗ್ಲೆಂಡ್ ಕ್ರಿಕೆಟಿಗ ಡೇವಿಡ್ ಮಲಾನ್

ದುಬೈ(ಜು.08): ಐಸಿಸಿ ಟಿ20 ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮರಳಿ 5ನೇ ಸ್ಥಾನಕ್ಕೇರಿದ್ದರೆ, ಕನ್ನಡಿಗ ಕೆ.ಎಲ್‌.ರಾಹುಲ್‌ ಒಂದು ಸ್ಥಾನ ಜಿಗಿತ ಕಂಡು 6ನೇ ರ‍್ಯಾಂಕಿಂಗ್‌ಗೆ ಏರಿದ್ದಾರೆ. 

ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್‌ ಹೊರತು ಪಡಿಸಿ ಭಾರತದ ಇನ್ಯಾವ ಕ್ರಿಕೆಟ್ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡರ್‌ ವಿಭಾಗದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನ ಅಗ್ರ 5 ಆಟಗಾರರ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್ ಮಲಾನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಆರೋನ್ ಫಿಂಚ್, ಬಾಬರ್ ಅಜಂ, ಡೇವಿಡ್ ಕಾನ್‌ವೇ ಹಾಗೂ ವಿರಾಟ್ ಕೊಹ್ಲಿ ಮೊದಲ ಸ್ಥಾನಗಳಲ್ಲಿ ಭದ್ರವಾಗಿದ್ದಾರೆ.

ಕೋವಿಡ್ ಶಾಕ್ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡಕ್ಕೆ ಬೆನ್ ಸ್ಟೋಕ್ಸ್ ಕ್ಯಾಪ್ಟನ್‌

ಏಕದಿನ ರ‍್ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಏಕದಿನ ಕ್ರಿಕೆಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಬೌಲಿಂಗ್‌ನಲ್ಲಿ ವೇಗಿ ಜಸ್ಟ್ರೀತ್‌ ಬುಮ್ರಾ 6ನೇ ಸ್ಥಾನಕ್ಕೆ ಜಾರಿದ್ದರೆ, ಆಲ್‌ರೌಂಡರ್‌ ವಿಭಾಗದಲ್ಲಿ ರವೀಂದ್ರ ಜಡೇಜಾ 9ನೇ ಶ್ರೇಯಾಂಕದಲ್ಲಿ ಮುಂದುವರೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೆಸ್ಟ್‌ ಇಂಡೀಸ್ ಚಾಲೆಂಜ್‌ಗೆ ಟೀಂ ಇಂಡಿಯಾ! ಇಂದಿನಿಂದ ಹೈವೋಲ್ಟೇಜ್ ಸರಣಿ, ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?
"ಸಚಿನ್‌ಗೆ ಗಾರ್ಡ್ ಆಫ್ ಆನರ್ ಕೊಟ್ಟ ನಾಯಕ: ಒಂದು ಕಪ್ಪು ಚುಕ್ಕೆಯಿಂದ ಕ್ರಿಕೆಟ್ ಜೀವನವೇ ಅಂತ್ಯ!"