ಬೆಂಗ್ಳೂರಲ್ಲಿ ಬಿಸಿಸಿಐ ಉತ್ಕೃಷ್ಟತಾ ಕೇಂದ್ರ ಅನಾವರಣ; 80ಕ್ಕೂ ಹೆಚ್ಚು ಪಿಚ್ ಬಳಕೆಗೆ ರೆಡಿ

By Kannadaprabha NewsFirst Published Sep 30, 2024, 9:17 AM IST
Highlights

ಬೆಂಗಳೂರಿನ ಸಮೀಪದ ದೇವನಹಳ್ಳಿಯಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ಎಕ್ಸಲೆನ್ಸ್ ಸೆಂಟರನ್ನು ಶನಿವಾರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಉದ್ಘಾಟಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ, ತನ್ನದೇ ಸ್ವಂತ ಜಾಗವನ್ನು ಮಾಡಿಕೊಳ್ಳಲು 24 ವರ್ಷಗಳು ಬೇಕಾಯಿತು. ಆದರೆ ಇಷ್ಟು ವರ್ಷ ಕಾಲ ಕಾಯ್ದಿದ್ದಕ್ಕೂ ಸಾರ್ಥಕ ಎನ್ನುವ ರೀತಿಯಲ್ಲಿ ಬಿಸಿಸಿಐ, ಬೆಂಗಳೂರು ಸಮೀಪ ದೇವನಹಳ್ಳಿಯಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಎಕ್ಸಲೆನ್ಸ್ ಸೆಂಟರ್ (ಉತ್ಕೃಷ್ಟತಾ ಕೇಂದ್ರ) ಅನ್ನು ನಿರ್ಮಿಸಿದೆ. 40 ಎಕರೆ ಜಾಗವನ್ನು ಖರೀದಿಸಿ ಅಲ್ಲಿ ನಿರ್ಮಾಣಗೊಂಡಿರುವ ಎಕ್ಸಲೆನ್ಸ್ ಸೆಂಟರನ್ನು ಶನಿವಾರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಉದ್ಘಾಟಿಸಿದ್ದರು. ಭಾನುವಾರ ಆಯ್ದ ಕೆಲ ಮಾಧ್ಯಮ ಸಂಸ್ಥೆಗಳನ್ನು ಬಿಸಿಸಿಐ, ತನ್ನ ಹೊಸ ಕೇಂದ್ರವನ್ನು ವೀಕ್ಷಿಸಲು ಆಹ್ವಾನಿಸಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ 'ಕನ್ನಡಪ್ರಭ' ಸಹ ಬಿಸಿಸಿಐ ಎಕ್ಸಲೆನ್ಸ್ ಸೆಂಟರ್‌ಗೆ ಭೇಟಿ ನೀಡಿ, ಅತ್ಯುತ್ತಮ ವ್ಯವಸ್ಥೆಗಳ ಪ್ರತ್ಯಕ್ಷ ಅನುಭವ ಪಡೆಯಿತು.

3 ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನಗಳು ಒಂದೇ ಕಾಪೌಂಡ್‌ನೊಳಗೆ ಇದ್ದು, ನೆಟ್‌ನಲ್ಲಿ 45 ಸೇರಿ ಒಟ್ಟು 80ಕ್ಕೂ ಹೆಚ್ಚು ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಭಾರತ ತಂಡ ಆ ದೇಶದ ಪಿಚ್‌ಗಳಿಗೆ ತಮ್ಮ ಆಟ ಸರಿಹೊಂದಿಕೊಳ್ಳುವಂತೆ ಸಿದ್ಧತೆ ನಡೆಸಬಹುದಾಗಿದೆ.

I am delighted to announce the launch of the Centre of Excellence by . The state-of-the-art facility features three world-class playing grounds, a swimming pool, a pavilion, and advanced training, recovery, and medical amenities. This initiative will help current and future… pic.twitter.com/Piudtr1AQN

— Jay Shah (@JayShah)

Latest Videos

ನಿವೃತ್ತಿ ಬೆನ್ನಲ್ಲೇ ಚೆನ್ನೈಗೆ ಶಾಕ್ ಕೊಟ್ಟ ಡ್ವೇನ್ ಬ್ರಾವೋ!

3 ಗೌಂಡ್‌ಗಳ ಪೈಕಿ ಮೊದಲನೆಯದ್ದು ಗೌಂಡ್ 'ಎ', ಇದರ ಬೌಂಡರಿ ಅಳತೆ 85 ಮೀ. ಇದ್ದು, ಮುಂಬೈನಿಂದ ತರಿಸಿದ ಕೆಂಪು ಮಣ್ಣಿನಿಂದ 13 ಪಿಚ್ ಗಳನ್ನು ಸಿದ್ಧಪಡಿಸಲಾಗಿದೆ. ಈ ಪಿಚ್‌ಗಳು ಉತ್ತಮ ಬೌನ್ ಹೊಂದಿರಲಿವೆ. ಇತ್ತೀಚೆಗೆ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಥದ್ದೇ ಪಿಚ್ ಬಳಕೆ ಮಾಡಲಾಗಿತ್ತು. ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಬೌನ್ಸಿ ಪಿಚ್‌ಗಳಿಗೆ ಅಗತ್ಯವಿರುವ ಸಿದ್ಧತೆ ನಡೆಸಲು ಅನುಕೂಲವಾಗಲಿದೆ.

ಈ ಮೈದಾನಕ್ಕೆ ಹೆರಿಂಗ್‌ಬೋನ್ ಒಳಚರಂಡಿ ವ್ಯವಸ್ಥೆ (ಸಬ್ -ಏರ್ ಮಾದರಿ ರೀತಿ) ಇದ್ದು, ಫ್ಲಡ್ ಲೈಟ್ಸ್ ಸಹ ಅಳವಡಿಕೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ತುರ್ತಾಗಿ ಈ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಬಹುದಾಗಿದೆ.

ಪಿಚ್‌ಗೆ ಮಂಡ್ಯದ ಮಣ್ಣು ಬಳಕೆ!

ಇನ್ನು 'ಬಿ' ಹಾಗೂ 'ಸಿ' ಗೌಂಡ್‌ಗಳನ್ನು ಪ್ರಧಾನವಾಗಿ ಅಭ್ಯಾಸ ಪಂದ್ಯಗಳಿಗೆ ಬಳಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ದೇಸಿ ಪಂದ್ಯಗಳಿಗೆ ಈ ಮೈದಾನಗಳನ್ನು ಬಳಕೆ ಮಾಡಬಹುದಾಗಿದೆ. ಈ ಮೈದಾನಗಳ ಬೌಂಡರಿ ಅಳತೆ 75 ಮೀ. ಇದೆ. ಇನ್ನು ಮಂಡ್ಯದ ಸ್ಥಳೀಯ ಮಣ್ಣು ಹಾಗೂ ಒಡಿಶಾದ ಕಲಹಂಡಿಯಲ್ಲಿ ಹತ್ತಿ ಬೆಳೆಯಲು ಬಳಸುವ ಕಪ್ಪು ಮಣ್ಣನ್ನು ತರಿಸಿ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ.

ನೆಟ್ಸ್‌ನಲ್ಲಿವೆ 45 ಪಿಚ್‌ಗಳು

ಆಟಗಾರ ನೆಟ್ಸ್‌ ಅಭ್ಯಾಸಕ್ಕೆ 45 ಪಿಚ್ ಸಿದ್ಧಪಡಿಸಲಾಗಿದೆ. ಇವುಗಳನ್ನು 9 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದೊಂದು ವಿಭಾಗದಲ್ಲೂ ಪಿಚ್‌ಗಳ ವರ್ತನೆ ಬೇರೆ ಬೇರೆ ರೀತಿ ಇರಲಿದೆ. ಹೊರಾಂಗಣದಲ್ಲಿ ಫೀಲ್ಡಿಂಗ್ ಅಭ್ಯಾಸಕ್ಕೆಂದೇ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. 6 ರನ್ನಿಂಗ್ ಟ್ರ್ಯಾಕ್‌ಗಳಿದ್ದು, ನೈಜ ಹುಲ್ಲು ಹಾಗೂ ಇಟಲಿಯಿಂದ ತರಿಸಿದ ಮೊಂಡೊ ಕಂಪನಿಯ ಸಿಂಥಟಿಕ್ ಪದಾರ್ಥದಿಂದ ಕೂಡಿವೆ.

ಎಕ್ಸಲೆನ್ಸ್ ಸೆಂಟರ್‌ನಲ್ಲೇ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಫಿಟೈಸ್ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಆಟಗಾರ ಗಾಯಗೊಂಡರೂ ಈ ಕೇಂದ್ರಕ್ಕೆ ಬರಬೇಕಿದ್ದು, ಇಲ್ಲಿಯೇ ಎಲ್ಲಾ ರೀತಿಯ ಚಿಕಿತ್ಸೆ ದೊರೆಯಲಿದೆ. ಫಿಸಿಯೋಥೆರಪಿ ಕೇಂದ್ರ, ಜಿಮ್, ಮೆಡಿಸಿನ್ ಲ್ಯಾಬ್, ಕ್ಲೀಪಿಂಗ್ ಪಾಡ್ಜ್‌ಗಳು ಇವೆ. ಮುಂಬರುವ ದಿನಗಳಲ್ಲಿ ಭಾರತೀಯ ಒಲಿಂಪಿಕ್ ಅಥ್ಲೆಟ್‌ಗಳಿಗೂ ಈ ಕೇಂದ್ರದಲ್ಲಿ ಅಭ್ಯಾಸ ನಡೆಸಲು ಅವಕಾಶ ಮಾಡಿಕೊಡುವುದಾಗಿ ಜಯ್ ಶಾ ತಿಳಿಸಿದ್ದಾರೆ.

ಒಳಾಂಗಣ ಅಭ್ಯಾಸಕ್ಕೆ 8 ಪಿಚ್!

ಹೊರಾಂಗಣದಂತೆಯೇ ಒಳಾಂಗಣ ಅಭ್ಯಾಸಕ್ಕೆ ಸಿದ್ದಗೊಂಡಿರುವ ವ್ಯವಸ್ಥೆಯೂ ವಿಶ್ವ ದರ್ಜೆಯದ್ದಾಗಿದ್ದು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಿಂದ ತರಿಸಿದ 8 ಟರ್ಫ್‌ ಪಿಚ್‌ಗಳನ್ನು ಅಳವಡಿಸಲಾಗಿದೆ.
 

click me!