WCT final:ಟೀಂ ಇಂಡಿಯಾಗೆ ಕಾಡಿದ ಬ್ಯಾಟಿಂಗ್ ವೈಫಲ್ಯ; 217 ರನ್‌ಗೆ ಆಲೌಟ್

By Suvarna NewsFirst Published Jun 20, 2021, 6:43 PM IST
Highlights
  • ಅಜಿಂಕ್ಯ ರಹಾನೆ , ವಿರಾಟ್ ಕೊಹ್ಲಿ ಹೋರಾಟ ಸಾಕಾಗಲಿಲ್ಲ
  • ಜಡ್ಡು, ಅಶ್ವಿನ್ ಬ್ಯಾಟಿಂಗ್ ಹೆಚ್ಚು ಹೊತ್ತು ಇರಲಿಲ್ಲ
  • ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 217 ರನ್‌ಗೆ ಆಲೌಟ್

ಸೌಥಾಂಪ್ಟನ್(ಜೂ.20):  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಹೋರಾಟ ನಡೆಸಿದರೂ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ದಾಳಿಗೆ ಕಠಿಣ ಹೋರಾಟ ನಡೆಸಿದ ಕೊಹ್ಲಿ ಸೈನ್ಯ ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್ ಸಿಡಿಸಿ ಆಲೌಟ್ ಆಗಿದೆ. 

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್

ಮೊದಲ ದಿನ ಮಳೆಗೆ ಆಹುತಿಯಾದರೆ, 2ನೇ ದಿನ ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿತ್ತು. ಮಳೆ ಕಾರಣ ಮೊದಲು ಬ್ಯಾಟಿಂಗ್ ಅತ್ಯಂತ ಸವಾಲಿನದ್ದೇ ಆಗಿತ್ತು. ಆದರೆ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ರೋಹಿತ್ 34 ರನ್ ಸಿಡಿಸಿದರೆ, ಗಿಲ್ 28 ರನ್ ಸಿಡಿಸಿದರು. ಚೇತೇಶ್ವರ ಪೂಜಾರ 8 ರನ್ ಸಿಡಿಸಿ ಔಟಾದರು.

ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಹೋರಾಟದಿಂದ ಭಾರತ ಸುಧಾರಿಸಿಕೊಂಡಿತು. 2ನೇ ದಿನ ಮಂದ ಬೆಳಕಿನ ಕಾರಣ ಬಹುಬೇಗನೆ ಅಂತ್ಯಗೊಂಡಿತ್ತು. 3ನೇ ದಿನದಾಟ ಆರಂಭದಲ್ಲಿ 44 ರನ್ ಸಿಡಿಸಿದ್ದ ಕೊಹ್ಲಿ ವಿಕೆಟ್ ಪತನಗೊಂಡಿತ್ತು. ಇತ್ತ ಅಜಿಂಕ್ಯ ರಹಾನ 49 ರನ್ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು.

ರಿಷಬ್ ಪಂತ್ ಕೇವಲ 4 ರನ್ ಸಿಡಿಸಿ ಔಟಾದರು. ಆದರೆ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಹೋರಾಟ ನೀಡಿದರು. ಅಶ್ವಿನ್ 27 ರನ್ ಕಾಣಿಕೆ ನೀಡಿದರು. ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಅಂತಿಮವಾಗಿ ರವೀಂದ್ರ ಜಡೇಜಾ 15 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 217 ರನ್‌ಗೆ ಆಲೌಟ್ ಆಯಿತು.

click me!