ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ಅಭೂತಪೂರ್ವ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ನ.26]: ಕ್ರಿಕೆಟ್ ಕಾಶಿಯೆಂದೇ ಕರೆಯಲ್ಪಡುವ ಈಡನ್ ಗಾರ್ಡನ್ಸ್ನಲ್ಲಿ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಅಭೂತಪೂರ್ವ ಯಶಸ್ಸು ಕಂಡಿದೆ. ಪಿಂಕ್ ಬಾಲ್ ಟೆಸ್ಟ್ ಕೇವಲ ಕೋಲ್ಕತಾಗಷ್ಟೇ ಸೀಮಿತಗೊಳಿಸದೆ ದೇಶದೆಲ್ಲೆಡೆ ಆಯೋಜಿಸುವ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಆ ಪ್ರಯತ್ನ ನಡೆಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭರವಸೆ ನೀಡಿದ್ದಾರೆ.
ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!
undefined
ಐತಿಹಾಸಿಕ ಟೆಸ್ಟ್‌ಗೆ ಸಾಕ್ಷಿಯಾದ ಈಡನ್ ಗಾರ್ಡನ್ಸ್ನಲ್ಲಿ ಪಂದ್ಯ ನಡೆದ ಮೂರು ದಿನವೂ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಡನ್ನಲ್ಲಿ ಸೇರಿದ್ದು, ಗತಕಾಲದ ಟೆಸ್ಟ್ ಕ್ರಿಕೆಟ್ ವೈಭವ ಮರುಸೃಷ್ಟಿಯಾಗಿದೆ. ‘ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ವಿಭಿನ್ನ ಪ್ರಚಾರ ನಡೆಸಿದೆವು. ಏಕದಿನ ವಿಶ್ವಕಪ್ ಫೈನಲ್ಗೆ ಸೇರಿದಂತೆ ಜನಸ್ತೋಮ ನೆರೆದಿತ್ತು. 3ನೇ ದಿನ ಪಂದ್ಯ ಬೇಗನೆ ಮುಗಿದಿದ್ದರೂ ಎಲ್ಲಾ ಟಿಕೆಟ್ ಮಾರಾಟವಾಗಿದೆ’ ಎಂದು ಗಂಗೂಲಿ ತಿಳಿಸಿದರು.
ಇದು ದಾದಾ ಪಡೆ ಎಂದು ಗುಡುಗಿದ ವಿರಾಟ್..!
ಕಿವೀಸ್ನಲ್ಲಿ ಪಿಂಕ್ ಟೆಸ್ಟ್?
ಮುಂದಿನ ಫೆಬ್ರವರಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಯಶಸ್ಸಿನಿಂದ ಕಿವೀಸ್ನಲ್ಲಿ ಭಾರತ ಹಗಲು-ರಾತ್ರಿ ಟೆಸ್ಟ್ ಆಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ, ‘ಸದ್ಯ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಕಿವೀಸ್ ಸರಣಿಗೆ ಸಮಯವಿದೆ. ನೋಡೋಣ’ ಎಂದು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಸಲ್ಯೂಟ್!
ವಾರ್ಷಿಕ ಸಭೆಯಲ್ಲಿ ಕೂಲಿಂಗ್ ನಿಯಮ ಚರ್ಚೆ:
ಪದಾಧಿಕಾರಿಗಳ ವಯೋಮಿತಿ 70 ವರ್ಷವನ್ನು ಇಳಿಸುವ ಉದ್ದೇಶವಿಲ್ಲ. ಆದರೆ ಕೂಲಿಂಗ್ ಆಫ್ ನಿಯಮ ತಿದ್ದುಪಡಿ ಬಗ್ಗೆ ಡಿ.1ಕ್ಕೆ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದು ಖಚಾಂಜಿ ಅರುಣ್ ಧುಮಾಲ್ ತಿಳಿಸಿದರು. ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಅಥವಾ ಬಿಸಿಸಿಐನಲ್ಲಿ 6 ವರ್ಷ ಸೇವೆ ಸಲ್ಲಿಸಿದ ಬಳಿಕ 3 ವರ್ಷ ಕೂಲಿಂಗ್ ಆಫ್ ಸಮಯ ಎಂದು ತಿದ್ದುಪಡಿ ಮಾಡುವ ಸಾಧ್ಯತೆಯಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರಾವಧಿ ಸದ್ಯ ಕೇವಲ 9 ತಿಂಗಳು, ಈ ತಿದ್ದುಪಡಿಯಿಂದ ಗಂಗೂಲಿ ಬಿಸಿಸಿಐನಲ್ಲಿ 3 ವರ್ಷಗಳ ತನಕ ಸೇವೆ ಸಲ್ಲಿಸಬಹುದು. ಗಂಗೂಲಿಗಿದು ಮೊದಲ ವಾರ್ಷಿಕ ಸಾಮಾನ್ಯ ಸಭೆಯಾಗಿದ್ದು, 12 ತಿದ್ದುಪಡಿಗಳನ್ನು ಕಾರ್ಯದರ್ಶಿ ಜಯ್ ಶಾ ಪ್ರಸ್ತಾಪಿಸಿದ್ದಾರೆ.
ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: