ಕ್ಯಾಪ್ಟನ್ಸಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಮಹಾಎಡವಟ್ಟು..!

Published : Jun 14, 2022, 06:16 PM ISTUpdated : Jun 14, 2022, 07:59 PM IST
 ಕ್ಯಾಪ್ಟನ್ಸಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಮಹಾಎಡವಟ್ಟು..!

ಸಾರಾಂಶ

ಎಲ್ಲಾ ವಿಚಾರದಲ್ಲ ಪರ್ಫೆಕ್ಟ್ ಆಗಿ ನಿರ್ಧಾರ ಮಾಡುವ ಬಿಸಿಸಿಐ, ಕ್ಯಾಪ್ಟನ್ಸಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆಯೇ ಎನ್ನುವ ಅನುಮಾನ ಕಾಡಿದೆ. ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ಗಾಯದಿಂದಾಗಿ ಹಿಂದೆ ಸರಿದಾಗ, ರಿಷಭ್ ಪಂತ್ ಅವರನ್ನು ನಾಯಕರನ್ನಾಗಿ ಘೋಷಣೆ ಮಾಡಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು.  

ಬೆಂಗಳೂರು (ಜೂನ್ 14): ಪರ್ಫೆಕ್ಷನ್​​​ಗೆ ಇನ್ನೊಂದು ಹೆಸರೇ ಬಿಸಿಸಿಐ. ಈ ಕಾರಣದಿಂದಲೇ ಬಿಸಿಸಿಐ ಇಂದು ವಿಶ್ವ ಕ್ರಿಕೆಟ್​​​ನ ಶ್ರೀಮಂತ ಕ್ರಿಕೆಟ್​ ಮಂಡಳಿಯಾಗಿ ಬೆಳೆದು ನಿಂತಿದೆ. ಆದ್ರೆ ಇಂತಹ ದೈತ್ಯ ಕ್ರಿಕೆಟ್ ಮಂಡಳಿ ಕ್ಯಾಪ್ಟನ್ಸಿ ಆಯ್ಕೆ ವಿಚಾರದಲ್ಲಿ ಮಾತ್ರ ದೊಡ್ಡ ಪ್ರಮಾದವೆಸಗಿದೆ. ಯಾವ ಮಾನದಂಡದಲ್ಲಿ ನಾಯಕರನ್ನ ನೇಮಿಸ್ತಿದೆ ಅನ್ನೋದೇ ಯಾರಿಗೂ ತಿಳಿತಿಲ್ಲ. ರೋಹಿತ್​ ಶರ್ಮಾಗೆ ರೆಸ್ಟ್​ ನೀಡಿದ್ದರಿಂದ ಕೆಎಲ್ ರಾಹುಲ್ ಆಫ್ರಿಕಾ ಸರಣಿಗೆ ನಾಯಕರಾಗಿ ನೇಮಕಗೊಂಡಿದ್ರು. ಆದ್ರೆ ಇಂಜುರಿಯಿಂದಾಗಿ ಟೂರ್ನಿಗೂ ಮುನ್ನವೇ ಹೊರಬಿದ್ರು. ಬಳಿಕ ಬಿಸಿಸಿಐ ರಿಷಬ್​​ ಪಂತ್​ರನ್ನ ನಾಯಕರನ್ನಾಗಿ ನೇಮಿಸಿತು. ಈ ನಿರ್ಧಾರವೇ ಹಲವರ ಕಣ್ಣು ಕೆಂಪಾಗಿಸಿದೆ. 

ತಂಡದಲ್ಲಿ ಪಂತ್​ಗಿಂತ ಮೂವರು ಸೀನಿಯರ್ ಆಟಗಾರರಿದ್ರು. ಅವರಿಗೆ ಕ್ಯಾಪ್ಟನ್ಸಿ ನೀಡಬಹುದಿತ್ತು. ಅದನ್ನ ಬಿಟ್ಟು ಹಿಂದೆ ಮುಂದೆ ನೋಡದೇ ಪಂತ್​ಗೆ ಮಣೆ ಹಾಕ್ತು. ಪರಿಣಾಮ ಆಫ್ರಿಕಾ ವಿರುದ್ಧ ಸತತ 2 ಟಿ20 ಪಂದ್ಯದಲ್ಲಿ ಸೋತು ಸುಣ್ಣವಾಗಿದೆ. ಸರಣಿ ಕೈಚೆಲ್ಲುವ ಭೀತಿಯೂ ಎದುರಾಗಿದೆ. ಒಂದು ವೇಳೆ ಬಿಸಿಸಿಐ ಪಂತ್​ ಬದಲು ಈ ಮೂವರು ಸೀನಿಯರ್ಸ್​ಗಳಲ್ಲಿ ಒಬ್ಬರಿಗೆ ಪಟ್ಟ ಕಟ್ಟಿದ್ರೆ  ಆ ರಿಸಲ್ಟೇ ಬೇರೆ ಇರೋದು.

ಡೆಲ್ಲಿ ತಂಡಕ್ಕೆ ಶ್ರೇಯಸ್ಸು ತಂದ ಶ್ರೇಯಸ್​ಗಿಲ್ಲ ಚಾನ್ಸ್​:  ಶ್ರೇಯಸ್​​ ಅಯ್ಯರ್​​​​ ಐಪಿಎಲ್​​ನಲ್ಲಿ ಡೆಲ್ಲಿ ತಂಡವನ್ನ ಸಕ್ಸಸ್​ಫುಲ್​ ಆಗಿ ಮುನ್ನಡೆಸಿದ್ದಾರೆ. 8ನೇ ಸ್ಥಾನದಲ್ಲಿದ್ದ ತಂಡವನ್ನ 1 ಹಾಗೂ 2ನೇ ಸ್ಥಾನಕ್ಕೆ ತಂದಿಟ್ರು. ಈ ಬಾರಿ ಕೆಕೆಆರ್​​ ತಂಡದ ನಾಯಕರಾಗಿ ಯಶಸ್ಸು ಗಳಿಸಿಲ್ಲ ನಿಜ. ಆದ್ರೆ ಪಂತ್​​ಗೆ ಹೋಲಿಸಿದ್ರೆ ಶ್ರೇಯಸ್​​ಗೆ ನಾಯಕತ್ವದ ಅನುಭವ ಹೆಚ್ಚು. ಜೊತೆಗೆ ಟೀಮ್​ ಇಂಡಿಯಾದ ಸೀನಿಯರ್ ಪ್ಲೇಯರ್ ಕೂಡ. ಇಂತಹ ಆಟಗಾರನಿಗೆ ಆಫ್ರಿಕಾ ಸರಣಿಯಲ್ಲಿ ಕ್ಯಾಪ್ಟನ್ಸಿ ನೀಡುವ ಬದಲು ಪಂತ್​​ಗೆ ನೀಡಿ ಬಿಸಿಸಿಐ ಬಿಗ್ ಮಿಸ್ಟೇಕ್ಸ್​ ಮಾಡಿದೆ.

ರೋಹಿತ್ ಇಲ್ಲದೆ ಈ ವರ್ಷ ಒಂದೂ ಪಂದ್ಯ ಗೆದ್ದಿಲ್ಲ ಭಾರತ..!

ಚಾಂಪಿಯನ್​ ಶೂರ ಹಾರ್ದಿಕ್​​​ಗಿಲ್ಲ ಲಕ್​​: 
ಇನ್ನು ಶ್ರೇಯಸ್ ಅಯ್ಯರ್​ ಬಿಟ್ರೆ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾವನ್ನ ಮುನ್ನಡೆಸೋ ಕೆಪಾಸಿಟಿ ಹಾರ್ದಿಕ್​​​ ಪಾಂಡ್ಯಗಿತ್ತು. ಯಾಕಂದ್ರೆ ಈ ಸಲದ ಐಪಿಎಲ್​​ನಲ್ಲಿ ಗುಜರಾತ್ ಟೈಟನ್ಸ್​​ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಇವರ ಕೂಲ್​ ಕ್ಯಾಪ್ಟನ್ಸಿ ಬಗ್ಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗ್ತಿತ್ತು. ಆದ್ರೆ  ಇದ್ಯಾವುದರ ಪರಿವೆ ಇಲ್ಲ ಎಂಬಂತೆ ಬಿಸಿಸಿಐ ಪಂತ್​​ಗೆ ಕ್ಯಾಪ್ಟನ್ಸಿ ನೀಡಿ, ಇವರಿಗೆ ಉಪನಾಯಕನ ಜವಾಬ್ದಾರಿ ನೀಡ್ತು. 

ಸತತ 2 ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಭಾರತ !

ಕ್ಯಾಪ್ಟನ್ ಆಗುವ ಕೆಪಾಸಿಟಿ ಭುವಿಗೆ ಇದ್ದರೂ ರಿಜೆಕ್ಟ್​​​: 
ಹಾರ್ದಿಕ್​​​-ಶ್ರೇಯಸ್​​ ಬಿಟ್ರೆ ಭುವನೇಶ್ವರ್​ ಕುಮಾರ್​​​​ಗೆ ಕ್ಯಾಪ್ಟನ್ ಆಗುವ ಕೆಪಾಸಿಟಿ ಇತ್ತು. ಯಾಕಂದ್ರೆ ಭುವಿ ತಂಡದ ಸೀನಿಯರ್​ ಬೌಲರ್​​​​​. ಹೇಗೆ ತಂಡವನ್ನ ಲೀಡ್​ ಮಾಡಬೇಕು ಅನ್ನೋದು ಗೊತ್ತಿದೆ. ಇಷ್ಟಿದ್ರೂ ಹಿರಿಯ ಆಟಗಾರನನ್ನ ಕ್ಯಾಪ್ಟನ್ಸಿಯಿಂದ ಹೊರಗಿಟ್ಟು ಅನಾನುಭವಿ ಪಂತ್​​ಗೆ ಚಾನ್ಸ್​ ಕೊಟ್ಟಿದ್ದೇ ಭಾರತ ತಂಡ ಆಫ್ರಿಕಾ ವಿರುದ್ಧ ಕಳಪೆ ಪರ್ಫಾಮೆನ್ಸ್​​​​ ನೀಡಲು ಕಾರಣವಾಗ್ತಿದೆ. ಒಟ್ಟಿನಲ್ಲಿ ಬಿಸಿಸಿಐಯ ಬಿಗ್​ ಮಿಸ್ಟೇಕ್ಸ್ ನಿಂದ​​ ಭಾರತ ತವರಿನಲ್ಲಿ  ಹರಿಣಗಳ ವಿರುದ್ಧ ತಲೆತಗ್ಗಿಸುವಂತಾಗಿದೆ. ಮುಂದಾದ್ರು ಬಿಗ್​​ಬಾಸ್​ಗಳು ಈ ತಪ್ಪಿನಿಂದ ಎಚ್ಚೆತ್ತುಕೊಳ್ಳಲಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!