ರೋಹಿತ್ ಇಲ್ಲದೆ ಈ ವರ್ಷ ಒಂದೂ ಪಂದ್ಯ ಗೆದ್ದಿಲ್ಲ ಭಾರತ..!

By Suvarna NewsFirst Published Jun 14, 2022, 5:56 PM IST
Highlights

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಟೀಮ್ ಇಂಡಿಯಾ, ಇಂದು ಸರಣಿ ಉಳಿಸಿಕೊಳ್ಳುವ ಸಾಹಸ ಮಾಡಲಿದೆ. ಈ ನಡುವೆ ಭಾರತ ತಂಡದ ಬಗ್ಗೆಒಂದು ವಿಚಾರವನ್ನು ಇಲ್ಲಿ ತಿಳಿಸಲೇಬೇಕು. ಆರಂಭಿಕ ಆಟಗಾರ ರೋಹಿತ್ ಶರ್ಮ ಇಲ್ಲದೆ, ಟೀಮ್ ಇಂಡಿಯಾ ಈ ವರ್ಷ ಒಂದೂ ಪಂದ್ಯ ಗೆದ್ದಿಲ್ಲ.
 

ಮುಂಬೈ (ಜೂನ್ 14):  ಟೀಂ ಇಂಡಿಯಾ (Team India) ಸೋಲಿನ ಸುಳಿಗೆ ಸುಲುಕಿದೆ. ಆ ಸುಳಿಯಿಂದ ಹೊರಬರಲು ಇನ್ನಿಲ್ಲದ ಪ್ರಯತ್ನ ಪಡ್ತಿದೆ. ಆದ್ರೆ ಅದು ಸಾಧ್ಯವಾಗ್ತಿಲ್ಲ. ಸೌತ್ ಆಫ್ರಿಕಾ (South Africa) ವಿರುದ್ಧ ಸತತ ಎರಡು ಪಂದ್ಯ ಸೋತಿದೆ. ಇಂದು ಸೋತ್ರೆ ತವರಿನಲ್ಲಿ ಟಿ20 ಸರಣಿಯನ್ನೂ ಸೋಲಲಿದೆ. ಇದಕ್ಕೆ ರೋಹಿತ್​ ಶರ್ಮಾ (Rohit Sharma) ಅನುಪಸ್ಥಿತಿ ಕಾರಣ ಅಂತಿದ್ದಾರೆ. ಅಯ್ಯೋ, ರೋಹಿತ್ ಕ್ಯಾಪ್ಟನ್ ಆಗಿದ್ದು ಮೊನ್ನೆ ಮೊನ್ನೆ. ಅದಕ್ಕೂ ಮುಂಚೆ ಭಾರತೀಯರು ಸಾಕಷ್ಟು ಪಂದ್ಯ ಗೆದ್ದಿದ್ದಾರೆ. ಈಗ ರೋಹಿತ್​ ರೆಸ್ಟ್​ನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಭಾರತ ಹೇಗೆ ಸೋಲೋಕೆ ಸಾಧ್ಯ ಅಂತಿರಾ.

ರೋಹಿತ್ ನಾಯಕತ್ವದಲ್ಲಿ ಎಲ್ಲಾ ಗೆಲುವು: ಯೆಸ್, ಇದು ನಿಜ. 2022ರಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಆಡಿರುವ ಎಲ್ಲಾ ಪಂದ್ಯಗಳನ್ನ ಗೆದ್ದಿದೆ. ಆದ್ರೆ ಅದೇ ರೋಹಿತ್ ಅನುಪಸ್ಥಿತಿಯಲ್ಲಿ ಆಡಿರುವ ಎಲ್ಲಾ ಮ್ಯಾಚ್​ಗಳನ್ನೂ ಸೋತಿದೆ. ಇದು ಆಶ್ಚರ್ಯವಾದ್ರೂ ನಿಜ.

Latest Videos

ಈ ವರ್ಷ 18 ಪಂದ್ಯಗಳಲ್ಲಿ 11 ಜಯ.. 7 ಸೋಲು: ಹೌದು, ಈ ವರ್ಷ ಟೀಂ ಇಂಡಿಯಾ ಮೂರು ಮಾದರಿಯಲ್ಲಿ ಒಟ್ಟು 18 ಪಂದ್ಯಗಳನ್ನಾಡಿದೆ. ಅದಲ್ಲಿ 11 ಗೆದ್ದು ಏಳನ್ನ ಸೋತಿದೆ. ಗೆದ್ದ 11 ಪಂದ್ಯಗಳಲ್ಲೂ ರೋಹಿತ್​ ಶರ್ಮಾ ನಾಯಕ. ಸೋತ 7 ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ (KL Rahul) ಮತ್ತು ರಿಷಬ್ ಪಂತ್ (Rishabh Pant) ನಾಯಕರಾಗಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ಈ ವರ್ಷ ಒಂದೂ ಪಂದ್ಯ ಗೆದ್ದಿಲ್ಲ.

MEDIA RIGHTS ಬರೋಬ್ಬರಿ 44,075 ಕೋಟಿ ರೂಪಾಯಿಗೆ IPL ಪ್ರಸಾರ ಹಕ್ಕು ಮಾರಾಟ!

ಜನವರಿಯಲ್ಲಿ ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಸೋತಿದ್ದ ಭಾರತ, ಬಳಿಕ 2ನೇ ಟೆಸ್ಟ್​ ಅನ್ನ ಕೆಎಲ್ ರಾಹುಲ್ ಕ್ಯಾಪ್ಟನ್ಸಿಯಲ್ಲೂ ಸೋತಿತ್ತು. ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಗೆ ರಾಹುಲ್ ಕ್ಯಾಪ್ಟನ್ ಆಗಿದ್ದರು. ಮೂರಕ್ಕೆ ಮೂರು ಪಂದ್ಯವನ್ನೂ ಭಾರತ ಪರಾಭವಗೊಂಡಿತ್ತು. ಸದ್ಯ ಆಫ್ರಿಕಾ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳನ್ನ ಪಂತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸೋತಿದೆ.

IND vs SA ಕಾಲ್ಸೇನ್ ಅಬ್ಬರಕ್ಕೆ ತಲೆಬಾಗಿದ ಭಾರತ, 2ನೇ ಟಿ20ಯಲ್ಲಿ ಸೌತ್ ಆಫ್ರಿಕಾಗೆ ಗೆಲುವು!

ಭಾರತ ಗೆಲುವಿನ ಲಯಕ್ಕೆ ಮರಳಲು ರೋಹಿತ್ ಬರಬೇಕಾ:
 ಈ ಪ್ರಶ್ನೆ ಸದ್ಯಕ್ಕೆ ಉದ್ಭವಿಸಿದೆ. ಆಫ್ರಿಕಾ ವಿರುದ್ಧದ ಸತತ 2 ಟಿ20 ಪಂದ್ಯ ಸೋತಿರುವ ಟೀಂ ಇಂಡಿಯಾ, ಸರಣಿ ಸೋಲೋ ಭೀತಿಯಲ್ಲಿ. ಸರಣಿ ಸೋಲೇಕೆ, ವೈಟ್ ವಾಶ್ ಆದ್ರೂ ಆಶ್ಚರ್ಯವಿಲ್ಲ. ಹಾಗಾಗಿ ರೋಹಿತ್ ಶರ್ಮಾ ನಾಯಕನಾದ್ರೆ ಮಾತ್ರ ಗೆಲುವು ಸಿಗೋದು ಅಂತ ಅವರ ಫ್ಯಾನ್ಸ್ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಒಟ್ನಲ್ಲಿ ರೋಹಿತ್ ಅಂತಲ್ಲ, ಸೀನಿಯರ್ಸ್ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡ್ತಿರೋದಂತೂ ಸತ್ಯ.

click me!