ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಆರ್ ಅಶ್ವಿನ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇತ್ತ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿದೆ. ಇಷ್ಟೇ ಅಲ್ಲ ಮೊದಲೆರೆಡು ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಂ ಇಂಡಿಯಾ ಮುನ್ನಡಸಲಿದ್ದಾರೆ.
ಮುಂಬೈ(ಸೆ.18) ಏಷ್ಯಾಕಪ್ ಟ್ರೋಫಿ ಗೆದ್ದಿರುವ ಟೀಂ ಭಾರತ ಇದೀಗ ಸೆಪ್ಟೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ದ ದ್ವಿಪಕ್ಷೀಯ ಸರಣಿ ಆಡಲಿದೆ. 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡುತ್ತಿದೆ. ಆಸೀಸ್ ವಿರುದ್ಧ 3 ಏಕದಿನ ಪಂದ್ಯದ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಆರಂಭಿಕ 2 ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಇನ್ನು ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ.
ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಆರಂಭಿಕ 2 ಏಕದಿನ ಪಂದ್ಯಕ್ಕೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ಸ್ಪಿನ್ನರ್ ಆರ್ ಅಶ್ವಿನ್ ನಿಗದಿತ ಓವರ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಮೊದಲೆರೆಡು ಪಂದ್ಯದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾಗೆ ವಿಶ್ರಾಂತಿ ನೀಡಲಾಗಿದೆ.
ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!
ಆರಂಂಬಿಕ 2 ಪಂದ್ಯಕ್ಕೆ ಪ್ರಕಟಿಸಿದ ಟೀಂ ಇಂಡಿಯಾ:
ಕೆಎಲ್ ರಾಹುಲ್(ನಾಯಕ), ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ವಾಶಿಂಗ್ಟನ್ ಸುಂದರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
3ನೇ ಹಾಗೂ ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾ
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ,ಶುಬಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಲ್ ರಾಹುಲ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಪಂದ್ಯದ ಬಳಿಕವೂ ಹೃದಯ ಗೆದ್ದ ಸಿರಾಜ್, ಪ್ರಶಸ್ತಿ ಮೊತ್ತ ಲಂಕಾ ಗ್ರೌಂಡ್ ಸಿಬ್ಬಂದಿಗೆ ನೀಡಿದ ವೇಗಿ!
ಸೆಪ್ಟೆಂಬರ್ 22ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಆರಂಭಗೊಳ್ಳಲಿದೆ. ಇದಾದ ಬಳಿಕ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತದಲ್ಲಿ ಈ ಬಾರಿ ವಿಶ್ವಕಪ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ನವೆಂಬರ್ 23 ರಿಂದ ಆರಂಭಗೊಳ್ಳಲಿದ್ದು ಡಿಸೆಂಬರ್ 2ರ ವರೆಗೆ ನಡೆಯಲಿದೆ. ಒಟ್ಟು 5 ಟಿ20 ಪಂದ್ಯ ಆಡಲಿದೆ.
ಸೆ.22, ಮೊದಲ ಏಕದಿನ ಪಂದ್ಯ-ಮೊಹಾಲಿ (ಮಧ್ಯಾಹ್ನ 1.30ಕ್ಕೆ)
ಸೆ.24 , ಎರಡನೇ ಏಕದಿನ ಪಂದ್ಯ-ಇಂದೋರ್(ಮಧ್ಯಾಹ್ನ 1.30ಕ್ಕೆ)
ಸೆ.27, ಮೂರನೇ ಏಕದಿನ ಪಂದ್ಯ-ರಾಜ್‌ಕೋಟ್(ಮಧ್ಯಾಹ್ನ 1.30ಕ್ಕೆ)