ಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿ ಭಾರತಕ್ಕೆ ಏಷ್ಯಾಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ಮೊಹಮ್ಮದ್ ಸಿರಾಜ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿ ಮೊತ್ತವನ್ನು ಸಿರಾಜ್, ಶ್ರೀಲಂಕಾ ಗ್ರೌಂಡ್ ಸಿಬ್ಬಂದಿಗಳಿಗೆ ನೀಡಿದ್ದಾರೆ.
ಕೊಲೊಂಬೊ(ಸೆ.17) ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಪೈನಲ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಶ್ರೀಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಕೇವಲ 6.1 ಓವರ್‌ಗಳಲ್ಲಿ ಗುರಿ ತಲುಪಿ ಟ್ರೋಫಿ ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಗೆಲವಿನ ರೂವಾರಿ ಮೊಹಮ್ಮದ್ ಸಿರಾಜ್ ಪಂದ್ಯದಲ್ಲಿ ಮಾತ್ರವಲ್ಲ, ಪಂದ್ಯದ ಬಳಿಕವೂ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಸಿರಾಜ್, ಪ್ರಶಸ್ತಿ ಮೊತ್ತವನ್ನು ಶ್ರೀಲಂಕಾ ಗ್ರೌಂಡ್ ಸ್ಟಾಫ್‌ಗೆ ನೀಡಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊಹಮ್ಮದ್ ಸಿರಾಜ್, ಬಹುಮಾನ ಮೊತ್ತವನ್ನು ಶ್ರೀಲಂಕಾದ ಗ್ರೌಂಡ್ ಸಿಬ್ಬಂದಿಗಳಿಗೆ ನೀಡುವುದಾಗಿ ಘೋಷಿಸಿದರು. ಶ್ರೀಲಂಕಾದಲ್ಲಿನ ಬಹುತೇಕ ಎಲ್ಲಾ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಲಂಕಾ ಗ್ರೌಂಡ್ ಸಿಬ್ಬಂದಿ ಸತತವಾಗಿ ಕೆಲಸ ಮಾಡಿದ್ದಾರೆ. ಪಂದ್ಯ ಮತ್ತೆ ಆರಂಭಗೊಳ್ಳುವಂತೆ ಮಾಡಿದ್ದಾರೆ. ಅವರಿತ ಪರಿಶ್ರಮದ ಮೂಲಕ ಪಂದ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಸಿರಾಜ್ ಹೇಳಿದ್ದಾರೆ.
undefined
ಕೇವಲ 6.1 ಓವರ್‌ನಲ್ಲಿ ಗುರಿ ತಲುಪಿ ದಾಖಲೆ, 8ನೇ ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ!
ಶ್ರೀಲಂಕಾದಲ್ಲಿ ಏಷ್ಯಾಕಪ್ ಪಂದ್ಯ ಆಯೋಜಿಸಿದ ಕಾರಣಕ್ಕೆ ಬಿಸಿಸಿಐ ಹಾಗೂ ಏಷ್ಯಾ ಕ್ರಿಕೆಟ್ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿತ್ತು. ಶ್ರೀಲಂಕಾದಲ್ಲಿ ಮಳೆ ಸಮಯ ಅನ್ನೋದು ಗೊತ್ತಿದ್ದರೂ ಭಾರತದ ಒತ್ತಡದ ಮೇರೆಗೆ ಪಂದ್ಯ ಆಯೋಜಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಕೆಲ ಪಂದ್ಯ ಮೀಸಲು ದಿನದಲ್ಲಿ ಸಂಪೂರ್ಣಗೊಂಡಿತ್ತು.
ಫೈನಲ್ ಪಂದ್ಯಕ್ಕೂ ಮಳೆ ವಕ್ಕರಿಸಿತ್ತು. ಲಂಕಾದಲ್ಲಿ ಆಯೋಜಿಸಿದ ಬಹುತೇಕ ಎಲ್ಲಾ ಪಂದ್ಯಗಳು ಮಳೆಗೆ ಸಿಲುಕಿದೆ. ಪಂದ್ಯ ವಿಳಂಬಗೊಂಡಿದೆ. ಫಲಿತಾಂಶ ಬದಲಾಗಿದೆ. ಇದರ ನಡುವೆ ಶ್ರೀಲಂಕಾ ಕ್ರೀಡಾಂಗಣ ಸಿಬ್ಬಂದಿಗಳು ಕಾರ್ಯ ಮೆಚ್ಚಲೇ ಬೇಕು. ಮಳೆ ನಿಂತ ತಕ್ಷಣವೇ ಮೈದಾನವನ್ನು ಆಟಕ್ಕೆ ಸಜ್ಜುಗೊಳಿಸಿ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ತಮ್ಮ ಪಂದ್ಯ ಶ್ರೇಷ್ಠ ಮೊತ್ತ ಸಿಬ್ಬಂದಿಗಳಿಗೆ ವಿತರಿಸಿದರೆ, ಇದಕ್ಕೂ ಮೊದಲು ಏಷ್ಯಾ ಕ್ರಿಕೆಟ್ ಸಮಿತಿ ಅಧ್ಯಕ್ಷ ಜಯ್ ಶಾ, 50,000 ಅಮೆರಿಕನ್ ಡಾಲರ್ ಮೊತ್ತ ಹಣವನ್ನು ಕೊಲೊಂಬೊ ಕ್ರೀಡಾಂಗಣ ಸಿಬ್ಬಂದಿಗಳಿಗೆ ಘೋಷಿಸಿದ್ದರು.
Mohammed Siraj ಲಂಕೆಗೆ ಬೆಂಕಿಯಿಟ್ಟ ಸಿರಾಜ್..! ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್