ಅಶ್ವಿನ್ ಇನ್, ಅಕ್ಸರ್ ಪಟೇಲ್ ಔಟ್, ವಿಶ್ವಕಪ್ ಟೂರ್ನಿಗೆ ಅಂತಿಮ ತಂಡ ಪ್ರಕಟ!

By Suvarna NewsFirst Published Sep 28, 2023, 7:49 PM IST
Highlights

ಅಕ್ಟೋಬರ್ 5 ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಭಾರತ ಆತಿಥ್ಯವಹಿಸಿರುವ ಕಾರಣ ಭಾರತ ತಂಡದ ಮೇಲೆ ಭಾರಿ ನಿರೀಕ್ಷೆಗಳಿದೆ.ಇದೀಗ ಬಿಸಿಸಿಐ ವಿಶ್ವಕಪ್ ಆಡಲಿರುವ ಅಂತಿಮ ಆಟಗಾರರ ಪಟ್ಟಿ ಪ್ರಕಟಿಸಿದೆ. ಆರ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದರೆ, ಅಕ್ಸರ್ ಪಟೇಲ್ ಹೊರಬಿದ್ದಿದ್ದಾರೆ. 
 

ಮುಂಬೈ(ಸೆ.27) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೌಂಟ್‌ಡೈನ್ ಆರಂಭಗೊಂಡಿದೆ. ಅಕ್ಟೋಬರ್ 5 ರಂದು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳುತ್ತಿದೆ. ಭಾರತ ಆತಿಥ್ಯವಹಿಸಿರುವ ವಿಶ್ವಕಪ್ ಟೂರ್ನಿಗೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಭಾರತವೇ ಆತಿಥ್ಯ ಕಾರಣ 2011ರ ರೀತಿಯಲ್ಲೇ  ಈ ಬಾರಿಯೂ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲಲಿದೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ. ಬಿಸಿಸಿಐ ಈಗಾಗಲೇ ವಿಶ್ವಕಪ್ ತಂಡ ಪ್ರಕಟಿಸಿದೆ. ಇಂಜುರಿ ಕಾರಣ ಅಥವಾ ಇತರಕಾರಣಗಳಿಂದ ತಂಡದಲ್ಲಿ ಬದಲಾವಣೆ ಮಾಡಿ ಅಂತಿಮ ತಂಡ ಘೋಷಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಬಿಸಿಸಿಐ ವಿಶ್ವಕಪ್ ಆಡಲಿರುವ ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಿದೆ. ಇಂಜುರಿಗೆ ತುತ್ತಾಗಿರುವ ಅಕ್ಸರ್ ಪಟೇಲ್ ತಂಡದಿಂದ ಹೊರಬಿದ್ದಿದ್ದಾರೆ. ಅಕ್ಸರ್ ಬದಲು ಆರ್ ಅಶ್ವಿನ್ ತಂಡ ಸೇರಿಕೊಂಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ(ಅಂತಿಮ ತಂಡ)
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್

2011ರ ವಿಶ್ವಕಪ್ ಗೆಲುವಿಗೆ ಧೋನಿ ಪಠಿಸಿದ್ದ ಮಂತ್ರ ಬಹಿರಂಗ ಪಡಿಸಿದ ಸೆಹ್ವಾಗ್!

ಆಸ್ಟ್ರೇಲಿಯಾ ವಿರುದ್ದದ ಸರಣಿ ಮೂಲಕ ಏಕದಿನ ಮಾದರಿಗೆ ಕಮ್‌ಬ್ಯಾಕ್ ಮಾಡಿದ ಆರ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿ ಆಯ್ಕೆ ಸಮಿತ ಗಮನಸೆಳೆದಿದ್ದರು. ಆಸೀಸ್ ವಿರುದ್ದದ 3ನೇ ಏಕದಿನ ಪಂದ್ಯಕ್ಕೆ ಅಕ್ಸರ್ ಪಟೇಲ್ ಆಯ್ಕೆ ಮಾಡಲಾಗಿತ್ತು. ಆದರೆ ಇಂಜುರಿ ಕಾರಣದಿಂದ ಪ್ಲೇಯಿಂಗ್ 11ನಿಂದ ಹೊರಬಿದ್ದಿದ್ದರು.

36 ವರ್ಷದ ಆರ್ ಅಶ್ವಿನ್ 2011ರ ವಿಶ್ವಕಪ್ ಹಾಗೂ 2015ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. 2015ರ ವಿಶ್ವಕಪ್ ಟೂರ್ನಿಯಲ್ಲಿ ಅಶ್ವಿನ್ 8 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದರು. 

ಇದೀಗ ಟೀಂ ಇಂಡಿಯಾ ಅಭ್ಯಾಸ ಪಂದ್ಯಕ್ಕಾಗಿ ಗುವ್ಹಾಟಿಗೆ ಬಂದಿಳಿದಿದೆ. ಸೆಪ್ಟೆಂಬರ್ 30 ರಂದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಇದಾದ ಬಳಿಕ ಟೀಂ ಇಂಡಿಯಾ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಲಿದೆ. ಅಕ್ಟೋಬರ್ 3 ರಂದು ನೆದರ್ಲೆಂಡ್ ವಿರುದ್ದ ಅಭ್ಯಾಸ ಪಂದ್ಯ ಆಡಲಿದೆ. ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.

Watch: ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರಿಗೆ ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ!

click me!