ದೇಸಿ ಕ್ರಿಕೆ​ಟ್‌ ಋುತು ಆರಂಭ: ರಣಜಿ ಟ್ರೋಫಿ ಟೂರ್ನಿಯ ವೇಳಾಪಟ್ಟಿ ಪ್ರಕಟ

Published : Apr 11, 2023, 09:42 AM IST
ದೇಸಿ ಕ್ರಿಕೆ​ಟ್‌ ಋುತು ಆರಂಭ: ರಣಜಿ ಟ್ರೋಫಿ ಟೂರ್ನಿಯ ವೇಳಾಪಟ್ಟಿ ಪ್ರಕಟ

ಸಾರಾಂಶ

2023-24ನೇ ಸಾಲಿನ ದೇಸಿ ಋತುವಿನ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ 2019-20ರ ಬಳಿಕ ಮೊದಲ ಬಾರಿ ದೇವ​ಧರ್‌ ಟ್ರೋಫಿ ಆಯೋಜನೆ 2024ರ ಜನವರಿ 5ರಿಂದ ಫೆಬ್ರವರಿ 19ರ ವರೆಗೆ ರಣಜಿ ಲೀಗ್ ಪಂದ್ಯ ಆಯೋಜನೆ

ನವ​ದೆ​ಹ​ಲಿ(ಏ.11): 2023-24ರ ದೇಸಿ ಋುತುವಿನ ವೇಳಾಪಟ್ಟಿಯನ್ನು ಬಿಸಿ​ಸಿಐ ಸಿದ್ಧಪಡಿಸಿದ್ದು ಜೂನ್ 28ಕ್ಕೆ ದುಲೀಪ್‌ ಟ್ರೋಫಿ​ಯೊಂದಿಗೆ ಋುತು ಆರಂಭ​ಗೊ​ಳ್ಳ​ಲಿದೆ. ಇದೇ ವೇಳೆ 2019-20ರ ಬಳಿಕ ಮೊದಲ ಬಾರಿ ದೇವ​ಧರ್‌ ಟ್ರೋಫಿ ಆಯೋ​ಜಿ​ಸಲು ಬಿಸಿ​ಸಿಐ ನಿರ್ಧ​ರಿ​ಸಿ​ದೆ.

6 ವಲ​ಯ​ಗಳ ತಂಡಗಳು ಪಾಲ್ಗೊ​ಳ್ಳುವ ದುಲೀಪ್‌ ಟ್ರೋಫಿ ಜುಲೈ 16ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದ್ದು, ಬಳಿಕ ಜುಲೈ 24ರಿಂದ ಆಗಸ್ಟ್ 3ರ ವರೆಗೆ ದೇವ​ಧರ್‌ ಟ್ರೋಫಿ ನಡೆ​ಯ​ಲಿದೆ. 2022-23ರ ಇರಾನಿ ಕಪ್‌ ಅಕ್ಟೋಬರ್ 1ರಿಂದ 5ರ ವರೆಗೆ ನಿಗ​ದಿ​ಯಾ​ಗಿದೆ. ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಅಕ್ಟೋಬರ್ 6ರಿಂದ ನವೆಂಬರ್ 6ರ ವರೆಗೆ ನಡೆ​ಯ​ಲಿದ್ದು, ವಿಜಯ್‌ ಹಜಾರೆ ಏಕ​ದಿನ ಟೂರ್ನಿ (Vijay Hazare Tournament) ನವೆಂಬರ್ 23ಕ್ಕೆ ಆರಂಭ​ಗೊಂಡು, ಡಿಸೆಂಬರ್ 15ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದೆ. ರಣಜಿ ಟ್ರೋಫಿ ಟೂರ್ನಿಯ (Ranji Trophy Tournament) ಲೀಗ್‌ ಹಂತದ ಪಂದ್ಯ​ಗಳು 2024ರ ಜನವರಿ 5ರಿಂದ ಫೆಬ್ರವರಿ 19ರ ವರೆಗೆ ನಡೆ​ಯ​ಲಿದೆ. ನಾಕೌಟ್‌ ಹಂತ ಫೆ.23ರಿಂದ ಮಾ.14ರ ವರೆಗೆ ನಡೆ​ಸು​ವು​ದಾಗಿ ಬಿಸಿ​ಸಿಐ (BCCI) ತಿಳಿ​ಸಿದೆ.

ಇನ್ನು, ಮಹಿ​ಳೆ​ಯ​ರ ಟಿ20 ಚಾಂಪಿ​ಯ​ನ್‌​ಶಿ​ಪ್‌ ಅಕ್ಟೋಬರ್ 19ರಿಂದ ನವೆಂಬರ್ 9, ಅಂತರ್‌ ವಲಯ ಟಿ20 ನವೆಂಬರ್ 24ರಿಂದ ಡಿಸೆಂಬ್ 4, ರಾಷ್ಟ್ರೀಯ ಮಹಿಳಾ ಏಕ​ದಿನ 2024ರ ಜನವರಿ 4ರಿಂದ 26ರ ವರೆಗೆ ನಡೆ​ಯ​ಲಿದೆ.

ಪ್ರಸಾರ ಹಕ್ಕು: ಬಿಸಿ​ಸಿ​ಐ​ಗೆ 10,000 ಕೋಟಿ ರುಪಾಯಿ ನಿರೀ​ಕ್ಷೆ​!

ಮುಂಬೈ: ಭಾರ​ತದ ದ್ವಿಪ​ಕ್ಷೀಯ ಸರ​ಣಿ​ಗಳ ಮುಂದಿನ 4 ವರ್ಷ​ಗಳ ಅವ​ಧಿಯ ಮಾಧ್ಯಮ ಹಕ್ಕು ಮಾರಾಟ ಮಾಡಲು ಬಿಸಿ​ಸಿಐ ಸಜ್ಜಾ​ಗಿದ್ದು, 10,000 ಕೋಟಿ ರು. ಬಂಪರ್‌ ನಿರೀ​ಕ್ಷೆ​ಯ​ಲ್ಲಿದೆ. ಈ ಬಗ್ಗೆ ಭಾನು​ವಾರ ಬಿಸಿ​ಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ​ಯಲ್ಲಿ ಚರ್ಚಿ​ಸ​ಲಾ​ಗಿದ್ದು, ಮುಂದಿನ ತಿಂಗಳು ಟೆಂಡರ್‌ ಕರೆ​ಯುವ ಸಾಧ್ಯತೆಯಿದೆ. 

ಗ್ಯಾಸ್‌ ಡೆಲಿವರಿ ಮ್ಯಾನ್‌ ಪುತ್ರ ರಿಂಕು ಸಿಂಗ್ ಐಪಿಎಲ್‌ ಸ್ಟಾರ್‌ ಆಗಿದ್ದು ಹೀಗೆ..

2018ರಲ್ಲಿ 5 ವರ್ಷ ಅವ​ಧಿಗೆ ಡಿಸ್ನಿ-ಸ್ಟಾರ್‌ ಪ್ರಸಾರ ಹಕ್ಕನ್ನು 6,138 ಕೋಟಿ ರು.ಗೆ ಖರೀದಿಸಿತ್ತು. ಆದರೆ ಈ ಬಾರಿ 4 ವರ್ಷಕ್ಕೆ ಒಪ್ಪಂದ ಮಾಡಿ​ಕೊಳ್ಳಲು ಬಿಸಿ​ಸಿಐ ನಿರ್ಧ​ರಿ​ಸಿದ್ದು, ಟೀವಿ ಹಾಗೂ ಡಿಜಿ​ಟಲ್‌ ಹಕ್ಕನ್ನು ಪ್ರತ್ಯೇಕವಾಗಿ ಮಾರಾಟ ಮಾಡ​ಲಿದೆ ಎಂದು ವರ​ದಿ​ಯಾ​ಗಿದೆ. ಪ್ರಸಾರ ಹಕ್ಕು ಖರೀ​ದಿಗೆ ಡಿಸ್ನಿ ಸ್ಟಾರ್‌, ವಯಾಕಾಂ 18, ಸೋನಿ-ಝೀ ನಡುವೆ ಪೈಪೋ​ಟಿ ಏರ್ಪ​ಡುವ ನಿರೀಕ್ಷೆ ಇದೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌: ಇಂದು ಕೋಚ್‌ಗಳ ಸಭೆ

ಬೆಂಗಳೂರು: ಭಾರತದ ಅಗ್ರ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದರೂ, ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಉಳಿದ ಕೋಚ್‌ಗಳು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮಂಗಳವಾರದಿಂದ ತಯಾರಿ ಆರಂಭಿಸಲಿದ್ದಾರೆ. ಜೂನ್ 7ರಿಂದ 11ರ ವರೆಗೂ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಪ್ರೇಲಿಯಾ ವಿರುದ್ಧ ಸೆಣಸಲಿದೆ. 

ಮಂಗಳವಾರ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಗಾಯಗೊಂಡಿರುವ ಪ್ರಮುಖ ಆಟಗಾರರಾದ ಜಸ್‌ಪ್ರೀತ್‌ ಬುಮ್ರಾ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು, ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರ ಕೆಲಸದ ಒತ್ತಡ, ಐಪಿಎಲ್‌ ವೇಳೆಯೇ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ನಡೆಸಬೇಕಿರುವ ಸಿದ್ಧತೆ ಬಗ್ಗೆ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರೆ, ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಹಾಗೂ ಇನ್ನಿತರ ಸಹಾಯಕ ಸಿಬ್ಬಂದಿ ಜೊತೆ ಚರ್ಚಿಸಲಿದ್ದಾರೆ. ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌