
ಢಾಕಾ(ಅ.27): ನಾಯಕ ಶಕಿಬ್ ಅಲ್ ಹಸನ್ ವಿರುದ್ಧ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ(ಬಿಸಿಬಿ) ಕಾನೂನು ಕ್ರಮಕ್ಕೆ ಮುಂದಾಗಿದೆ. ಟೆಲಿಕಾಂ ಸಂಸ್ಥೆ ‘ಗ್ರಾಮೀಣ್ಫೋನ್’ ಜೊತೆ ಶಕಿಬ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಶಕಿಬ್ ಕೇಂದ್ರ ಗುತ್ತಿಗೆ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಶಕಿಬ್‌ಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ
ಮಂಗಳವಾರ ಶಕಿಬ್‌ರನ್ನು ತನ್ನ ಪ್ರಚಾರ ರಾಯಭಾರಿಯೆಂದು ಟೆಲಿಕಾಂ ಸಂಸ್ಥೆ ಘೋಷಿಸಿತ್ತು. ಶಕಿಬ್ ನೇತೃತ್ವದಲ್ಲಿ ಬಾಂಗ್ಲಾ ಕ್ರಿಕೆಟಿಗರು ವೇತನ, ಸೌಲಭ್ಯಗಳ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಿಂದ ಪ್ರಥಮದರ್ಜೆ ಕ್ರಿಕೆಟಿಗರು ಲಾಭ ಪಡೆಯಲಿದ್ದಾರೆ. ಆದರೆ ಶಕಿಬ್ ಬಿಸಿಬಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!
ನ.3 ರಿಂದ ಭಾರತ ಪ್ರವಾಸ ಆರಂಭವಾಗಲಿದ್ದು, ಅ.30ರಂದು ಬಾಂಗ್ಲಾ ತಂಡ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. 3 ಟಿ20 ಹಾಗೂ 2 ಟೆಸ್ಟ್ ಪಂದ್ಯಕ್ಕಾಗಿ ಬಾಂಗ್ಲಾದೇಶ, ಭಾರತಕ್ಕೆ ಆಗಮಿಸುತ್ತಿದೆ.
ಭಾರತ vs ಬಾಂಗ್ಲಾದೇಶ ಸರಣಿ ವೇಳಾಪಟ್ಟಿ:
ನ.03, 1ನೇ ಟಿ20, ದೆಹಲಿ
ನ.07, 2ನೇ ಟಿ20, ರಾಜ್‌ಕೋಟ್
ನ.10, 3ನೇ ಟಿ20, ನಾಗ್ಪುರ
ನ.14 ರಿಂದ ನ.18, 1ನೇ ಟೆಸ್ಟ್, ಇಂಧೋರ್
ನ.22 ರಿಂದ ನ.26, 2ನೇ ಟೆಸ್ಟ್, ಕೋಲ್ಕತಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.