ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿಗಿದ್ದ ಹಲವು ಅಡೆ ತಡೆಗಳು ನಿವಾರಣೆಯಾದ ಬೆನ್ನಲ್ಲೇ, ಇದೀಗ ಧೂಳು ಹಾಗೂ ಆಮ್ಲಜನಕದ ಸಮಸ್ಯೆ ಎದುರಾಗಿದೆ. ಮೊದಲ ಪಂದ್ಯ ಆಯೋಜನೆಯೇ ಬಿಸಿಸಿಐ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನವದೆಹಲಿ(ಅ.27): ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟಿ20 ಸರಣಿ ನ.3ರಿಂದ ಆರಂಭವಾಗಲಿದೆ. ಆದರೆ ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯ ಆಯೋಜಕರ ತಲೆನೋವಿಗೆ ಕಾರಣವಾಗಿದೆ. ಇಲ್ಲಿನ ಫಿರೋಜ್ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಆದರೆ ಇಲ್ಲಿನ ಕಳಪೆ ಗುಣಮಟ್ಟದ ಆಮ್ಲಜನಕದಿಂದ ಆಟಗಾರರು, ಪ್ರೇಕ್ಷಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ
undefined
ದೆಹಲಿಯ ಅರುಣ್ ಜೇಟ್ಲಿ ಕೀಡಾಂಗಣದಲ್ಲಿ(ಫಿರೋಷ್ ಷಾ ಕೋಟ್ಲಾ ಮೈದಾನ) ಮೊದಲ ಪಂದ್ಯ ಆಯೋಜಿಸಲಾಗಿದೆ. ನವೆಂಬರ್ 3 ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ದೆಹಲಿಯಲ್ಲಿ ಧೂಳು ಹೆಚ್ಚಾಗಿದ್ದು, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಧೂಳಿನಿಂದ ಸಂಪೂರ್ಣ ದೆಹಲಿ ಮುಳುಹೋಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಬಾಲ್ ಕಾಣದಿರುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿದ ಬಾಂಗ್ಲಾದೇಶಕ್ಕೆ ಮತ್ತೊಂದು ಶಾಕ್!
ಡಿಸೆಂಬರ್ 2017ರ ಟೆಸ್ಟ್‌ನಲ್ಲಿ ಶ್ರೀಲಂಕಾ ಆಟಗಾರರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಅಂದಿನ ಆಮ್ಲಜನಕದ ಗುಣಮಟ್ಟ‘ಬಹಳ ಕಳಪೆ’ ಆಗಿತ್ತು. ಶ್ರೀಲಂಕಾ ಆಟಗಾರರು ಮುಖಗವಚ ಧರಿಸಿ ಮೈದಾನಕ್ಕೆ ಇಳಿದಿದ್ದರು. ಆದರೆ ಡೆಲ್ಲಿ ಟಿ20 ರಾತ್ರಿ ನಡೆಯಲಿದ್ದು, ಆಮ್ಲಜನಕದ ಸಮಸ್ಯೆಯಾಗದು ಎಂಬ ನಿರೀಕ್ಷೆಯೂ ಇದೆ.