ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಕ್ರಿಕೆಟ್ ಅಕಾಡೆಮಿ ತೆರೆಯಲು ಸಜ್ಜಾಗಿದ್ದಾರೆ. ದೇಶ-ವಿದೇಶದಲ್ಲಿ ಧೋನಿ ಕ್ರಿಕೆಟ್ ಅಕಾಡಮಿ ತಲೆಎತ್ತಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ರಾಂಚಿ(ಅ.27): ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭ ಧೋನಿ ಮೌನವಾಗಿ ತಮ್ಮ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿದ್ದಾರಂತೆ. ಕ್ರಿಕೆಟ್ನಿಂದ ಹಣ ಸಂಪಾದಿಸಿರುವ ಧೋನಿ, ಕ್ರಿಕೆಟ್ಗೂ ತಮ್ಮಿಂದ ಕೊಡುಗೆ ನೀಡಲು ಮುಂದಾಗಿದ್ದಾರೆ. ದೇಶದೆಲ್ಲೆಡೆ, ವಿದೇಶದಲ್ಲೂ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಧೋನಿ ಯೋಚಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.
ಮೊದಲ ಹಂತದಲ್ಲಿ ತಮ್ಮ ತವರು ರಾಂಚಿಯಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ತೆರೆಯಲು ಯೋಜನೆ ಹಾಕಿಕೊಂಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಬಾಲ್ಯದ ಗೆಳೆಯ, ಮ್ಯಾನೇಜರ್ ಮಿಹಿರ್ ದಿವಾಕರ್ ಅವರ ‘ಆರ್ಕಾ ಸ್ಪೋರ್ಟ್ಸ್ ರಾಂಚಿಯಲ್ಲಿ ಮುಂದಿನ 2 ವರ್ಷಗಳಲ್ಲಿ ಅಕಾಡೆಮಿ ಸ್ಥಾಪಿಸಲಿದೆ. ಇತ್ತೀಚೆಗೆ ಧೋನಿ ಇಂದೋರ್ನಲ್ಲಿ ಅಕಾಡೆಮಿ ತೆರೆದಿದ್ದು, ಶೀಘ್ರ ಸಿಲಿಗುರಿಯಲ್ಲೊಂದು ಕ್ರಿಕೆಟ್ ಅಕಾಡೆಮಿ ಆರಂಭಿಸಲಿದ್ದಾರೆ. ಅಲ್ಲದೆ ಡೆಲ್ಲಿ, ಪಾಟ್ನಾ, ಬೊಕಾರೊ, ನಾಗ್ಪುರ, ವಾರಣಾಸಿಯಲ್ಲಿ ಈಗಾಗಲೇ ಧೋನಿ ಅಕಾಡೆಮಿ ಆರಂಭವಾಗಿವೆ.
undefined
ಧೋನಿ ಪುಲ್‌ಅಫ್ಸ್‌ಗೆ ಅಭಿಮಾನಿಗಳು ಫಿದಾ
ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮಾಜಿ ನಾಯಕ ಎಂ.ಎಸ್ ಧೋನಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್ಸಿಎ)ಯಲ್ಲಿ 38ನೇ ವಯಸ್ಸಿನಲ್ಲಿ ಧೋನಿ, ಜಿಮ್ ಮಾಡುತ್ತಿರುವ ಇತ್ತೀಚೆಗಿನ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಧೋನಿ ನಾಲ್ಕು ಪುಲ್ಅಫ್ಸ್ ತೆಗೆಯುವುದನ್ನು ಕಾಣಬಹುದು. ಸ್ಟಂಫ್ಸ್ ಹಿಂದೆ ಧೋನಿ ಕೈ, ಕಾಲುಗಳನ್ನು ವೇಗವಾಗಿ ಸಂಚರಿಸುತ್ತಾರೆ. ನಾಯಕತ್ವದ ದಿನಗಳಿಂದಲೇ ಧೋನಿ ಫಿಟ್ನೆಸ್‌ಗೆ ಶೇ.100ರಷ್ಟುಆದ್ಯತೆ ನೀಡುತ್ತಲೇ ಬಂದಿದ್ದು, ಫಿಟ್ನೆಸ್ ಉಳಿಸಿಕೊಂಡಿದ್ದಾರೆ.
Secret behind those lightning fast stumpings and monstrous sixes revealed! giving us workout motivation!🔥❤
pic.twitter.com/cNykkYdwdN