ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತವಾಗುತ್ತಿದೆ. ಏಷ್ಯಾ ಇಲೆವೆನ್ ಟಿ20 ಪಂದ್ಯದಲ್ಲಿ ಧೋನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ, ಬಿಸಿಸಿಐಗೆ ಮನವಿ ಮಾಡಿದೆ.
ನವದೆಹಲಿ(ನ.27): 2020ರ ಮಾಚ್‌ರ್‍ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವನ್ ನಡುವಿನ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಆಡುವ ಸಾಧ್ಯತೆಯಿದೆ. ಧೋನಿ ಸಹಿತ 7 ಭಾರತೀಯ ಆಟಗಾರರನ್ನು ಟೂರ್ನಿಯಲ್ಲಿ ಆಡಲು ಅನುಮತಿ ನೀಡಬೇಕು ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ), ಬಿಸಿಸಿಐಗೆ ಮನವಿ ಮಾಡಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ಮದ್ವೆವರೆಗೆ ಪುರುಷರೆಲ್ಲರೂ ಸಿಂಹ: ಧೋನಿ ಮಾತಿನ ಮೋಡಿಗೆ ಸಲಾಂ!
undefined
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾರನ್ನು ಕಳಹಿಸಬೇಕೆಂದು ಬಿಸಿಬಿ ಮನವಿ ಮಾಡಿದೆ. ಮಾ.18ರಿಂದ 21ರ ವರೆಗೆ 3 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಏಷ್ಯಾ ಹಾಗೂ ವಿಶ್ವ ಇಲೆವನ್ 2 ಟಿ20 ಪಂದ್ಯಗಳಲ್ಲಿ ಎದುರಾಗಲಿವೆ. 2007ರಲ್ಲಿ ಏಷ್ಯಾ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ನಡುವಣ ನಡೆದಿದ್ದ ಟೂರ್ನಿಯಲ್ಲಿ ಧೋನಿ ಆಡಿದ್ದರು. ಅಂದು ಏಷ್ಯಾ ಇಲೆನೆನ್ 3-0 ಅಂತರದಲ್ಲಿ ಜಯಭೇರಿ ಬಾರಿಸಿತ್ತು.
ಇದನ್ನೂ ಓದಿ: ಹೊಸ ಇನಿಂಗ್ಸ್ ಶುರು ಮಾಡಿದ ಧೋನಿ; ರಾಂಚಿಯಲ್ಲಿ ಯುವಕರಿಗೆ ಕೋಚಿಂಗ್!
2019ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ತಂಡದಿಂದ ಧೋನಿ ತಾವಾಗಿಯೇ ಹೊರಗುಳಿದಿದ್ದಾರೆ. ಬಳಿಕ ವಿಂಡೀಸ್ ಪ್ರವಾಸದಿಂದಲೂ ಹೊರಗುಳಿದ ಧೋನಿ, ಸೇನಾ ತರಬೇತಿಯಲ್ಲಿ ಭಾಗವಹಿಸಿದ್ದರು. ನಂತರ ರಜೆ ವಿಸ್ತರಿಸಿದ ಧೋನಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸರಣಿಯಿಂದಲೂ ಹೊರಗುಳಿದರು. ಧೋನಿ ನವೆಂಬರ್ ತನಕ ರಜೆ ವಿಸ್ತರಿಸಿದ್ದು, ಕ್ರಿಕೆಟ್ ಹೊರತುಪಡಿಸಿ ಇತರೆ ಆಟಗಳನ್ನು ಆಡುವ ಮೂಲಕ ರಜೆಯ ಮಜಾದಲ್ಲಿದ್ದಾರೆ.