ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸ್ಟ್ಯಾಂಡ್ ಅನಾವರಣ ಮಾಡಲಾಗಿದೆ. ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿಕ ಜೇಟ್ಲಿ ಕ್ರೀಡಾಂಗಣಣದಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗನ ಸ್ಟ್ಯಾಂಡ್ ಅನಾವರಣಗೊಂಡಿದೆ.
ನವದೆಹಲಿ(ನ.26): ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ(ಫಿರೋಜ್ ಷಾ ಕೋಟ್ಲಾ) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಸ್ಟ್ಯಾಂಡ್ ಅನಾವರಣ ಮಾಡಲಾಗಿದೆ. ಸ್ಟ್ಯಾಂಡ್ ಅನಾವರಣ ಸಮಾರಂಭದಲ್ಲಿ ಸ್ವತಃ ಗಂಭೀರ್ ಕೂಡ ಹಾಜರಿದ್ದರು. ಇದು ನನ್ನ ಪಾಲಿನ ಶ್ರೇಷ್ಠ ದಿನ ಎಂದು ಗಂಭೀರ್ ಬಣ್ಣಿಸಿದರು.
ಇದನ್ನೂ ಓದಿ: ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಕೋಟ್ಲಾ ಮೈದಾನದಲ್ಲಿ ಕೊಹ್ಲಿ ಹೆಸರು..!.
ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್, ಭಾರತ ಕಂಡ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್. 2011ರ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ 97 ರನ್ ಸಿಡಿಸಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಗಂಭೀರ್ ಕೊಡುಗೆ ಪರಿಗಣಿಸಿ ಜೇಟ್ಲಿ ಕ್ರೀಡಾಂಗಣದಲ್ಲಿನ ಒಂದು ಸ್ಟ್ಯಾಂಡ್‌ಗೆ ಗಂಭೀರ್ ಹೆಸರಿಡಲಾಗಿದೆ.
Arun Jaitley Ji was like a father figure to me and it is a matter of great pride and pleasure to have a stand built in my name at the "Arun Jaitley Stadium". I thank the apex council, my fans, friends, and family who supported me at every step. pic.twitter.com/HcWilZlrho
— Gautam Gambhir (@GautamGambhir)ಇದನ್ನೂ ಓದಿ: ಧೋನಿ ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದ MSD!
ಅರುಣ್ ಜೇಟ್ಲಿ ನನಗೆ ತಂದೆಯ ಸಮಾನ. ಇದೀಗ ಅವರ ಕ್ರೀಡಾಂಗಣದಲ್ಲಿ ನನ್ನ ಸ್ಟ್ಯಾಂಡ್ ಅನಾವರಣ ಮಾಡಿರುವುದು ನನ್ನ ಹೆಮ್ಮೆ ಹಾಗೂ ಅಭಿಮಾನ. ದೆಹಲಿ ಕ್ರೆಕೆಟ್ ಸಂಸ್ಥೆಯ ಎಲ್ಲರಿಗೂ, ನನ್ನ ಅಭಿಮಾನಿಗಳು ಹಾಗೂ ಕುಂಟುಂಬದವರಿಗೆ ಧನ್ಯವಾದ ಎಂದು ಗಂಭೀರ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಜೇಟ್ಲಿ ಕ್ರೀಡಾಂಗಣದ ಸ್ಟಾಂಡ್‌ಗೆ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಗಂಭೀರ್ ಸ್ಟ್ಯಾಂಡ್ ಎಂದು ಹೆಸರಿಡಲಾಗಿದೆ.