ಸತತ ಟೀಕೆಗಳ ಬಳಿಕ ಸಂಜು ಸ್ಯಾಮ್ಸನ್‌ ಆಯ್ಕೆಗೆ ಮುಂದಾದ ಸಮಿತಿ!

By Web Desk  |  First Published Nov 26, 2019, 8:58 PM IST

ಟೀಂ ಇಂಡಿಯಾ ಆಯ್ಕೆ ಸಮಿತಿ ಕಳೆದೊಂದು ವರ್ಷದಿಂದ ಸತತ ಟೀಕೆ ಎದುರಿಸುತ್ತಿದೆ. ಸಂಜು ಸ್ಯಾಮ್ಸನ್ ಆಯ್ಕೆ ವಿಚಾರದಲ್ಲಿ ಸಮಿತಿ ಹೈರಾಣಾಗಿದೆ. ಇದೀಗ ಸಮಿತಿ ತನ್ನ ನಿರ್ಧಾರವನ್ನೇ ಬದಲಿಸಲು ಮುಂದಾಗಿದೆ.


ಮುಂಬೈ(ನ.26): ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ದ ಟೀಕೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಆಯ್ಕೆ ಸಮಿತಿ ಸದಸ್ಯರನ್ನು ತೆಗೆದುಹಾಕಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮನವಿ ಮಾಡಿದ್ದರು. ಮಾಜಿ ಸಂಸದ ಶಶಿ ತರೂರ್ ಸೇರಿದಂತೆ ಹಲವು ಮುಖಂಡರೂ ಕೂಡ  ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿರುದ್ದ ಹರಿಹಾಯ್ದಿದ್ದಾರೆ. ಸತತ ಟೀಕೆಗಳ ಬಳಿಕ ಸೆಲೆಕ್ಷನ್ ಕಮಿಟಿ ನಿರ್ಧಾರ ಬದಲಿಸಲು ಮುಂದಾಗಿದೆ.

ಇದನ್ನೂ ಓದಿ: ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!

Tap to resize

Latest Videos

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌, ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಿಂದ ಡ್ರಾಪ್ ಮಾಡಲಾಗಿತ್ತು. ಬಾಂಗ್ಲಾ ವಿರುದ್ಧದ 3 ಟಿ20 ಪಂದ್ಯದಲ್ಲಿ ಬೆಂಚ್ ಕಾದಿದ್ದ ಸ್ಯಾಮ್ಸನ್, ವಿಂಡೀಸ್ ಸರಣಿಯಿಂದ ಕೈಬಿಡಲಾಗಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಹಲವು ಟೀಕೆ ಎದುರಿಸಿದ ಆಯ್ಕೆ ಸಮಿತಿ ಇದೀಗ, ವಿಂಡೀಸ್ ಸರಣಿಗೆ ಸಂಜು ಸ್ಯಾಮ್ಸನ್‌ ಆಯ್ಕೆ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಬದಲಾಯ್ತು ಇಂಡೋ-ವಿಂಡೀಸ್ ಟಿ20 ಪಂದ್ಯಗಳ ವೇಳಾಪಟ್ಟಿ..!

ಹೆಚ್ಚುವರಿ ಆಟಗಾರನಾಗಿ ಸಂಜು ಸಾಮ್ಸನ್ ಆಯ್ಕೆ ಮಾಡಲು ಸಮಿತಿ ಮುಂದಾಗಿದೆ. ಈ ಮೂಲಕ ಟೀಕಾಕಾರ ಬಾಯಿ ಮುಚ್ಚಿಸಲು ಪ್ಲಾನ್ ಮಾಡಿದೆ. ಸಂಜು ಸಾಮ್ಸನ್ ಡ್ರಾಪ್ ಮಾಡಿರುವ ಕುರಿತು ಹಲವು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಮಾಜಿ ಸಂಸದ ಶಶಿ ತರೂರ್ ಕೂಡ ಆಯ್ಕೆ ಸಮಿತಿ ವಿರುದ್ದ ಅಸಮಧಾನ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ಆಯ್ಕೆ ಸಮಿತಿ ಸಂಜುಗೆ ಅವಕಾಶ ನೀಡಲು ಮುಂದಾಗಿದೆ.
 

click me!