ಬಾಂಗ್ಲಾ ಕ್ರಿಕೆಟಿಗ ಮುಶ್ರಫೆ ಮೊರ್ತಝಾ ಕುಟುಂಬ ಸದಸ್ಯರಿಗೆ ಕೊರೋನಾ!

By Suvarna NewsFirst Published Jun 15, 2020, 8:58 PM IST
Highlights

ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದೆ. ಅತ್ತ ಬಾಂಗ್ಲಾದೇಶದ ಮಾಜಿ ನಾಯಕ ಮುಶ್ರಫೆ ಮೊರ್ತಝಾ ಕುಟುಂಬ ಸದಸ್ಯರಿಗೆ ಕೊರೋನಾ ಮಹಾಮಾರಿ ಅಂಟಿಕೊಂಡಿದೆ. ಇದು ಕ್ರಿಕೆಟಿಗ ಮುಶ್ರಫೆ ಚಿಂತೆಗೆ ಕಾರಣವಾಗಿದೆ.

ಢಾಕ(ಜೂ.15): ಬಾಂಗ್ಲಾದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಬಾಂಗ್ಲಾ ಸರ್ಕಾರ ತೆಗೆದುಕೊಂಡಿರುವ ಹಲವು ಕ್ರಮಗಳ ಪ್ರಯೋಜನಕ್ಕೆ ಬರುತ್ತಿಲ್ಲ. ಇದೀಗ ಮಾಜಿ ನಾಯಕ ಮುಶ್ರಫೆ ಮೊರ್ತಝಾ ಅತ್ತೆಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಮುಶ್ರಫೆ ಪತ್ನಿ ತಾಯಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೋನಾ ವೈರಸ್ ತಗುಲಿರುವುದು ಖಚಿತಗೊಂಡಿದೆ.

ಟೀಂ ಇಂಡಿಯಾ ವಿದೇಶ ಪ್ರವಾಸ ರದ್ದು: ನಿರ್ಧಾರ ಪ್ರಕಟಿಸಿದ ಬಿಸಿಸಿಐ!

ಮುಶ್ರಫೆ ಮೊರ್ತಝಾ ಪತ್ನಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪತ್ನಿ ತಾಯಿ ಮನೆಯ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅತ್ತೆಗೆ ಕೊರೋನಾ ವೈರಸ್ ಕಾರಣ ಮುಶ್ರಫೆ ಮೊರ್ತಝಾ ಚಿಂತೆಗೆ ಒಳಗಾಗಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಮಹತ್ವದ ಸಭೆಗೆ ಗೈರಾಗಿದ್ದಾರೆ. 

ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ.

ಮಾರ್ಚ್ ತಿಂಗಳಲ್ಲಿ ಮನೆ ಸೇರಿಕೊಂಡ ಮುಶ್ರಫೆ ಮೊರ್ತಜಾ ಕೊರೋನಾ ವೈರಸ್ ವಿರುದ್ದ ಜಾಗೃತಿ ಮೂಡಿಸಿದ್ದರು. ಇನ್ನು ಬಾಂಗ್ಲಾದೇಶ ಲಾಕ್‌ಡೌನ್ ವೇಳೆ ಮೊರ್ತಜಾ ತನ್ನ ವೇತನದ ಅರ್ಧಭಾಗವನ್ನು ನಿರ್ಗತಿಕರಿಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಖರೀಗೆ ಮೀಸಲಿಟ್ಟದ್ದರು. 

ಇತ್ತೀಚೆಗೆ 20 ವರ್ಷದ ಗರ್ಭಿಣಿಗೆ ಮಹಿಳೆಗೆ ಮುಶ್ರಫೆ ಆರ್ಥಿಕ ಸಹಾಯ ಮಾಡಿದ್ದರು. ಬಾಂಗ್ಲಾದೇಶದಲ್ಲಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವು ಮುಶ್ರಫೆ ಮೊರ್ತಜಾ ಮನೆಯ ಸದಸ್ಯರಿಗೆ ಕೊರೋನಾ ಕಾಣಿಸಿಕೊಂಡಿರುವುದು ಕ್ರಿಕೆಟಿಗನ ಚಿಂತೆಗೆ ಕಾರಣವಾಗಿದೆ.
 

click me!